ಚಾಮರಾಜನಗರ: ದಿವಂಗತ ಮಾಜಿ ಸಚಿವ, ಹಾಲಿ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರು ನಮ್ಮಿಂದ ದೂರವಾಗಿರಬಹುದು ಆದರೆ ಅವರು ಮಾಡಿರುವ ಸಾಧನೆಗಳ ಮೂಲಕ ಅವರು ಎಂದೆಂದಿಗೂ ಅಚ್ಚಳಿಯದೆ ಉಳಿದಿದ್ದಾರೆ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.
ವಿ.ಶ್ರೀನಿವಾಸಪ್ರಸಾದ್ 6 ಬಾರಿ ಸಂಸದರಾಗಿದ್ದು, ಒಂದು ಬಾರಿ ಶಾಸಕರಾಗಿ, ಸಚಿವರಾಗಿದ್ದರು. ಸ್ವಾಭಿಮಾನಿ, ನೇರನುಡಿ ರಾಜಕಾರಣಿಯಾಗಿದ್ದರು. ಹೆಚ್ಚು ಕಾಲ ಕಾಂಗ್ರೆಸ್‌ನಲ್ಲಿದ್ದು ಪಕ್ಷದ ತಳಮಟ್ಟದಿಂದ ಕಟ್ಟಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಅಯೋಜಕ ಅಂಬೇಡ್ಕರ್ ಸೇನೆ ಜಿಲ್ಲಾಧ್ಯಕ್ಷ ಗಣೇಶ್‌ಪ್ರಸಾದ್, ಯುವ ಮುಖಂಡ ಮಹೇಶ್ ಕುದರ್, ಡಾ.ಎಸ್.ಪಿ.ಬಾಲಸುಬ್ರಮಣ್ಯಂ ಗಾನಗಂಧರ್ವ ಸಾಂಸ್ಕೃತಿಕ ಕಲಾವೇದಿಕೆ ಶಿವು, ಜಿಪಂ ಮಾಜಿ ಅಧ್ಯಕ್ಷೆ ನಾಗಶ್ರೀಪ್ರತಾಪ್, ತಾಪಂ ಮಾಜಿ ಸದಸ್ಯ ಚಿಕ್ಕಮಹದೇವು, ನಗರಸಭಾ ಸದಸ್ಯ ರಾಜಪ್ಪ, ಮಾಜಿ ಸದಸ್ಯ ಮಹಮ್ಮದ್ ಅಸ್ಗರ್, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಕೆ ರವಿಕುಮಾರ್, ಅಂತರಾಷ್ಟ್ರೀಯ ಜಾನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ, ಅಮಚವಾಡಿ ಶಿವಣ್ಣ, ಗೌತಮ್, ಅಮಿತ್, ದೀಪು, ಆರ್.ರಘುನಾಥ್, ರಾಮಸಮುದ್ರ ಬಸವರಾಜು ಹಾಜರಿದ್ದರು.