ಕನ್ನಡಪ್ರಭ ವಾರ್ತೆ ಕೊಡ್ಲಿಪೇಟೆ
ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಕೊಡಗು ಜಿಲ್ಲೆ, ನೀರುಗುಂದ ಶ್ರೀ ವೀರಭದ್ರೇಶ್ವರ ದೇವಾಲಯ ಸಮಿತಿ ಸಹಯೋಗದೊಂದಿಗೆ ನಡೆದ ಶ್ರೀ ವೀರಭದ್ರೇಶ್ವರ ಸ್ವಾಮಿ ಜನ್ಮ ವರ್ಧಂತಿ ಆರನೇ ವರ್ಷದ ಮಹೋತ್ಸವ ಕಾರ್ಯಕ್ರಮಕ್ಕೆ ನೀರಗುಂದ ಶ್ರೀ ವೀರಭದ್ರೇಶ್ವರ ದೇವಾಲಯದಲ್ಲಿ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.ಭಾದ್ರಪದ ಮಾಸದ ಮೊದಲ ಮಂಗಳವಾರ ಪ್ರತೀ ವರ್ಷ ಶ್ರೀ ಸ್ವಾಮಿಯ ಜಯಂತಿ ಆಚರಿಸಲಾಗುತ್ತಿದೆ. ಮಾನವನ ಇಹದ ಬದುಕಿನ ಸ್ತರಗಳಲ್ಲಿ ಇರಬಹುದಾದ ಜನವಿರೋಧಿ ಕೃತ್ಯಗಳ ನಿವಾರಣೆಗೆ ಶ್ರೀವೀರಭದ್ರ ದೇವರ ಮಹಾಶಕ್ತಿ ಸಂಚಯ ನಿರಂತರ ಪ್ರಭಾವ ಬೀರುತ್ತದೆ ಎಂದರು.
ಸಾಕ್ಷಾತ್ ಶಿವನೇ ತೊಂದರೆ ಯಲ್ಲಿದ್ದಾಗ ರಕ್ಷಣೆಗೆ ಅವತರಿಸಿದ ದೈವ ಪುರುಷ, ದುಷ್ಟರ ಸಂಹಾರ- ಶಿಷ್ಯರ ರಕ್ಷಣೆ ಸರ್ವರಿಗೂ ಒಳಿತನ್ನು ಮಾಡುವ ದೇವರಾಗಿದ್ದು, ಕ್ಷಾತ್ರ ತೇಜಸ್ಸಿನ ಪ್ರತೀಕ. ಅನ್ಯಾಯ, ಅನಾಚಾರ, ಅಧರ್ಮಗಳ ವಿರುದ್ಧ ಹೋರಾಡಲು ಪ್ರೇರಣಾದಾಯಕನಾಗಿದ್ದು ವೀರಭದ್ರೇಶ್ವರ ಎಂದರು.ಮುಂಜಾನೆ 5 ಗಂಟೆಯಿಂದಲೇ ಮಹಾರುದ್ರಾಬಿಷೇಕ, ಫಲ - ಪುಷ್ಪ ನೈವೇದ್ಯ, ಅಷ್ಟೋತ್ತರ ಪೂಜೆ , ಬಿಲ್ವಾರ್ಚನೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಮಾಡಲಾಯಿತು
ನೀರಗುಂದ ಗ್ರಾಮದ ದೇವಸ್ಥಾನ ಸಮಿತಿಯ ಅಧ್ಯಕ್ಷರು ಹಾಗು ಸದಸ್ಯರು, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಸಮಿತಿ ಸದಸ್ಯರು ಹಾಗು ಗ್ರಾಮದ ಭಕ್ತರು ಪಾಲ್ಗೊಂಡಿದ್ದರು.