ಕುದೂರು: ಪುರಾಣ ಪ್ರಸಿದ್ದ ಸ್ಥಳ ಸುಗ್ಗನಹಳ್ಳಿಯಲ್ಲಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿಯ ನೂತನ ರಥ ಬಂದ ಪ್ರಯುಕ್ತ ಬ್ರಹ್ಮರಥೋತ್ಸವ ನೆರವೇರಿಸಲಾಯಿತು.
ಸಂಪ್ರದಾಯದಂತೆ ಮಾರ್ಚ್ ತಿಂಗಳಲ್ಲಿ ಬ್ರಹ್ಮರಥೋತ್ಸವ ನಡೆಯುತ್ತದೆ. 120 ವರ್ಷದ ಹಳೆಯ ರಥ ಶಿಥಿಲಗೊಂಡ ಕಾರಣ ಅದನ್ನು ಬದಲಿಸಿ ನೂತನವಾಗಿ ಮಲೆನಾಡಿನ ಮರಗಳನ್ನು ಬಳಸಿ ದಶಾವತಾರ, ಗುರುಡದೇವರು ಹಾಗೂ ಆಂಜನೇಯ ಇತರೆ ದೇವರುಗಳ ಕೆತ್ತನೆಯೊಂದಿಗೆ 35 ಅಡಿ ಎತ್ತರದ ನೂರನ ರಥವನ್ನು ವಿವಿಧ ಶಾಸ್ತ್ರಗಳ ಮೂಲಕ ಮಂಗಳ ಪ್ರೋಕ್ಷಣೆ ಮಾಡಿ ಆರಂಭಿಕ ರಥೋತ್ಸವದ ಮೂಲಕ ಲೋಕಾರ್ಪಣೆ ಮಾಡಲಾಯಿತು.ಅಯೋಧ್ಯೆ ರಥ ನಿರ್ಮಾಣದ ಶಿಲ್ಪಿ:
ಉಡುಪಿ ಜಿಲ್ಲೆ ಕುಂದಾಪುರ ಗ್ರಾಮದ ಆನೆಗುಡ್ಡೆ ವಿನಾಯಕ ಶಾಲೆಯ ರಥಶಿಲ್ಪಿ ರಾಜಗೋಪಾಲಚಾರ್ಯ ಕೋಟೇಶ್ವರ್ ಅವರು ಕುಕ್ಕೆ ಸುಭ್ರಹ್ಮಣ್ಯ, ಧರ್ಮಸ್ಥಳ ಮತ್ತು ಕೊಲ್ಲೂರಿನ ದೇವಾಲಯ ರಥಗಳು ಸೇರಿದಂತೆ ನೂರಾರು ರಥಗಳನ್ನು ನಿರ್ಮಾಣ ಮಾಡಿದ್ದು ಈಗ ಅಯೋಧ್ಯೆಯ ರಥವನ್ನು ಕೂಡಾ ಇದೇ ಶಿಲ್ಪಿಯಿಂದ ಮಾಡಿಸಲು ಅಯೋಧ್ಯೆ ಟ್ರಸ್ಟ್ ನಿರ್ಧರಿಸಿದೆ.ಅಪೂರ್ವ ಕುಶಲ ಕೆತ್ತನೆಗಳಿಂದ ಕೂಡಿದ ರಥವನ್ನು ಸುಗ್ಗನಹಳ್ಳಿ ಗ್ರಾಮಕ್ಕೆ 15 ಕಿಮೀ ದೂರದಿಂದ ಮಂಗಳವಾದ್ಯಗಳೊಂದಿಗೆ ರಸ್ತೆಯುದ್ದಕ್ಕೂ ಜನರು ನಿಂತು ಪೂಜೆ ಸಲ್ಲಿಸಿ ಹೂಮಳೆಗರೆದು ನೂತನ ರಥ ಸುಗ್ಗನಹಳ್ಳಿಗೆ ಪುರಪ್ರವೇಶ ಮಾಡಿತ್ತು. ಕುದೂರು ಮಹಿಳೆಯರಿಂದ ಚಂಡೆವಾದ್ಯ ಭಕ್ತಾದಿಗಳ ಮೆಚ್ಚುಗೆಯನ್ನು ಪಡೆಯಿತು.ಕೋಟ್ ...............
ಎಲ್ಲಿ ಶ್ರದ್ಧೆ ಇರುತ್ತದೆಯೋ ಅಲ್ಲಿ ಅತ್ಯುತ್ತಮ ಕಾರ್ಯಗಳು ಆಗುತ್ತವೆ ಎನ್ನುವುದಕ್ಕೆ ಸಾಕ್ಷಿಯಾಗಿ ನೂತನ ರಥ ಇಂದು ಲೋಪಾರ್ಪಣೆಗೊಳ್ಳುತ್ತಿದೆ. ದೇವರ ಮೂತರ್ಿಯನ್ನು ಎತ್ತರದ ಪೀಠದ ಮೇಲೆ ಕುಳ್ಳಿರಿಸಿ ಅದನ್ನು ಮೆರವಣಿಗೆ ಮಾಡುವ ವೈಭವವನ್ನು ಜನರು ಕಣ್ತುಂಬಿಸಿಕೊಳ್ಳುತ್ತಿದ್ದಾರೆ. ಪುರಾಣ ಪ್ರಸಿದ್ದವಾದ ಸುಗ್ಗನಹಳ್ಳಿಯ ಜಾತ್ರೆಯ ಕೀರ್ತಿ ರಾಜ್ಯವನ್ನು ಮೀರಿ ಹರಡುತ್ತಿದೆ. ಮಾರ್ಚ್ ತಿಂಗಳಲ್ಲಿ ನಡೆಯುವ ಬ್ರಹ್ಮರಥೋತ್ಸವಕ್ಕೆ ಸಾವಿರಾರು ಜನರು ಸಾಕ್ಷಿಾಗುತ್ತಾರೆ. ಅದಕ್ಕಾಗಿ ನೂತನ ರಥವನ್ನು ಒಂದು ತಿಂಗಳು ಮುನ್ನವೇ ಬ್ರಹ್ಮರಥೋತ್ಸವದ ರೀತಿಯಲ್ಲಿ ಸತ್ಸಂಪ್ರದಾಯಗಳಿಂದ ಲೋಕಾರ್ಪಣೆ ಮಾಡಲಾಯಿತು.- ನರಸಿಂಹಭಟ್ಟರು. ಪ್ರಧಾನ ಅರ್ಚಕರು14ಕೆಆರ್ ಎಂಎನ್ 5,6.ಜೆಪಿಜಿ
5. ಸುಗ್ಗನಹಳ್ಳಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿಯ ರಥೋತ್ಸವದಲ್ಲಿ ನೂರಾರು ಜನರು ಭಾಗವಹಿಸಿದ್ದರು.6. ಸುಗ್ಗನಹಳ್ಳಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿಯ ಸುಂದರ ಕೆತ್ತನೆಯ ನೂತನ ರಥ.