ಮುಳಗುಂದ: ಗದಗ ತಾಲೂಕಿನ ನೀಲಗುಂದ ಗ್ರಾಮದ ವೀರಭದ್ರೇಶ್ವರ ದೇವರ ನೂತನ ಗಡ್ಡಿ ತೇರಿನ ಜಾತ್ರಾ ಮಹೋತ್ಸವದ ಅಂಗವಾಗಿ ಆ. 17ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ ಎಂದು ನೀಲಗುಂದ ಗುದ್ನೇಶ್ವರ ಮಠದ ಪ್ರಭುಲಿಂಗದೇವರು ಹೇಳಿದರು.
ಆ. 18ರಂದು ಬೆಳಗ್ಗೆ ಶ್ರೀ ವೀರಭದ್ರೇಶ್ವರ ದೇವರಿಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆಯೊಂದಿಗೆ ವಿಶೇಷ ಪೂಜಾ ಕಾರ್ಯಕ್ರಮ ನಡೆಯುವುದು. ಆನಂತರ ಮಧ್ಯಾಹ್ನ 12ಕ್ಕೆ ದಾಸೋಹ ಕಾರ್ಯಕ್ರಮ, ಸಂಜೆ ಶ್ರೀಗಳ ಸಾನ್ನಿಧ್ಯದಲ್ಲಿ ನೂತನ ರಥೋತ್ಸವಕ್ಕೆ ಚಾಲನೆ ನಡೆಯಲಿದೆ.
ಸಂಜೆ ಸಂಜೆ 6 ಕ್ಕೆ ನಡೆಯುವ ಧಾರ್ಮಿಕ ಕಾರ್ಯಕ್ರಮದ ಸಾನ್ನಿಧ್ಯ ಶಿರಹಟ್ಟಿ ಸಂಸ್ಥಾನ ಮಠದ ಫಕೀರ ದಿಂಗಾಲೇಶ್ವರ ಸ್ವಾಮಿ, ಮುಕ್ತಿ ಮಂದಿರದ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮಿ, ಹೊಸಳ್ಳಿ ಬೂದೀಶ್ವರ ಸಂಸ್ಥಾನಮಠದ ಬೂದೀಶ್ವರ ಸ್ವಾಮಿ, ಅಗಡಿ, ಗುತ್ತಲ ಪ್ರಭುಸ್ವಾಮಿ ಮಠದ ಶ್ರೀ ಗುರುಸಿದ್ಧ ದೇವರು ಹಾಗೂ ಗದಗ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜವರು ವಹಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಡಿ.ಆರ್. ಪಾಟೀಲ, ವಿಪ ಸದಸ್ಯ ಎಸ್.ವಿ. ಸಂಕನೂರ, ಉತ್ತರ ಪ್ರದೇಶದ ಜಿಲ್ಲಾಧಿಕಾರಿ ಅರವಿಂದ ಎಂ. ಬಂಗಾರಿ, ಬೆಂಗಳೂರ ಅಗ್ನಿಶಾಮಕ ವಿಭಾಗದ ಡಿಐಜಿಪಿ ರವಿ ಡಿ. ಚೆನ್ನಣ್ಣವರ ಸೇರಿದಂತೆ ಪ್ರಮುಖ ಗಣ್ಯರು ಆಗಮಿಸುವರು ಎಂದರು.ಆ. 19ರಂದು ನಡೆಯುವ ಧಾರ್ಮಿಕ ಕಾರ್ಯಕ್ರಮದ ಸಾನ್ನಿಧ್ಯ ಗದಗ-ಡಂಬಳ ಎಡೆಯೂರು ಸಂಸ್ಥಾನಮಠದ ಜ.ತೋಂಟದ ಡಾ.ಸಿದ್ದರಾಮ ಶ್ರೀಗಳು, ಕುಂದಗೋಳ ಕಲ್ಯಾಣಪುರ ಮಠದ ಅಭಿನವ ಬಸವಣ್ಣಜ್ಜನವರು, ಹೂವಿನ ಶಿಗ್ಲಿ ವಿರಕ್ತಮಠದ ಶ್ರೀ ಚನ್ನವವೀರ ಸ್ವಾಮಿ ಹಾಗೂ ಸೊರಟೂರು-ಗದಗ ಓಂಕಾರೇಶ್ವರ ಹಿರೇಮಠದ ಶಿವಾಚಾರ್ಯ ಸ್ವಾಮಿ ವಹಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ರು, ಶಾಸಕ ಡಾ. ಚಂದ್ರು ಲಮಾಣಿ, ಯುವ ಮುಖಂಡ ಆನಂದಸ್ವಾಮಿ ಗಡ್ಡದೇವರಮಠ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ ಸೇರಿದಂತೆ ಪ್ರಮುಖ ಗಣ್ಯರು ಪಾಲ್ಗೊಳ್ಳವರು. ಅಂದು ರಾತ್ರಿ 10ಕ್ಕೆ ಮಾರುತಿ ತರುಣ ನಾಟ್ಯ ಸಂಘದಿಂದ ಕಾಲು ಕೆದರಿದ ಹುಲಿ ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.
ಈ ವೇಳೆ ಪ್ರಭು ಅಂಗಡಿ, ಶಿವಪ್ಪ ಕೋಳಿವಾಡ, ವಿನಯ ಬಂಗಾರಿ, ಕುಬಣ್ಣ ಬಂಗಾರಿ, ಬಸಪ್ಪ ಪೂಜಾರಿ, ಪಕ್ಕಣ್ಣ ತೀರ್ಲಾಪೂರ, ಪ್ರವೀಣ ಬಂಗಾರಿ, ನಿಂಗಪ್ಪ ದೇವೊಜಿ, ಶಿವಪ್ಪ ಕಣಗಿನಹಾಳ, ಮಹೇಶ ಬಾಲರೆಡ್ಡಿ, ತಿಮಣ್ಣ ಮಡಿವಾಳರ, ಹೇಮಣ್ಣ ಹೊಸಮನಿ ಸೇರಿದಂತೆ ಇತರರು ಇದ್ದರು.