ಕನ್ನಡಪ್ರಭ ವಾರ್ತೆ ಕಲಬುರಗಿ
2024-25ನೇ ಸಾಲಿನಲ್ಲಿ ಎಸ್. ಆರ್. ಎನ್. ಮೆಹತಾ ಸಿಬಿಎಸ್ಇ ಶಾಲೆಯು ಶೇಕಡಾ 98 ರಷ್ಟು ಫಲಿತಾಂಶ ಪಡೆದಿದ್ದು, ಪರೀಕ್ಷೆಗೆ ಕುಳಿತ 96 ಮಕ್ಕಳಲ್ಲಿ 94 ಮಕ್ಕಳು ತೇರ್ಗಡೆಯಾಗಿದ್ದಾರೆ.
ಐಶ್ವರ್ಯಾ 490/500 (98%) ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ, ಮತ್ತು ಮೊಹಮ್ಮದ್ ಜೋಹೇರ್ ಮುಭೀನ 476/500 (95.2%) ಅಂಕಗಳನ್ನು ಪಡೆದು ದ್ವೀತಿಯ ಸ್ಥಾನ ಪಡೆದಿದ್ದಾನೆ. ಶೇ. 90 ಕ್ಕಿಂತ ಮೇಲ್ಪಟ್ಟು 15, ಮಕ್ಕಳು, ಶೇ. 85 ರಿಂದ 90 ರವರೆಗೆ 12 ಮಕ್ಕಳು, 31 ಮಕ್ಕಳು ಶೇ. 12, 75 ರಿಂದ 85 ರವರೆಗೆ ಫಲಿತಾಂಶ ಪಡೆದಿದ್ದಾರೆ.ಒಟ್ಟು 27 ಮಕ್ಕಳು ಶೇ. 85 ಕ್ಕಿಂತ ಮೇಲೆ , 57 ಮಕ್ಕಳು ಪ್ರಥಮ ಶ್ರೇಣಿ, 10 ಮಂದಿ ದ್ವಿತೀಯ ಶ್ರೇಣಿಯಲ್ಲಿ ಪಾಸಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ.
ಶಾಲೆಯಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾದ ಮಕ್ಕಳು ಸೇರಿದಂತೆ ಪಾಸಾದ ಎಲ್ಲಾ ಮಕ್ಕಳಿಗೆ ಶಾಲೆಯ ಆಡಳಿತ ಮಂಡಳಿಯವರು, ಬೋಧಕರು ಶುಭ ಕೋರಿದ್ದಾರೆ.