- ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಹೇಳಿಕೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹಿಂದಿನಿಂದಲೂ ಕಾಂಗ್ರೆಸ್ ಮಹಿಳಾ ವಿರೋಧಿ ನಡವಳಿಕೆ ಇತಿಹಾಸವಿರುವ ಪಕ್ಷ. ಸಂದೇಶ ಕಲಿಯಾ ಮೇಲೆ ಅತ್ಯಾಚಾರ ಮಾಡಿದ ಶಹಜಹಾನ್‌ಗೆ ಕಾಂಗ್ರೆಸ್ ರಕ್ಷಿಸಿದರೆ, ನಿರಂತರ ಅತ್ಯಾಚಾರಕ್ಕೊಳಗಾಗಿ ನೊಂದ ರೇಖಾ ಪಾತ್ರಾಗೆ ಬಿಜೆಪಿ ಟಿಕೆಟ್ ಘೋಷಿಸಿ, ನಾರಿಶಕ್ತಿಗೆ ಗೌರವ ನೀಡುವ ಮೂಲಕ ಸಾಂತ್ವನ ಹೇಳಿದೆ ಎಂದು ತಿಳಿಸಿದರು.
ಹಾವೇರಿ ಅತ್ಯಾಚಾರ ಪ್ರಕರಣ, ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ, ನಾಸೀರ್ ಹುಸೇನ್ ಪ್ರಕರಣದಲ್ಲಿ ಕಾಂಗ್ರೆಸ್ಸಿನ ಸಾಫ್ಟ್ ಕಾರ್ನರ್ ತೋರಿಸುತ್ತದೆ. ಅಲ್ಪಸಂಖ್ಯಾತರು 140 ಕೋಟಿ ಜನರೊಂದಿಗೆ ಇದ್ದಾರೆ. ಎಲ್ಲರೂ ಮೋದಿ ಪರಿವಾರವಾಗಿದ್ದಾರೆ. ಮನೇಕಾ ಗಾಂಧಿ, ಎಲ್ಲ ಭಾರತೀಯರು ಮೋದಿ ಪರಿವಾರವಾಗಿದ್ದಾರೆ. ಇದನ್ನು ಕಾಂಗ್ರೆಸ್ ಮನಗಾಣಲಿ ಎಂದು ಹೇಳಿದರು.ಪಕ್ಷದ ರಾಜ್ಯ ಮಹಿಳಾ ಕಾರ್ಯದರ್ಶಿ, ಮಾಜಿ ಮೇಯರ್ ಸುಧಾ ಜಯರುದ್ರೇಶ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಭಾಗ್ಯ ಪಿಸಾಳೆ, ಕುಮಾರಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲಕುಮಾರ ನಾಯಕ್ ಇತರರು ಇದ್ದರು.