ಎಸ್ಸೆಸ್ಸೆಲ್ಸಿ ಪರೀಕ್ಷೆ: ಖಾಸಗಿ ಶಾಲಾ ಪರೀಕ್ಷಾ ಕೇಂದ್ರಕ್ಕೆ ಕೊಕ್‌

KannadaprabhaNewsNetwork |  
Published : Mar 25, 2024, 12:50 AM IST
ಚಿತ್ರ ಶೀರ್ಷಿಕೆ 24ಜಿಬಿ13ಆಳಂದ: ತಾಲೂಕು ಆಡಳಿತ ಸೌಧ ಹತ್ತಿರದ ಸೀಡ್ಸ್‍ಫಾರಂ ತಾಂಡಾ ಸರ್ಕಾರಿ ಶಾಲೆಗೆ ತಾಲೂಕಿನಲ್ಲಿ ನಡೆಯುವ 10ನೇ ಪರೀಕ್ಷಾ ಕೇಂದ್ರಗಳ ವೆಬ್‍ಕಾಸ್ಟಿಂಗ್ ನಿಯಂತ್ರಣ ಕೇಂದ್ರವನ್ನು ಸ್ಥಾಪಿಸಲಾಗಿದೆ.  | Kannada Prabha

ಸಾರಾಂಶ

10ನೇ ತರಗತಿ ಮಕ್ಕಳ ವಾರ್ಷಿಕ ಬೋರ್ಡ್ ಪರೀಕ್ಷೆ ಇಂದಿನಿಂದ (ಮಾ.25ರಿಂದ ಏ.6ರ ವರೆಗೆ) ನಡೆಯಲಿದ್ದು, ಈ ಕುರಿತು ಪರೀಕ್ಷೆ ಬರೆಯುವ ಮಕ್ಕಳ ಅಂಕಿ ಸಂಖ್ಯೆ ಕುರಿತಾದ ಹೆಚ್ಚಿನ ಮಾಹಿತಿ ಸೇರಿ ಯಾವುದೇ ಮಾಹಿತಿ ನೀಡದಂತೆ ಆಯಾ ಶಿಕ್ಷಣಾಧಿಕಾರಿಗಳಿಗೆ ಆಯುಕ್ತರು ಸೂಚನೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಆಳಂದ

10ನೇ ತರಗತಿ ಮಕ್ಕಳ ವಾರ್ಷಿಕ ಬೋರ್ಡ್ ಪರೀಕ್ಷೆ ಇಂದಿನಿಂದ (ಮಾ.25ರಿಂದ ಏ.6ರ ವರೆಗೆ) ನಡೆಯಲಿದೆ.

ಈ ಕುರಿತು ಪರೀಕ್ಷೆ ಬರೆಯುವ ಮಕ್ಕಳ ಅಂಕಿ ಸಂಖ್ಯೆ ಕುರಿತಾದ ಹೆಚ್ಚಿನ ಮಾಹಿತಿ ಸೇರಿ ಯಾವುದೇ ಮಾಹಿತಿ ನೀಡದಂತೆ ಆಯಾ ಶಿಕ್ಷಣಾಧಿಕಾರಿಗಳಿಗೆ ಆಯುಕ್ತರು ಸೂಚನೆ ನೀಡಿದ್ದಾರೆ ಎಂದು ಮಾಹಿತಿ ನೀಡಲು ಕ್ಷೇತ್ರ ಶಿಕ್ಷಣಾಧಿಕಾರಿ ಹಣಮಂತರಾವ್ ಹಿಂದೇಟು ಹಾಕಿದ್ದಾರೆ.

ಈ ನುಡುವೆ ಶಿಕ್ಷಣ ಇಲಾಖೆ ಪರೀಕ್ಷಾ ಕೇಂದ್ರಗಳಲ್ಲಿ ನಕಲು ತಡೆಗೆ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಸಿಸಿ ಅಳವಡಿಸಿದ ಕೇಂದ್ರಗಳ ನಿಗಾವಹಿಸಲು ಆಳಂದ ಹೊರವಲಯದ ಸೀಡ್ಸ್ ಫಾರಂ ತಾಂಡಾ ಸರ್ಕಾರಿ ಶಾಲೆಯಲ್ಲಿ ನಿಗಾ ಕೇಂದ್ರ ಸ್ಥಾಪಿಸಿರುವ ಶಿಕ್ಷಣ ಇಲಾಖೆಯ ಕಟ್ಟುನಿಟ್ಟಿನಿಂದ ಪರೀಕ್ಷೆ ನಡೆಸಲು ಮುಂದಾಗಿದೆ.

ಇದರಿಂದಾಗಿ ನಕಲು ಮಾಡುವುದಾಗಲಿ ಅಥವಾ ಅದಕ್ಕೆ ಪೂರಕವಾಗಿ ಸಹಕರಿಸುವುದಾಗಲಿ ಸಂಪೂರ್ಣವಾಗಿ ಕಡಿವಾಣ ಹಾಕುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯೂ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ಕೇಂದ್ರಗಳಲ್ಲಿ ನಡೆಯುವ ಚಲನವಲನಗಳ ಮೇಲೆ ನಿಗಾ ಕೇಂದ್ರದಲ್ಲೇ ಕುಳಿತು ಮೇಲಾಧಿಕಾರಿಗಳ ನಿಗಾವಹಿಸಲು ಮುಂದಾಗಿದ್ದಾರೆ. ಅಲ್ಲದೆ, ಕೊಠಡಿ ಮೇಲ್ವಿಚಾರಕರಾಗಲಿ ಪರೀಕ್ಷಾ ಸಿಬ್ಬಂದಿ ಮೇಲೂ ಸಹ ಈ ಬಾರಿ ಹೆಚ್ಚಿನ ನಿಗಾವಹಿಸಲಿದೆ.

ಮೂರು ಅವಕಾಶ: ಈ ಬಾರಿ ವಿದ್ಯಾರ್ಥಿಗಳಿಗೆ ಮೂರು ಬಾರಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದೆ. ಮಾ.25ರಂದು ನಡೆಯುವ ಮೊದಲು ಪರೀಕ್ಷೆಯಲ್ಲಿ ಅಂಕ ಕಡಿಮೆ ಎನಿಸಿದರೆ ಮತ್ತೆ ನಡೆಸುವ 2ನೇ ಪರೀಕ್ಷೆ ಬರೆಯಬಹುದಾಗಿದೆ. ಈ ಪರೀಕ್ಷೆಯಲ್ಲೂ ಪಡೆದ ಅಂಕ ತೃಪಿ ತರದಿದ್ದರೆ 3ನೇ ಬಾರಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಸಿರುವ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಭಯ ನಿವಾರಿಸುವ ನಿಟ್ಟಿನಲ್ಲಿ ಮೊದಲು ಪ್ರಯೋಗ ಮತ್ತು ಹೊಸ ಪ್ರಯೋಗ ಮಾಡಿದೆ. ಒಂದೊಮ್ಮೆ ವಿದ್ಯಾರ್ಥಿ ಓರ್ವ ಮೂರು ಪರೀಕ್ಷೆ ಬರೆದರು ಸಹಿತ ಹೆಚ್ಚು ಅಂಕಪಡೆದ ಪರೀಕ್ಷೆಯ ಫಲಿತಾಂಶವನ್ನೇ ಪರಿಗಣಿಸಲಿದೆ.

ಕೈಬಿಟ್ಟ ಖಾಸಗಿ ಶಾಲೆಯಲ್ಲಿನ ಕೇಂದ್ರ: ಈ ಬಾರಿಯೂ 10ನೇ ಪರೀಕ್ಷಾ ಕೇಂದ್ರವು ಪ್ರತಿಷ್ಠಿತ ಖಾಸಗಿ ಶಾಲೆ ಹೊರಗಿಟ್ಟಿರುವ ಇಲಾಖೆ ಕಡಗಂಚಿ ಮೌಂಟ್ ಕಾಮೇಲ್ ಶಾಲೆ ಹೊರತುಪಡಿಸಿ 13 ಪರೀಕ್ಷಾ ಕೇಂದ್ರಗಳನ್ನು ತನ್ನ ಸರ್ಕಾರಿ ಶಾಲಾ ಕಾಲೇಜು ಕಟ್ಟಡಗಳಲ್ಲೇ ನಡೆಸಲಿದೆ.

ಒಟ್ಟು ತಾಲೂಕಿನ 14 ಕೇಂದ್ರಗಳು ಪೈಕಿ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು, ಆಲ್‍ಫಾರುಕ್ ಶಾಲೆ, ಹೆಬಳಿ ರಸ್ತೆಯ ಸರ್ಕಾರಿ ಆದರ್ಶ ಶಾಲೆ, ಗ್ರಾಮೀಣ ಭಾಗದ ಖಜೂರಿಯ ಸರ್ಕಾರಿ ಪದವಿ ಪೂರ್ವ ಕಾಲೇಜು, ತಡಕಲ್ ಮುರಾರ್ಜಿ ದೇಸಾಯಿ ವಸತಿ ಶಾಲೆ, ವಿ.ಕೆ.ಸಲಗರ ಸರ್ಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆ, ಕೊರಳ್ಳಿ ರಸ್ತೆಯ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ, ನಿಂಬರಗಾದ ಸರ್ಕಾರಿ ಪಿಯು ಕಾಲೇಜು, ಯಳಸಂಗಿ ಸರ್ಕಾರಿ ಪಿಯು ಕಾಲೇಜು, ಸರಸಂಬಾದ ಸರ್ಕಾರಿ ಪ್ರೌಢಶಾಲೆ, ಮಾದನಹಿಪ್ಪರಗಾದ ಕರ್ನಾಟಕ ಪಬ್ಲಿಕ್ ಶಾಲೆ, ಕಡಗಂಚಿಯ ಹೊರವಲಯದ ಮೌಂಟ್ ಕಾರ್ಮೆಲ್ ಶಾಲೆ, ನರೋಣಾ ಸರ್ಕಾರಿ ಪಿಯು ಕಾಲೇಜುಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಿ ಹೊಸ ಪದ್ಧತಿ ಕೈಗೊಂಡಿರುವ ಶಿಕ್ಷಣ ಇಲಾಖೆಯೂ ಪ್ರತಿ ಪರೀಕ್ಷಾ ಕೇಂದ್ರಕ್ಕೆ ಸಿಸಿ ಕ್ಯಾಮಿರಾ ಅಳವಡಿಸಿ ವೆಬ್‍ಕಾಸ್ಟಿಂಗ್ ಮೂಲಕ ಒಂದೆ ಸ್ಥಳದಲ್ಲಿ ನಿಯಂತ್ರಣ ಕೋಠಡಿಯ ಮೂಲಕ ಚಲವಲನಗಳನ್ನು ವೀಕ್ಷಿಸಿ ನಿಗಾವಹಿಸಲು ಮುಂದಾಗಿದೆ.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ