ಕನ್ನಡಪ್ರಭ ವಾರ್ತೆ ಮೈಸೂರು
ಬಲಿಜ ವಿದ್ಯಾರ್ಥಿನಿಲಯದ ಮೊದಲ ಹಂತದ ಕಟ್ಟಡವನ್ನು ನಿರ್ಮಾಣಕ್ಕೆ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ವಿಧಾನಪರಿಷತ್ತು ಸದಸ್ಯ ಹಾಗೂ ಮಾಜಿ ಸಚಿವ ಡಾ.ಎಂ.ಆರ್. ಸೀತಾರಾಂ ಭರವಸೆ ನೀಡಿದರು.ನಗರದ ಸರಸ್ವತಿಪುರಂನಲ್ಲಿರುವ ಬಣಜಿಗ ಸಮುದಾಯದ ವಿದ್ಯಾರ್ಥಿನಿಲಯದಲ್ಲಿ ಶ್ರೀ ಯೋಗಿನಾರೇಯಣ ಬಣಜಿಗ (ಬಲಿಜ) ಸಂಘವು ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ವಧು- ವರರ ಸಮಾವೇಶವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಕಳೆದ ಹಲವಾರು ವರ್ಷಗಳಿಂದ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದೇನೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಸುಸಜ್ಜಿತ ವಿದ್ಯಾರ್ಥಿನಿಲಯ ನಿರ್ಮಿಸಿ ಸಮುದಾಯದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಈಗ ಮೈಸೂರಿನ ವಿದ್ಯಾರ್ಥಿನಿಲಯದ ಕಟ್ಟಡವನ್ನು ಅಭಿವೃದ್ಧಿಪಡಿಸಲಾಗುವುದು. ಮೊದಲ ಮಹಡಿಯ ಕೊಠಡಿಗಳ ನಿರ್ಮಾಣಕ್ಕೆ ಸಂಪೂರ್ಣ ಬೆಂಬಲ ಕೊಡುವುದಾಗಿ ಅವರು ಹೇಳಿದರು.ಸಮುದಾಯದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವು ನೀಡುವುದು ಸಮುದಾಯಕ್ಕೆ ನಾವು ಮಾಡುತ್ತಿರುವ ಸಾರ್ಥಕದ ಸೇವೆ ಎಂದುಕೊಂಡಿದ್ದೇನೆ. ಸಮುದಾಯದ ಹಣವಂತರು ಧನ ಸಹಾಯ ಮಾಡಬೇಕು. ಮದ್ಯಮ ವರ್ಗದವರು ತಮ್ಮ ಕೈಲಾದಷ್ಟು ಸಹಕಾರ ನೀಡಬೇಕು ಎಂದರು.
ಈ ಸಂಘವು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ. ಪ್ರಾಮಾಣಿಕವಾಗಿ ಸಮುದಾಯದ ಕೆಲಸವನ್ನು ಮಾಡುವ ಸಂಘ-ಸಂಸ್ಥೆಗಳಿಗೆ ಸಂಪೂರ್ಣ ಪ್ರೋತ್ಸಾಹ ನೀಡಬೇಕಾಗಿರುವುದು ಸಮುದಾಯದ ಪ್ರತಿಯೊಬ್ಬರ ಕರ್ತವ್ಯ. ಬೆಳೆಯುತ್ತಿರುವ ಸಮುದಾಯಕ್ಕೆ ಹೆಚ್ಚಿನ ಪಾಲುದಾರಿಕೆ ಮಾಡಬೇಕು ಎಂದು ಅವರು ತಿಳಿಸಿದರು.ಸಂಘದ ಅಧ್ಯಕ್ಷ ಎಂ. ನಾರಾಯಣ ಮಾತನಾಡಿ, ದಶಕಗಳಿಂದ ಸಂಘದ ಅಭಿವೃದ್ಧಿ ಸಲಹೆ ಸಹಕಾರವನ್ನು ನೀಡುತ್ತ ಬರಲಾಗುತ್ತಿದೆ. ಎಚ್.ಎ. ವೆಂಕಟೇಶ್ ಸಮುದಾಯದ ಮೇಲೆ ಕಾಳಜಿ ಹೊಂದಿದ್ದಾರೆ. ಸಂಘದ ನಿರ್ದೇಶಕರ ಸಹಕಾರದಿಂದ ಬಣಜಿಗ ಸಂಘವು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಸಮುದಾಯವೂ ಹಿಂದುಳಿದಿದೆ. ಕೈಗಾರಿಕೋದ್ಯಮಿ, ಸ್ಥಿತಿವಂತರು ಈ ಭಾಗದಲ್ಲಿ ಇಲ್ಲ. ರೈತಾಪಿ ವರ್ಗದವರೇ ಹೆಚ್ಚಾಗಿದ್ದು, ಸಂಸಾರ ನಿರ್ವಹಣೆ ಮಾಡಲು ಕಷ್ಟವಾಗಿದೆ. ಹೀಗಿದ್ದರೂ ಸಮುದಾಯದ ಏಳಿಗೆಗೆ ಹಣ ನೀಡುತ್ತಿರುವುದು ಶ್ಲಾಘನೀಯ ಎಂದರು.ಮೈಲ್ಯಾಕ್ ಮಾಜಿ ಅಧ್ಯಕ್ಷ ಎಚ್.ಎ. ವೆಂಕಟೇಶ್, ಮಂಡ್ಯ ಸರ್ವ ಬಣಜಿತ ಸಂಘದ ಅಧ್ಯಕ್ಷ ಕೆ.ಎನ್. ಮೋಹನ್ ಕುಮಾರ್, ಸಂಘದ ವಿಶೇಷ ಆಹ್ವಾನಿತರಾದ ಪಾಂಡುರಂಗ, ಆರ್. ಬಾಲರಾಜು, ಎಂ. ನಾಗರಾಜು, ಟಿ.ಎಸ್. ರಮೇಶ್, ಪದಾಧಿಕಾರಿಗಳಾದ ಜಿ. ರಮೇಶ್, ಎಚ್.ಆರ್. ಗೋಪಾಲಕೃಷ್ಣ, ಚಲುವರಾಜು, ಕೆ. ಚಂದ್ರಶೇಖರ, ಡಿ. ನಾಗರಾಜ, ನಿರ್ದೇಶಕರಾದ ಎಚ್.ವಿ. ನಾಗರಾಜ, ಎಚ್.ಎಸ್. ಕೃಷ್ಣಪ್ಪ, ಎನ್. ಹೇಮಂತಕುವಾರ್, ಎಚ್.ಕೆ. ಜಗನ್ನಾಥ್, ಡಾ.ಟಿ. ರಮೇಶ್, ಡಾ.ಎಸ್.ಕೃಷ್ಣಪ್ಪ, ಕೆ.ಎನ್. ವಿಜಯಕೊಪ್ಪ, ಗೋಪಾಲಕೃಷ್ಣ, ಎನ್. ವಿಜಯಕುಮಾರ್, ನಂಜಪ್ಪ, ಕೆ.ಸಿ. ಪ್ರಕಾಶ್, ಎಂ.ಆರ್. ಗಿರೀಶ್, ಬಿ.ಎಸ್. ಗುರುಮೂರ್ತಿ, ಎ. ಚೆನ್ನಕೇಶವ, ಬಿ.ಕೆ. ಸುರೇಶ್, ಎಂ.ವಿ. ವೆಂಕಟೇಶ್, ಕೆ. ಜನಾರ್ಧನ, ವ್ಯವಸ್ಥಾಪಕ ಎಚ್.ಆರ್. ವೆಂಕಟೇಶ್, ಮೇಲ್ವಿಚಾರಕ ರಾಮಕೃಷ್ಣಯ್ಯ ಇದ್ದರು.
----ಕೋಟ್...
ಸಂಘದ ಆಡಳಿತ ಮಂಡಳಿಯ ಪ್ರಮಾಣಿಕತೆಯಿಂದ ಅತ್ಯುತ್ತಮ ಕೆಲಸ ಮಾಡಲು ಸಹಕಾರವಾಗಿದೆ. ಈ ಕಟ್ಟಡದ ನಿರ್ವಹಣೆಗೆ ಡಾ.ಎಂ.ಆರ್. ಸೀತಾರಾಂ ಅವರು ದಯೆ ತೋರಬೇಕು ಎಂದು ಮನವಿ ಮಾಡಿದೆ. ಅದಕ್ಕೆ ಅವರು ಸಮ್ಮತಿ ಸೂಚಿಸಿ ಭರವಸೆ ನೀಡಿದ್ದಾರೆ. ವಸತಿ ನಿಲಯದ ಸಂಪೂರ್ಣ ಕಟ್ಟಡ ಕಟ್ಟಿಸಿ ಕೊಡಬೇಕು. ಆ ಮೂಲಕ ಈ ಭಾಗದಲ್ಲಿ ಸೀತಾರಾಂ ಅವರ ಹೆಸರು ಸದಾ ಉಸಿರಾಗಿಲಿದೆ.- ಎಚ್.ಎ. ವೆಂಕಟೇಶ್, ಮಾಜಿ ಅಧ್ಯಕ್ಷ, ಮೈಲ್ಯಾಕ್