ನಾಳೆ ಶ್ರೀಭಗೀರಥ ಸಮುದಾಯ ಭವನ ಲೋಕಾರ್ಪಣೆ

KannadaprabhaNewsNetwork |  
Published : Jan 30, 2025, 12:31 AM IST
ತಾಲೂಕಿನ ಕೆಸರಗೊಪ್ಪ ಗ್ರಾಮದಲ್ಲಿ ಲೋಕಾರ್ಪಣೆಗೊಳ್ಳಿರುವ ಸಮುದಾಯ ಭವನ ಕುರಿತು ವಿವರಣೆ ನೀಡಿದ ಗಣ್ಯರು. | Kannada Prabha

ಸಾರಾಂಶ

ಕೆಸರಗೊಪ್ಪದಲ್ಲಿ ಸಮುದಾಯ ಭವನದ ಕಾಮಗಾರಿ ಆರಂಭಗೊಂಡು ಸುಮಾರು ಒಂದು ದಶಕಗತಿಸಿದ್ದು, ಇನ್ನೂ ೧೦ರಿಂದ ೧೫ ಪ್ರತಿಶತ ಕೆಲಸ ಬಾಕಿ ಇದೆ. ಇಲ್ಲಿಯವರೆಗೆ ಅಂದಾಜು ₹೨.೫ ಕೋಟಿ ವ್ಯಯಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ(ರ-ಬ)

ನೂತನ ಶ್ರೀ ಭಗೀರಥ ಸಮುದಾಯ ಭವನ ಉದ್ಘಾಟನೆಯನ್ನು ಹಲವಾರು ಶ್ರೀಗಳ ಸಮ್ಮುಖ ಜ.೩೧ರಂದು ಬೆಳಗ್ಗೆ ೧೧ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ನೆರೆವೇರಿಸಲಿದ್ದಾರೆ ಎಂದು ಭಗೀರಥ ಉಪ್ಪಾರ ಸಂಘದ ಅಧ್ಯಕ್ಷ ಭೀಮಪ್ಪ ಸಸಾಲಟ್ಟಿ ಹೇಳಿದರು.

ಸಮಾರಂಭದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕೆಸರಗೊಪ್ಪದಲ್ಲಿ ಸಮುದಾಯ ಭವನದ ಕಾಮಗಾರಿ ಆರಂಭಗೊಂಡು ಸುಮಾರು ಒಂದು ದಶಕಗತಿಸಿದ್ದು, ಇನ್ನೂ ೧೦ರಿಂದ ೧೫ ಪ್ರತಿಶತ ಕೆಲಸ ಬಾಕಿ ಇದೆ. ಇಲ್ಲಿಯವರೆಗೆ ಅಂದಾಜು ₹೨.೫ ಕೋಟಿ ವ್ಯಯಿಸಲಾಗಿದೆ. ಈ ಕೆಲಸಕ್ಕೆ ಸರ್ವರೂ ತನು- ಮನ- ಧನ ನೀಡಿ ಸಹಕರಿಸಿದ್ದಾರೆ ಅವರೆಲ್ಲರಿಗೂ ಸಮಾಜದ ವತಿಯಿಂದ ಅಭಿನಂದನೆ ತಿಳಿಸಿದರು.

ಕಾರ್ಯಕ್ರಮ ರೂಪುರೇಷೆ:

ಅಂದು ಬೆಳಗ್ಗೆ ೮ ಗಂಟೆಗೆ ಶ್ರೀಭಗೀರಥ ಭಾವ ಚಿತ್ರ, ಪುರುಷೋತ್ತಮಾನಂದಶ್ರೀಗಳ ಬೆಳ್ಳಿ ರಥ ಹಾಗೂ ಕುಂಬ ಮೇಳದೊಂದಿಗೆ ಮೆರವಣಿಗೆ ಶ್ರೀ ಬಿಸಿಲುಸಿದ್ಧೇಶ್ವರ ದೇವಸ್ಥಾನದಿಂದ ಗ್ರಾಮದ ಭಗಿರಥ ದೇವಸ್ಥಾನ ವರೆಗೆ ಸಾಗಿ, ನಂತರ ಹೋಮ ಹವನ ನಡೆಯುವುದು. ಮಧ್ಯಾಹ್ನ ಭಜನೆ ರಾತ್ರಿ ಸೋಲಿಲ್ಲದ ಸರದಾರ ನಾಟಕ ಪ್ರದರ್ಶನ ನಡೆಯುವುದು.

ಮಧುರೈ ಪುರುಷೋತ್ತಮಾನಂದ ಶ್ರೀ, ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಶ್ರೀ, ಪ್ರಭು ಶ್ರೀ, ಗುರುಸಿದ್ಧೇಶ್ವರ ಶ್ರೀ, ಅಭಿನವ ಧರೇಶ್ವರ ಶ್ರೀ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ, ಕಾಂಗ್ರೆಸ್ ನಾಯಕ ಸಿದ್ದು ಕೊಣ್ಣೂರ ಹಾಗೂ ಇತರರು ಜ್ಯೋತಿ ಬೆಳಗುವರು. ಭೀಮಶಿ ಸಸಾಲಟ್ಟಿ ಮತ್ತು ಪರಪ್ಪ ಗಂಗಪ್ಪ ಬ್ಯಾಕೋಡ್ ಅಧ್ಯಕ್ಷತೆ ವಹಿಸಿ, ಸಂಸದ ಪಿ.ಸಿ.ಗದ್ದಿಗೌಡರ, ವಿಪ ಸದಸ್ಯೆ ಉಮಾಶ್ರೀ, ಹನುಮಂತ ನಿರಾಣಿ, ಸುನೀಲ್ ಗೌಡ ಪಾಟೀಲ್ ಹಾಗೂ ಉಪ್ಪಾರ ಸಮಾಜದ ರಾಜ್ಯಾಧ್ಯಕ್ಷ ಪುಟ್ಟರಂಗಶೆಟ್ಟಿ ಉಪಸ್ಥಿತರಿರುವರು. ಕಾರ್ಯಕ್ರಮದಲ್ಲಿ ಸಾಧಕರಿಗೆ ವಿಶೇಷ ಸನ್ಮಾನ ನಡೆಯುವುದು.

ಸಭೆಯಲ್ಲಿ ಉಪ್ಪಾರ ಸಂಘದ ಭೀಮಪ್ಪ ಸಸಾಲಟ್ಟಿ, ಮಾರುತಿ ಬ್ಯಾಕೋಡ, ಮಾರುತಿ ಕರೋಶಿ, ವಿಠ್ಠಲ್ ಕಲ್ಲಟ್ಟಿ, ಪರಪ್ಪ ಬ್ಯಾಕೋಡ, ಮಾರುತೆಪ್ಪ ತೇಜಪ್ಪಗೋಳ, ಅಲ್ಲಪ್ಪ ದಡ್ಡಿಮನಿ, ಭೀಮಪ್ಪ ಬ್ಯಾಕೋಡ, ಮಲ್ಲಪ್ಪ ತೇಜಪ್ಪಗೋಳ, ಬಾಳಪ್ಪ ದಡ್ಡಿಮನಿ, ತಿಪ್ಪಣ್ಣ ಬ್ಯಾಕೋಡ್, ವಿಠ್ಠಲ್ ಶಿರೋಳ, ಕರೆಪ್ಪ ಬ್ಯಾಕೋಡ, ಶಿವಾನಂದ ಬ್ಯಾಕೋಡ, ವಸಂತ ಜಗದಾಳ ಊರಿನ ಹಾಗೂ ಸಮಾಜದ ಪ್ರಮುಖರಾದ ದುಂಡಪ್ಪ ಜಾಧವ, ಡಾ.ಎಂ. ಬಿ ಪೂಜಾರಿ, ಹುಲೇಪ್ಪ ಬ್ಯಾಕೋಡ, ಮಹಾದೇವ ಸಸಾಲಟ್ಟಿ, ಭೀಮಪ್ಪ ಸಸಾಲಟ್ಟಿ, ಭರಮಪ್ಪ ದಡ್ಡಿಮನಿ, ಬಸವರಾಜ ಜಿಡ್ಡಿಮನಿ, ಅಡಿವೆಯ್ಯ ಮಠಪತಿ, ಶಿವಾಜಿ ತೇಜಪ್ಪಗೋಳ, ಸಂಗಪ್ಪ ಪೂಜಾರಿ, ಧರೆಪ್ಪ ಸಸಾಲಟ್ಟಿ, ಸತೀಶ್ ಬ್ಯಾಕೋಡ ಸೇರಿದಂತೆ ಅನೇಕರಿದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ