ಕನಕ ಸಮೃದ್ಧಿ ಸಹಕಾರ ಸಂಘದ ಅಧ್ಯಕ್ಷ ಶ್ರೀನಿವಾಸಯ್ಯ

KannadaprabhaNewsNetwork |  
Published : Mar 08, 2026, 01:45 AM IST
ಫೋಟೋ: 6 ಹೆಚ್‌ಎಸ್‌ಕೆ 1ಹೊಸಕೋಟೆ ನಗರದ ಕನಕ ಸಮೃದ್ದಿ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಶ್ರೀನಿವಾಸಯ್ಯ, ಉಪಾಧ್ಯಕ್ಷರಾಗಿ ಹೆಚ್.ಜಿ.ಮೋಹನ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದು ಚುನಾವಣಾಧಿಕಾರಿ ಮಾಧವರೆಡ್ಡಿ ಪ್ರಮಾಣ ಪತ್ರ ವಿತರಿಸಿ ಅಭಿನಂದಿಸಿದರು. | Kannada Prabha

ಸಾರಾಂಶ

ಹೊಸಕೋಟೆ: ನಗರದ ಕನಕ ನಗರದಲ್ಲಿರುವ ಕನಕ ಸಮೃದ್ಧಿ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಶ್ರೀನಿವಾಸಯ್ಯ, ಉಪಾಧ್ಯಕ್ಷರಾಗಿ ಎಚ್.ಜಿ.ಮೋಹನ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ

ಹೊಸಕೋಟೆ: ನಗರದ ಕನಕ ನಗರದಲ್ಲಿರುವ ಕನಕ ಸಮೃದ್ಧಿ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಶ್ರೀನಿವಾಸಯ್ಯ, ಉಪಾಧ್ಯಕ್ಷರಾಗಿ ಎಚ್.ಜಿ.ಮೋಹನ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಶ್ರೀನಿವಾಸಯ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಎಚ್.ಜಿ.ಮೋಹನ್ ಕುಮಾರ್ ಅವರನ್ನು ಹೊರತುಪಡಿಸಿ ಬೇರೆ ಯಾವೊಬ್ಬ ಸದಸ್ಯರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಮಾಧವರೆಡ್ಡಿ ಅವಿರೋಧ ಆಯ್ಕೆ ಘೋಷಿಸಿದರು.

ನೂತನ ಅಧ್ಯಕ್ಷ ಶ್ರೀನಿವಾಸಯ್ಯ ಮಾತನಾಡಿ, ಎಲ್ಲಾ ನಿರ್ದೇಶಕರು ಅವಿರೋಧವಾಗಿ ಆಯ್ಕೆ ಮಾಡಿ ಅಧ್ಯಕ್ಷನಾಗಿ ಕೆಲಸ ಮಾಡಲು ಅವಕಾಶ ಕೊಟ್ಟಿದ್ಧಾರೆ. ಮುಂದಿನ ದಿನಗಳಲ್ಲಿ ಸೊಸೈಟಿ ವಹಿವಾಟನ್ನು ಹೆಚ್ಚಳ ಮಾಡುವ ಮೂಲಕ ಲಾಭಾಂಶದತ್ತ ಕೊಂಡೊಯ್ಯಲು ಎಲ್ಲಾ ನಿರ್ದೇಶಕರ ಸಹಕಾರ ಕೋರಿದರು.

ಉಪಾಧ್ಯಕ್ಷ ಮೋಹನ್ ಕುಮಾರ್ ಮಾತನಾಡಿ, ಇತರೆ ಬ್ಯಾಂಕುಗಳಂತೆ ನಮ್ಮ ಸೊಸೈಟಿಯಲ್ಲೂ ಸಹ ಚಿನ್ನಾಭರಣ ಸಾಲ, ಗೃಹ ನಿರ್ಮಾಣ ಮತ್ತು ಖರೀದಿಗಾಗಿ ಸಾಲ, ಸ್ಥಿರಾಸ್ತಿ ಅಡಮಾನ ಸಾಲ, ಸ್ವಸಹಾಯ ಗುಂಪುಗಳ ಸಾಲ ಹಾಗೂ ಠೇವಣಿಗೆ ಬಡ್ಡಿ ಸಹ ನೀಡಲಿದ್ದೇವೆ. ಷೇರುದಾರರು ಧೈರ್ಯವಾಗಿ ವಹಿವಾಟು ಮಾಡಬಹುದು ಎಂದರು.

ನೂತನ ನಿರ್ದೇಶಕರಾದ ಮುನಿಶಾಮಣ್ಣ, ಎಂ.ಎ.ಕೃಷ್ಣಾರೆಡ್ಡಿ, ಕೆಎಂ.ಮುನಿರಾಜು, ಸಿ.ಮುನಿಯಪ್ಪ, ಜೆ.ಕೃಷ್ಣಮೂರ್ತಿ, ಸಂಪತ್ ಕುಮಾರ್, ಎ.ನಾರಾಯಣಸ್ವಾಮಿ, ಅಶ್ವಥ್, ಎನ್.ಮಂಜುನಾಥ್, ಹೇಮಲತಾ, ಶೋಭಾ ನಾಗರಾಜ್, ಮುಖ್ಯ ಕಾರ್ಯನಿರ್ವಾಹಕಿ ಎಸ್.ಎಂ.ವಿದ್ಯಾಶ್ರೀ, ಅಕೌಂಟೆಂಟ್ ಬಿ.ಎಸ್.ಪೂಜಾ ಸಿಬ್ಬಂದಿ ವರ್ಗ ಹಾಜರಿದ್ದರು.

ಫೋಟೋ: 6 ಹೆಚ್‌ಎಸ್‌ಕೆ 1

ಹೊಸಕೋಟೆಉ ಕನಕ ಸಮೃದ್ಧಿ ಕೋ ಆಪರೇಟಿವ್ ಸೊಸೈಟಿ ಅವಿರೋಧ ಆಯ್ಕೆಯಾಗಿರುವ ಅಧ್ಯಕ್ಷ ಶ್ರೀನಿವಾಸಯ್ಯ, ಉಪಾಧ್ಯಕ್ಷ ಎಚ್.ಜಿ.ಮೋಹನ್ ಕುಮಾರ್ ಅವರನ್ನು ನಿರ್ದೇಶಕರು ಅಭಿನಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.15ರ ಒಳ ಮೀಸಲಾತಿಯನ್ನು ಗ್ರೂಪ್‌ ಎಬಿಸಿ ವರ್ಗಿಕರಣದಂತೆ ಜಾರಿಗೊಳಿಸಿ
ಗೆಜ್ಜಲಗೆರೆ ಗ್ರಾಪಂ ನಗರಸಭೆಗೆ ಕೈ ಬಿಡುವವರೆಗೂ ಚುನಾವಣೆಗಳ ಮತದಾನ ಬಹಿಷ್ಕರಿಸಲು ತೀರ್ಮಾನ