ಶ್ರೀ ವೀರಭದ್ರೇಶ್ವರ ಸ್ವಾಮಿ ಕೆಂಡೋತ್ಸವ

KannadaprabhaNewsNetwork |  
Published : May 01, 2025, 12:46 AM IST
ಅರಸೀಕೆರೆ : ತಾಲ್ಲೂಕಿನ ಜೀಕನಹಳ್ಳಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿ ಮತ್ತು ಶ್ರೀ ಭದ್ರಾಕಾಳಮ್ಮನವರ ಕೆಂಡೋತ್ಸವ ಮತ್ತು ಬಸವ ಜಯಂತಿ ಜಾತ್ರಾ ಮಹೋತ್ಸವ | Kannada Prabha

ಸಾರಾಂಶ

ಜೀಕನಹಳ್ಳಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿ ಮತ್ತು ಶ್ರೀ ಭದ್ರಾಕಾಳಮ್ಮನವರ ಕೆಂಡೋತ್ಸವ ಮತ್ತು ಬಸವ ಜಯಂತಿ ಜಾತ್ರಾ ಮಹೋತ್ಸವವು ವಿಶೇಷ ಕ್ಷೀರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಹೂವಿನ ಅಲಂಕಾರದೊಂದಿಗೆ ಅದ್ಧೂರಿಯಾಗಿ ನೆರವೇರಿತು. ಸ್ವಾಮಿಯವರ ಜಾತ್ರಾ ಮಹೋತ್ಸವಕ್ಕೆಂದು ಗ್ರಾಮಕ್ಕೆ ಆಗಮಿಸಿದ ಗ್ರಾಮ ದೇವತೆಯಾದ ಶ್ರೀ ಸಪ್ತಮಾತೃಕ ದೇವಿ, ಶ್ರೀ ಪಂಚಲಿಂಗೇಶ್ವರ ಸ್ವಾಮಿ, ಶ್ರೀ ಧೂತರಾಯ ಸ್ವಾಮಿ, ಶ್ರೀ ಮುತ್ತುರಾಯ ಸ್ವಾಮಿಯವರ ದರ್ಶನ ಪಡೆದ ಭಕ್ತರು ಮತ್ತು ಹೆಣ್ಣುಮಕ್ಕಳು ದೇವರುಗಳಿಗೆ ಮಡಿಲಕ್ಕಿ ಹಾಕಿ ಭಕ್ತಿಯಿಂದ ಮನಸ್ಸಿನ ಈಡೇರಿಕೆಗಳನ್ನು ಬೇಡಿಕೊಂಡರು.

ಅರಸೀಕೆರೆ: ತಾಲೂಕಿನ ಜೀಕನಹಳ್ಳಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿ ಮತ್ತು ಶ್ರೀ ಭದ್ರಾಕಾಳಮ್ಮನವರ ಕೆಂಡೋತ್ಸವ ಮತ್ತು ಬಸವ ಜಯಂತಿ ಜಾತ್ರಾ ಮಹೋತ್ಸವವು ವಿಶೇಷ ಕ್ಷೀರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಹೂವಿನ ಅಲಂಕಾರದೊಂದಿಗೆ ಅದ್ಧೂರಿಯಾಗಿ ನೆರವೇರಿತು.

ತಾಲೂಕಿನ ಕಾಮೇನಹಳ್ಳಿ ಕೀಲು ಕುದುರೆ ತಂಡದ ಪ್ರದರ್ಶನ, ನಾವೇನು ಕಮ್ಮಿ ಇಲ್ಲ ಎನ್ನುವಂತೆ ಬಂದಂತ ಭಕ್ತರ ಮನ ತಣಿಸುವಲ್ಲಿ ವೀರಗಾಸೆ ತಂಡವು ಯಶಸ್ವಿಯಾಯಿತು. ಇನ್ನು ಹೆಚ್ಚಿನ ಕಲಾ ತಂಡಗಳು ಭಾಗವಹಿಸಿ ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾದರು. ಸಕಲ ವಾದ್ಯವೃಂದದೊಂದಿಗೆ ಶ್ರೀ ಸ್ವಾಮಿಯ ಉತ್ಸವ ಮತ್ತು ಕಳಶವು ಸೋಮವಾರ ಬೆಳಗಿನ ಜಾವದಲ್ಲಿ ಹೊರಟು ಊರಿನ ರಾಜಬೀದಿಯಲ್ಲಿ ಸಾಗಿ ತಳಿರು ತೋರಣ, ಮದ್ದುಗುಂಡುಗಳ ಪ್ರದರ್ಶನದೊಂದಿಗೆ ಕೆಂಡೋತ್ಸವ ನೆರವೇರಿತು. ಕೆಂಡೋತ್ಸವದ ನಂತರ ಬಂದಂತ ಭಕ್ತರಿಗೆ ಗ್ರಾಮಸ್ಥರಿಂದ ಅನ್ನದಾಸೋಹ ನೆರವೇರಿಸಲಾಯಿತು.

ಶ್ರೀ ಸ್ವಾಮಿಯವರ ಜಾತ್ರಾ ಮಹೋತ್ಸವಕ್ಕೆಂದು ಗ್ರಾಮಕ್ಕೆ ಆಗಮಿಸಿದ ಗ್ರಾಮ ದೇವತೆಯಾದ ಶ್ರೀ ಸಪ್ತಮಾತೃಕ ದೇವಿ, ಶ್ರೀ ಪಂಚಲಿಂಗೇಶ್ವರ ಸ್ವಾಮಿ, ಶ್ರೀ ಧೂತರಾಯ ಸ್ವಾಮಿ, ಶ್ರೀ ಮುತ್ತುರಾಯ ಸ್ವಾಮಿಯವರ ದರ್ಶನ ಪಡೆದ ಭಕ್ತರು ಮತ್ತು ಹೆಣ್ಣುಮಕ್ಕಳು ದೇವರುಗಳಿಗೆ ಮಡಿಲಕ್ಕಿ ಹಾಕಿ ಭಕ್ತಿಯಿಂದ ಮನಸ್ಸಿನ ಈಡೇರಿಕೆಗಳನ್ನು ಬೇಡಿಕೊಂಡರು ಎಂದು ಗ್ರಾಮದ ಮುಖಂಡರಾದ ಗ್ರಾಪಂ ಸದಸ್ಯ ಶಶಿಕುಮಾರ್, ರೇಣುಕಯ್ಯ, ಶಣ್ಮುಕಯ್ಯ, ಕುಮಾರ, ಪುಟ್ಟಸ್ವಾಮಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪರಂಗೆ ಸಿಎಂ ಸ್ಥಾನ ನೀಡದಿದ್ದರೆ ರಾಜ್ಯಕ್ಕೆ ಅಪಮಾನ ಮಾಡಿದಂತೆ
ಮೀಸಲು ವರ್ಗೀಕರಣದ ವಿರುದ್ಧ ಇಂದು ಬೆಳಗಾವಿ ಚಲೋ