ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಪ್ರಸಿದ್ಧ ಬಟ್ಟೆಗಳ ಮಳಿಗೆಯಾದ ಶ್ರೀನಿಧಿ ಸಿಲ್ಕ್ಸ್ ಆ್ಯಂಡ್ ಟೆಕ್ಸ್‌ಟೈಲ್ಸ್ 40ನೇ ವರ್ಷಾಚರಣೆ ಸಂದರ್ಭದಲ್ಲಿ ಆಯೋಜಿಸಲಾಗಿರುವ ಬಟ್ಟೆಗಳ ಮೇಲಿನ ವಿಶೇಷ ರಿಯಾಯಿತಿ ಮಾರಾಟಕ್ಕೆ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಚಾಲನೆ ನೀಡಿದರು.ರಾಷ್ಟ್ರೀಯ ಶಿಕ್ಷಣ ಸಮಿತಿಯ ಮೈದಾನದಲ್ಲಿ ಆಯೋಜನೆಗೊಂಡಿರುವ ಬಟ್ಟೆಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಚಾಲನೆ ನೀಡಿ ಮಾತನಾಡಿದ ಡಿ.ಎಸ್.ಅರುಣ್, ಒಂದು ವ್ಯಾವಹಾರಿಕ ಸಂಸ್ಥೆಗೆ 40 ವರ್ಷದ ಪರಂಪರೆ ಇದೆ ಎಂದರೆ ಅದು ಸುಲಭದ ವಿಷಯವಲ್ಲ. ಇದರ ಹಿಂದೆ ಸಂಸ್ಥೆಯನ್ನು ಹುಟ್ಟು ಹಾಕಿದವರ ದೂರದೃಷ್ಟಿ ಹಾಗೂ ನಡೆಸಿಕೊಂಡು ಬರುತ್ತಿರುವವರ ಪ್ರಾಂಜಲ ಪರಿಶ್ರಮ ಎರಡೂ ಸೇರಿದೆ ಎಂದು ಪ್ರಶಂಸಿಸಿದರು.ಅನಿರೀಕ್ಷಿತವಾಗಿ ಸುರಿದ ಮಳೆಯ ಕಾರಣದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಫ್ಯಾಶನ್ ಷೋಗಳ ರದ್ದು ಪಡಿಸಲಾಗಿದೆಯಾದರೂ, ಗ್ರಾಹಕರ ಹಿತ ದೃಷ್ಟಿಯಿಂದ ರಿಯಾಯ್ತಿ ಮಾರಾಟ ಏರ್ಪಡಿಸಿರುವುದು ಗಮನಾರ್ಹ ಎಂದ ಅವರು, ಇದರ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಆಶಿಸಿದರು.ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಸಂಘದ ಅಧ್ಯಕ್ಷ ಎನ್. ಗೋಪಿನಾಥ್‍ರವರು, ಶ್ರೀನಿ„ ಪರಂಪರೆಯೊಂದಿಗೆ ಶ್ರೇಷ್ಠ ಗುಣಮಟ್ಟ ಹಾಗೂ ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಂಡು ಬಂದಿರುವುದರಿಂದಲೇ ನಿರಂತರವಾಗಿ ನಾಲ್ಕು ದಶಕಗಳ ಕಾಲ ಮುನ್ನಡೆಯಲು ಸಾಧ್ಯವಾಗಿದೆ ಎಂದರು.ಕಾರ್ಯಕ್ರಮದಲ್ಲಿ ಶ್ರೀನಿಧಿ ಸಂಸ್ಥೆಯ ಹಿರಿಯರಾದ ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ, ಟಿ.ಆರ್.ವೆಂಕಟೇಶ ಮೂರ್ತಿ ಸೇರಿ ಕುಟುಂಬದ ಹಿರಿಯ ಕಿರಿಯ ಸದಸ್ಯರು ಹಾಜರಿದ್ದರು.ಇಂದು ಅದೃಷ್ಟ ಬಹುಮಾನದ ಬಂಪರ್ ಡ್ರಾಈ ಪ್ರದರ್ಶನ ಹಾಗೂ ಮಾರಾಟ ಮೇಳ ಬೆಳಗ್ಗೆ 10ರಿಂದ ಸಂಜೆ 8ರವರೆಗೆ ನಡೆಯಲಿದೆ. ಶ್ರೀನಿಧಿಯ ಅದೃಷ್ಟ ಬಹುಮಾನದ ಯೋಜನೆಯ ಬಹುಮಾನಗಳ ಬಂಪರ್ ಡ್ರಾ ಮೇ 19ರಂದು ಸಂಜೆ 6ಕ್ಕೆ ನಡೆಯಲಿದೆ. ರಾಷ್ಟ್ರೀಯ ಶಿಕ್ಷಣ ಸಮಿತಿಯ ಮೈದಾನದ ಆವರಣದಲ್ಲಿ, ನಿರ್ಮಿಸಲಾಗಿರುವ ವಿಶೇಷ ಜರ್ಮನ್ ಟೆಂಟ್‍ನಲ್ಲಿ ಈ ಡ್ರಾ ನಡೆಯಲಿದ್ದು, ನಗರದ ಗಣ್ಯರು, ಆಹ್ವಾನಿತರು ಹಾಗೂ ಗ್ರಾಹಕರು ನಡೆಸಿಕೊಡಲಿದ್ದಾರೆ ಎಂದು ತಿಳಿಸಲಾಗಿದೆ.ಪೋಟೊ: 18ಎಸ್‌ಎಂಜಿಕೆಪಿ08ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಮೈದಾನದಲ್ಲಿ ಆಯೋಜನೆಗೊಂಡಿರುವ ಬಟ್ಟೆಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಚಾಲನೆ ನೀಡಿದರು.