ಶ್ರೀರಂಗಪಟ್ಟಣ ಅದ್ಧೂರಿ ದಸರಾಗೆ ಅಂತಿಮ ತೆರೆ

KannadaprabhaNewsNetwork | Published : Oct 8, 2024 1:13 AM

ಸಾರಾಂಶ

ಭಾರತಿನಗರ ಕಾಲೇಜಿನಿಂದ ಪೌರಾಣಿಕ ನಾಟಕ ದೃಶ್ಯ, ಪಾಂಡವಪುರ ಸರ್ಕಾರಿ ಪದವ ಪೂರ್ವ ಕಾಲೇಜಿನಿಂದ ಸಮೂಹ ನೃತ್ಯ (ಕನ್ನಡ- ನಾಡು- ಪರಂಪರೆ), ಹನುಮಂತನಗರ ಭಾರತಿ ಪದವಿ ಪೂರ್ವ ಕಾಲೇಜಿನಿಂದ ವೈಶಂಪಾಯನ ಸರೋವರದಲ್ಲಿ ದುರ್ಯೋಧನ ಪ್ರಹಸನಗಳನ್ನೊಗೊಂಡ ಯುವ ದಸರಾ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯ್ತಿ ವತಿಯಿಂದ ಅ.4ರಿಂದ 7ರವರೆಗೆ ನಾಲ್ಕು ದಿನಗಳ ಕಾಲ ನಡೆದ ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ಸೋಮವಾರ ಅಂತಿಮತೆರೆ ಬಿದ್ದಿತು.

ಮಕ್ಕಳ ಚಲನಚಿತ್ರಗಳ ಸಿನಿಮೋತ್ಸವ ಪ್ರಯುಕ್ತ ಗಂಜಾಂನ ಶ್ರೀದೇವಿ ಚಿತ್ರಮಂದಿರದಲ್ಲಿ ''''ಅನ್ನ'''', ಬಾಬುರಾಯನ ಕೊಪ್ಪಲುನ ಭಾರತಿ ಚಿತ್ರಮಂದಿರದಲ್ಲಿ ''''ನಾನು ಸಚಿನ್ ತೆಂಡೂಲ್ಕರ್ ಅಲ್ಲ'''' ಹಾಗೂ ಅರಕೆರೆ ಮಂಜುನಾಥ್ ಚಿತ್ರಮಂದಿರದಲ್ಲಿ ''''ಜೀರ್ಜಿಂಬೆ'''' ಮಕ್ಕಳ ಚಲನಚಿತ್ರಗಳು ಪ್ರದರ್ಶನಗೊಂಡವು.

ಮಧ್ಯಾಹ್ನ 12 ರಿಂದ 1.30 ರವರೆಗೆ ಯುವ ದಸರಾ ನಡೆಯಿತು. ಶ್ರೀರಂಗಪಟ್ಟಣ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಸಾಧನೆ ಬಗ್ಗೆ ಸಮೂಹ ನೃತ್ಯ, ಆರಾಧನಾ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ನೃತ್ಯ (ನವದುರ್ಗೆಯರು), ನಗುವನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ಸಮೂಹ ನೃತ್ಯ (ಜಾನಪದ ಕಲೆ ಆಧಾರಿತ), ಅರಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ಸಮೂಹ ನೃತ್ಯ (ಕನ್ನಡ ನಾಡು ನುಡಿ), ಶ್ರೀರಂಗಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಂದ ನೃತ್ಯ (ಅರ್ಜುನ ಆನೆಯ ಬಗ್ಗೆ), ಪರಿವರ್ತನಾ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ಜಾನಪದ ಸಮೂಹ ಗೀತ ಗಾಯನಗಳು ಪ್ರೇಕ್ಷಕರನ್ನು ರಂಜಿಸಿದವು.

ಭಾರತಿನಗರ ಕಾಲೇಜಿನಿಂದ ಪೌರಾಣಿಕ ನಾಟಕ ದೃಶ್ಯ, ಪಾಂಡವಪುರ ಸರ್ಕಾರಿ ಪದವ ಪೂರ್ವ ಕಾಲೇಜಿನಿಂದ ಸಮೂಹ ನೃತ್ಯ (ಕನ್ನಡ- ನಾಡು- ಪರಂಪರೆ), ಹನುಮಂತನಗರ ಭಾರತಿ ಪದವಿ ಪೂರ್ವ ಕಾಲೇಜಿನಿಂದ ವೈಶಂಪಾಯನ ಸರೋವರದಲ್ಲಿ ದುರ್ಯೋಧನ ಪ್ರಹಸನಗಳನ್ನೊಗೊಂಡ ಯುವ ದಸರಾ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.

ಶ್ರೀರಂಗನಾಥಸ್ವಾಮಿ ದೇವಾಲಯದ ಆವರಣದ ಶ್ರೀರಂಗ ವೇದಿಕೆಯಲ್ಲಿ ಜನಪದ ಗೀತೆ, ಜನಪದ ಸಂಗೀತ, ಭರತನಾಟ್ಯ, ಜಾನಪದ ನೃತ್ಯ ಸುಗಮ ಸಂಗೀತ, ಸೋಬಾನೆಪದ ಜನರ ಮನಸೂರೆಗೊಂಡವು.

ರಾತ್ರಿ 8 ಗಂಟೆಗೆ ಅರ್ಜುನ್ ಜನ್ಯ ಮತ್ತು ತಂಡದಿಂದ ಸಂಗೀತ ರಸ ಸಂಜೆ ಕಾರ್ಯಕ್ರಮ ನಡೆಯಿತು.

Share this article