ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
20 ವರ್ಷ ಒಳಪಟ್ಟ ಹಾಗೂ 21 ವರ್ಷದಿಂದ 50 ವರ್ಷದ ವಯೋಮಾನದ ಮಹಿಳೆಯರು ಮತ್ತು ಪುರುಷರ ಪ್ರತ್ಯೇಕ ತಂಡಗಳಿಗೆ ನಡೆದ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಅಂತಿಮವಾಗಿ 20 ವರ್ಷ ಒಳಪಟ್ಟವರ ಪುರುಷರ ವಿಭಾಗದಲ್ಲಿ ಅರಳಿಕಟ್ಟೆ ಬಾಯ್ಸ್ ತಂಡ-ಪ್ರಥಮ ಸ್ಥಾನ ಮತ್ತು ಶ್ರೀರಂಗಪಟ್ಟಣ ಬಾಯ್ಸ್ ತಂಡ -ದ್ವಿತೀಯ ಸ್ಥಾನ ಪಡೆದರೆ, ಮಹಿಳೆಯರ ವಿಭಾಗದಲ್ಲಿ ಕುಮಾರಿ ಹರ್ಷಿತ ಮತ್ತು ತಂಡ -ಪ್ರಥಮ ಸ್ಥಾನ ಹಾಗೂ ಕುಮಾರಿ ವರ್ಷಿತ ಮತ್ತು ತಂಡ- ದ್ವಿತೀಯ ಸ್ಥಾನ ಪಡೆಯಿತು.
21 ರಿಂದ 50 ವರ್ಷ ಒಳಪಟ್ಟವರ ಪುರುಷರ ವಿಭಾಗದಲ್ಲಿ ಅರಳಿಕಟ್ಟೆ ಬಾಯ್ಸ್ ತಂಡ- ಪ್ರಥಮ ಸ್ಥಾನ ಮತ್ತು ಶ್ರೀರಂಗಪಟ್ಟಣ ಪೊಲೀಸ್ ತಂಡ-ದ್ವಿತೀಯ ಸ್ಥಾನ ಪಡೆದರೆ, ಮಹಿಳೆಯರ ವಿಭಾಗದಲ್ಲಿ ಅಗ್ರಹಾರ ಮಂಜುಳ ತಂಡ- ಪ್ರಥಮ ಸ್ಥಾನ ಹಾಗೂ ಶ್ರೀರಂಗಪಟ್ಟಣ ರೋಟರಿ ತಂಡ- ದ್ವಿತೀಯ ಸ್ಥಾನ ಪಡೆಯಿತು.