ಕನ್ನಡಪ್ರಭ ವಾರ್ತೆ ಶಿವಮೊಗ್ಗ ರಾಮಭಕ್ತ ಶ್ರೀಕಾಂತ್ ಪೂಜಾರಿ ಬಂಧನ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ. ಪರಮೇಶ್ವರ್ ಸುಳ್ಳು ಹೇಳಿರುವುದು ಸಾಬೀತಾಗಿದೆ. ಅವರು ರಾಜ್ಯದ ಕ್ಷಮೆ ಕೋರಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಆಗ್ರಹಪಡಿಸಿದರು.
ದತ್ತಪೀಠ ಪ್ರಕರಣ:
ದತ್ತಪೀಠಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, 2017ನೇ ಇಸವಿಯ ಕೇಸನ್ನು 7 ವರ್ಷದ ನಂತರ ಮತ್ತೆ ತೆಗೆದುಕೊಂಡು ಗೊಂದಲ ಹುಟ್ಟಿಸಿದ್ದಾರೆ. ಇದು ಸರಿಯಲ್ಲ. ಸರ್ಕಾರ ಹೇಗೆ ರೀ ಓಪನ್ ಮಾಡಿದೆ ಎಂಬುವುದು ಗೊತ್ತಿದೆ. ಹಿಂದೂ ಕಾರ್ಯಕರ್ತರಿಗೆ, ರಾಮಭಕ್ತರಿಗೆ ಕಿರುಕುಳ ನೀಡುವುದೇ ಕಾಂಗ್ರೆಸ್ನು ಕೆಲಸವಾಗಿದೆ. ಸಂತೋಷ್ ಕೇಸ್‌ನಲ್ಲಿ ನನ್ನ ಪಾತ್ರ ಇಲ್ಲ ಎಂದು ಕೋರ್ಟ್ ಹೇಳಿದ್ದರೂ ಪುನಃ ಅದೇ ಮಾತನಾಡುತ್ತಿದ್ದಾರೆ. ಅವರಿಗೆ ಕೋರ್ಟ್ ಬಗ್ಗೆ ಕೂಡ ಅವರಿಗೆ ಗೌರವಿಲ್ಲ ಎಂದರು.ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಜಗದೀಶ್, ರತ್ನಾಕರ ಶೆಣೈ, ಚಂದ್ರಶೇಖರ್, ಕೆ.ವಿ.ಅಣ್ಣಪ್ಪ, ಮಾಲತೇಶ್ ಇದ್ದರು.
ಕೋಟ್ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಅವರು ರಾಮ ಮಂದಿರಕ್ಕೆ ದೇಣಿಗೆ ಕೊಟ್ಟಿರಬಹುದು. ದೇಣಿಗೆ ಕೊಟ್ಟವರು ಕೋಟ್ಯಂತರ ಜನರಿದ್ದಾರೆ. ಇವರಿಬ್ಬರೇ ಏನೂ ಅಲ್ಲ. ಆಗ ಇವರಿಬ್ಬರು ಮೋದಿ ಭಕ್ತರಾಗಿದ್ದರು. ಈಗ ಮಸೀದಿ ಕಟ್ಟಲು ದೇಣಿಗೆ ಕೊಡಲು ಮುಂದಾಗಿದ್ದಾರೆ
- - - ಟಾಪ್ ಕೋಟ್‌ಮಂತ್ರಾಕ್ಷತೆಗೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಈಶ್ವರಪ್ಪ ಅಂತ ಇರಲ್ಲ. ಅದು ಅಯೋಧ್ಯೆಯಿಂದ ಬಂದ ಮಂತ್ರಾಕ್ಷತೆ, ಅದನ್ನು ಹಂಚುತ್ತಿದ್ದೇವೆ. ಈ ಕಾಂಗ್ರೆಸ್ಸಿಗರಿಗೆ ಏನು ಮಾಡಬೇಕು ಎಂದು ಗೊತ್ತಿಲ್ಲ. ವಿಲಿವಿಲಿ ಒದ್ದಾಡುತ್ತಿದ್ದಾರೆ. ಗಲಭೆ ಮಾಡಿ, ಲೋಕಸಭಾ ಚುನಾವಣೆ ಗೆಲ್ಲಬಹುದು ಎಂದು ಮಾಡಿದ್ದಾರೆ. ಈ ಸುಳ್ಳುಬುರುಕರನ್ನು ಜನರು ನಂಬುವುದಿಲ್ಲ
- - - -ಪೋಟೋ: