ಶೃಂಗೇರಿ: ಗುಡುಗು ಸಿಡಿಲು ಸಹಿತ ಮಳೆ ಆರ್ಭಟ

KannadaprabhaNewsNetwork | Published : Oct 17, 2023 12:30 AM

ಸಾರಾಂಶ

ಶೃಂಗೇರಿ: ಗುಡುಗು ಸಿಡಿಲು ಸಹಿತ ಮಳೆ ಆರ್ಭಟ
ಶೃಂಗೇರಿ: ತಾಲೂಕಿನಾದ್ಯಂತ ಸೋಮವಾರ ಮದ್ಯಾಹ್ನದಿಂದ ಸಂಜೆಯವರೆಗೆ ಗುಡುಗು ಸಿಡಿಲು ಸಹಿತ ಭಾರೀ ಮಳೆ ಸುರಿಯಿತು. ಬೆಳಿಗ್ಗೆಯಿಂದಲೂ ಆಗಾಗ ಮೋಡಕವಿದ ವಾತಾವರಣವಿದ್ದು, ಮದ್ಯಾಹ್ನದ ವೇಳೆ ದಟ್ಟಮೋಡಕವಿದು ಗುಡುಗು ಸಿಡಿಲಿನ ಆರ್ಭಟ ಆರಂಭಗೊಂಡಿತು, ಶೃಂಗೇರಿ ಪಟ್ಟಣ ಸೇರಿದಂತೆ ಮೆಣಸೆ, ಬೇಗಾರು, ಕಿಗ್ಗಾ, ಕೆರೆಕಟ್ಟೆ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರಿ ಮಳೆ ಸುರಿಯಿತು. ನಿರಂತರ ಒಂದೇ ಸಮನೆ ಮಳೆ ಸುರಿಯಲಾರಂಬಿಸಿದ್ದರಿಂದ ಚರಂಡಿ, ರಸ್ತೆಗಳ ಮೇಲೆ ನೀರು ತುಂಬಿ ಹರಿಯಿತು. ಮಳೆ ಆರ್ಭಟಿಸುತ್ತಿದ್ದರೂ ಭಕ್ತರ ಸಂಖ್ಯೆ ಕಡಿಮೆಯಿರಲಿಲ್ಲ. ಸಂಜೆಯವರೆಗೂ ಮಳೆ ಮುಂದುವರೆದಿತ್ತು.

Share this article