ಕನ್ನಡಪ್ರಭ ವಾರ್ತೆ ಮೈಸೂರು
ಬಳಿಕ ಬಿಎಸ್‌ಎಸ್ ವಿದ್ಯೋದಯ ಶಾಲೆಯ 350 ಜನ ಕೂರುವ ಸುಸಜ್ಜಿತ ಸಭಾಂಗಣ, ಗ್ರಂಥಾಲಯ ಶಬ್ಧಗಳ ಪ್ರಪಂಚ, ಮಕ್ಕಳ ಚಟುವಟಿಕೆಯ ಆನಂದ ಕಕ್ಷ, ಕಂಪ್ಯೂಟರ್ ಲ್ಯಾಬ್ ಶೂನ್ಯ, ಗಣಿತ ಪ್ರಯೋಗಾಲಯ ಲೀಲಾವತಿ, ಗ್ರಹಂ ಚೆಸ್ ರೂಂ ಕೊಠಡಿಯನ್ನು ಪೇಜಾವರ ಶ್ರೀಗಳು ಉದ್ಘಾಟಿಸಿದರು.
ನಂತರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ಬದುಕಿನಲ್ಲಿ ಸಂಪಾದನೆ ಮಾಡುತ್ತೇವೆ. ಸಂಪಾದಿಸಿದ ಹಣವನ್ನು ಯಾವ ಕಾಲದಲ್ಲಿ ಯಾವುದಕ್ಕೆ ಉಪಯೋಗ ಮಾಡಿದೇವು ಎಂಬ ತಿಳವಳಿಕೆ ಇರಬೇಕು. ಇವತ್ತು ಎಷ್ಟು ಸಂಪಾದನೆ ಮಾಡಿದರೂ ಸಾಲುತ್ತಿಲ್ಲ. ದುಡ್ಡು ನಮ್ಮ ಹತ್ತಿರ ಬರಬೇಕೆಂದು ಕಾಯುತ್ತಿದ್ದಾರೆ. ಇದು ಮಹಾಲಕ್ಷ್ಮೀಯಾದ ಮಗಳನ್ನು ರಾಕ್ಷಸನಿಗೆ ಕೊಟ್ಟಂತಹ ಪರಿಸ್ಥಿತಿ ಅಪಾಯಕಾರಿ ಎಂದರು.ಮಕ್ಕಳಿಗೆ ಸಂಸ್ಕಾರ ಕಲಿಸಬೇಕು. ಬಿಎಸ್‌ಎಸ್ ವಿದ್ಯೋದಯ ಶಾಲೆ ಆರಂಭಕ್ಕೆ ಗುರುಗಳ ಅನುಗ್ರಹ ಇದೆ ಮತ್ತು ಈ ನೆಲದಲ್ಲಿ ನೂರು ವರ್ಷಗಳ ಕಾಲ ತಪಸ್ಸು ಮಾಡಿದ ಚೇತನಗಳಿಂದ ಈ ಕೆಲಸ ಸಾಧ್ಯವಾಯಿತು ಎಂದು ಅವರು ತಿಳಿಸಿದರು.
ಇದೇ ವೇಳೆ ವಿದ್ಯಾಸಂಸ್ಥೆಯ ವಿವಿಧ ಚಟುವಟಿಕೆಗಳನ್ನು ಆರಂಭಿಸಲು ನೆರವಾದ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ವಿದ್ಯಾಸಂಸ್ಥೆ ಅಧ್ಯಕ್ಷ ಜಗನ್ನಾಥ್ ಶಣೈ, ಕಾರ್ಯದರ್ಶಿ ಶ್ರೀನಿವಾಸ, ಭಗಿನಿ ಸಂಗೀತೋತ್ಸವದ ಅಧ್ಯಕ್ಷ ಕೆ.ಎಸ್. ಗುರುರಾಜ್ ಇದ್ದರು. ಸುಜಾತ ಭಟ್ ಪ್ರಾರ್ಥಿಸಿದರು.