ಎಸ್‌ಎಸ್‌ಎಲ್‌ಸಿ ಫಲಿತಾಂಶ: ದ.ಕ. ರಾಜ್ಯಕ್ಕೆ ಅಗ್ರ, ಉಡುಪಿ ದ್ವಿತೀಯ

KannadaprabhaNewsNetwork |  
Published : Apr 25, 2026, 03:30 AM IST
ಜಿ.ಎಸ್‌.ಶಶಿಧರ್‌  | Kannada Prabha

ಸಾರಾಂಶ

ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಶೇಕಡಾ 98.40 ಅಂಕದೊಂದಿಗೆ ಅಗ್ರ ಸ್ಥಾನ ಕಾಯ್ದುಕೊಂಡಿದೆ. ಕಳೆದ ವರ್ಷ ಕೂಡ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದಿತ್ತು. ಉಡುಪಿ ದ್ವಿತೀಯ ಸ್ಥಾನಿಯಾಗಿತ್ತು. ಈ ಬಾರಿಯೂ ಎರಡೂ ಜಿಲ್ಲೆಗಳು ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಉಳಿಸಿಕೊಂಡಿವೆ.

ಮಂಗಳೂರು: ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಶೇಕಡಾ 98.40 ಅಂಕದೊಂದಿಗೆ ಅಗ್ರ ಸ್ಥಾನ ಕಾಯ್ದುಕೊಂಡಿದೆ. ಕಳೆದ ವರ್ಷ ಕೂಡ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದಿತ್ತು. ಉಡುಪಿ ದ್ವಿತೀಯ ಸ್ಥಾನಿಯಾಗಿತ್ತು. ಈ ಬಾರಿಯೂ ಎರಡೂ ಜಿಲ್ಲೆಗಳು ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಉಳಿಸಿಕೊಂಡಿವೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರೀಕ್ಷೆಗೆ ಒಟ್ಟು 27,207 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 2,771 ಮಂದಿ ಉತ್ತೀರ್ಣರಾಗಿದ್ದು, 436 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಉತ್ತೀರ್ಣರಾದವರಲ್ಲಿ 13,572 ಬಾಲಕರು ಹಾಗೂ 13,200 ಬಾಲಕಿಯರು. ಶೇ.97.64 ಫಲಿತಾಂಶವನ್ನು ಬಾಲಕರು ದಾಖಲಿಸಿದರೆ, ಶೇ. 99.20 ಫಲಿತಾಂಶವನ್ನು ಬಾಲಕಿಯರು ದಾಖಲಿಸಿದ್ದಾರೆ.

ಶೇಕಡಾವಾರು ಪ್ರಮಾಣದಲ್ಲಿಯೂ ಜಿಲ್ಲೆಯ ಫಲಿತಾಂಶ ಹೆಚ್ಚಳವಾಗಿದೆ. ಕಳೆದ ವರ್ಷ ಶೇಕಡಾ 94.41 ಫಲಿತಾಂಶ ದಾಖಲಾಗಿದ್ದರೆ, ಈ ಬಾರಿ 98.40ಕ್ಕೆ ಏರಿಕೆಯಾಗಿದೆ. ದ.ಕ. ಜಿಲ್ಲೆ ರಾಜ್ಯಕ್ಕೆ ಪ್ರಥಮ ಆದರೂ ಟಾಪರ್‌ಗಳ ಪಟ್ಟಿಯಲ್ಲಿ ದ.ಕ. ಜಿಲ್ಲೆಗೆ ಸ್ಥಾನ ಲಭಿಸದಿರುವುದು ಅಚ್ಚರಿಗೆ ಕಾರಣವಾಗಿದೆ. 2021-2022ನೇ ಶೈಕ್ಷಣಿಕ ವರ್ಷದಲ್ಲಿ ರಾಜ್ಯದಲ್ಲಿ 21ನೇ ಸ್ಥಾನದಲ್ಲಿದ್ದ ದ.ಕ. ಜಿಲ್ಲೆ 2022-2023ನೇ ಸಾಲಿನಲ್ಲಿ 17ನೇ ಸ್ಥಾನ ತಲುಪಿತ್ತು. 2025ರಲ್ಲಿ ದ.ಕ. ಜಿಲ್ಲೆಯಲ್ಲಿ 27,795 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ, 25,326 ಮಂದಿ ಉತ್ತೀರ್ಣರಾಗಿ ಶೇ.91.12 ಫಲಿತಾಂಶ ದಾಖಲಾಗಿತ್ತು.

ತಾಲೂಕುವಾರು ಸಾಧನೆ:

ದ.ಕ. ಜಿಲ್ಲೆಯ ಏಳು ಕ್ಷೇತ್ರ ಶಿಕ್ಷಣ ಬ್ಲಾಕ್‌ಗಳಲ್ಲಿ ಅತ್ಯಧಿಕ ಫಲಿತಾಂಶ ದಾಖಲಾಗಿದೆ.

ಬಂಟ್ವಾಳ ಶೇ.97.87, ಬೆಳ್ತಂಗಡಿ ಶೇ.99.05, ಮಂಗಳೂರು ಉತ್ತರ ಶೇ. 98.20, ಮಂಗಳೂರು ದಕ್ಷಿಣ ಶೇ. 98.32, ಮೂಡುಬಿದಿರೆ ಶೇ. 99.53, ಪುತ್ತೂರು ಶೇ.99.10 ಹಾಗೂ ಸುಳ್ಯ ಶೇ.99.10 ಫಲಿತಾಂಶ ದಾಖಲಿಸಿದೆ.

ಸರ್ಕಾರಿ ಶಾಲೆಗಳಲ್ಲೇ ಶೇ.ನೂರು ಫಲಿತಾಂಶ:

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಒಟ್ಟು 349 ಶಾಲೆಗಳು ಶೇ.ನೂರು ಫಲಿತಾಂಶ ಪಡೆದಿವೆ. ಇದರಲ್ಲಿ 110 ಸರ್ಕಾರಿ, 50 ಅನುದಾನಿತ ಹಾಗೂ 189 ಅನುದಾನ ರಹಿತ ಶಾಲೆಗಳು ಸೇರಿವೆ. ಬಂಟ್ವಾಳದಲ್ಲಿ 55, ಬೆಳ್ತಂಗಡಿ 53, ಮಂಗಳೂರು ಉತ್ತರ 65, ಮಂಗಳೂರು ದಕ್ಷಿಣ 67, ಮೂಡುಬಿದಿರೆ 25, ಪುತ್ತೂರು 54, ಸುಳ್ಯ 30 ಶಾಲೆಗಳು ಶೇ.ನೂರು ಫಲಿತಾಂಶ ದಾಖಲೆಯ ಹೆಗ್ಗಳಿಕೆ ಪಡೆದುಕೊಂಡಿವೆ.ಈ ಬಾರಿ ಬಾಲಕರು ಮೇಲುಗೈ: ಪ್ರತಿ ಬಾರಿಯೂ ಎಸ್ಸೆಸೆಲ್ಸಿ ಮತ್ತು ಪಿಯುಸಿ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸುತ್ತಿದ್ದರು. ಆದರೆ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬಾಲಕರು ಮೇಲುಗೈ ಸಾಧಿಸಿದ್ದಾರೆ. ತೇರ್ಗಡೆಯಾದವರ ಪೈಕಿ ೧೩,೫೭೨ ಬಾಲಕರಾದರೆ, ೧೩,೨೦೦ ಬಾಲಕಿಯರಾಗಿದ್ದಾರೆ.ದ.ಕ. ಜಿಲ್ಲೆಗೆ ಇಬ್ಬರು ಟಾಪರ್‌

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮಂಗಳೂರಿನ ಇಬ್ಬರು ದ.ಕ. ಜಿಲ್ಲೆಗೇ ಪ್ರಥಮ ಸ್ಥಾನ ಹಂಚಿಕೊಂಡಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಮಂಗಳೂರು ಡೊಂಗರಕೇರಿಯ ಕೆನರಾ ಹೈಸ್ಕೂಲ್‌ ಮೈನ್‌ ವಿದ್ಯಾರ್ಥಿನಿ ಶ್ರೀನಿಧಿ ಶೆಣೈ ಹಾಗೂ ಆಂಗ್ಲ ಮಾಧ್ಯಮದಲ್ಲಿ ಮಂಗಳೂರು ಬೊಂದೇಲ್‌ನ ಸೇಂಟ್‌ ಲಾರೆನ್ಸ್‌ ಇಂಗ್ಲಿಷ್‌ ಮೀಡಿಯಂ ಸ್ಕೂಲ್‌ನ ಸಾಹಿತ್ಯ ಕೆ. 625ರಲ್ಲಿ 623 ಸಮಾನ ಅಂಕ ಹಂಚಿಕೊಂಡಿದ್ದಾರೆ.

ಕೆನರಾ ಹೈಸ್ಕೂಲ್‌ನ ಶ್ರೀನಿಧಿ ಶೆಣೈ ತಂದೆ ಬಿ.ನಾರಾಯಣ ಶೆಣೈ ಅವರು ಮೆಸ್ಕಾಂ ಪುತ್ತೂರು ವಿಭಾಗದಲ್ಲಿ ಉದ್ಯೋಗಿಯಾಗಿದ್ದು, ತಾಯಿ ಬಿ.ವಿಜಯ ಶೆಣೈ ಮನೆ ವಾರ್ತೆ. ಶ್ರೀನಿಧಿಯ ಅಣ್ಣ ಬೆಂಗಳೂರಿನಲ್ಲಿ ಎಂಜಿನಿಯರಿಂಗ್‌ ಕಲಿಯುತ್ತಿದ್ದು, ಇವರು ಇಬ್ಬರೇ ಮಕ್ಕಳು. ಶ್ರೀನಿಧಿ ನಿರಂತರ ಕಲಿಕೆಯಲ್ಲಿ ಮಾತ್ರವಲ್ಲ ಡ್ರಾಯಿಂಗ್‌, ಭರತನಾಟ್ಯದಲ್ಲೂ ತೊಡಗಿಸಿಕೊಂಡಿದ್ದಾಳೆ. ಮುಂದೆ ಸಯನ್ಸ್‌ ಕಲಿಯುವ ಹಂಬಲ ವ್ಯಕ್ತಪಡಿಸುತ್ತಾಳೆ. ಬಾಕ್ಸ್‌----

ಬೀದಿ ಬದಿ ವ್ಯಾಪಾರಿಯ ಮಗಳಿಗೆ ಶೇ.೯೬.೪೮ ಅಂಕಮಂಗಳೂರು ಬೀದಿ ಬದಿ ವ್ಯಾಪಾರಿಯೊಬ್ಬರ ಮಗಳು ಶೇ.೯೬.೪೮ ಅಂಕ ಗಳಿಸುವ ಮೂಲಕ ಸಾಧನೆ ಮೆರೆದಿದ್ದಾರೆ.ಮಂಗಳೂರಿನ ಬೀದಿಬದಿ ವ್ಯಾಪಾರಿ ಗರೋಡಿ ನಿವಾಸಿ ಕೆ. ನಾಗೇಶ್-ಗಾಯತ್ರಿ ದಂಪತಿಗಳ ಪುತ್ರಿ ಕೆ.ರಕ್ಷಾ ಜಿ.ಎನ್. ಈ ಸಾಧನೆ ಮಾಡಿದವರು. ಈಕೆ ನಗರದ ಪಂಪ್‌ವೆಲ್‌ ಬಳಿಯ ಕಪಿತಾನಿಯಾ ಹೈಸ್ಕೂಲ್‌ ವಿದ್ಯಾರ್ಥಿನಿ.

ತನ್ನ ಬಿಡುವಿನ ಸಮಯದಲ್ಲಿ ತಂದೆ ತಾಯಿಗೆ ವೃತ್ತಿಯಲ್ಲಿ ಸಹಾಯ ಮಾಡುತ್ತಾ ಓದಿ ಕಡು ಬಡತನದ ನಡುವೆಯೂ ಉತ್ತಮ ಅಂಕ ಪಡೆದಿದ್ದಾರೆ. ಕೆ.ರಕ್ಷಾ ಜಿ.ಎನ್ ಅವರು ತನ್ನ ಮುಂದಿನ ವಿದ್ಯಾಭ್ಯಾಸವನ್ನು ಮಂಗಳೂರಿನಲ್ಲೇ ಮುಂದುವರಿಸುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.ಕ್ವೋಟ್‌----

ದ.ಕ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯ್ತಿ ಸಿಇಒ ಮಾರ್ಗದರ್ಶನದಲ್ಲಿ ಹೈಸ್ಕೂಲ್‌ ಶಿಕ್ಷಕರು, ಶಾಲೆಗಳ ಮುಖ್ಯಸ್ಥರು, ಮಕ್ಕಳು, ಪೋಷಕರ ಸತತ ಪರಿಶ್ರಮದಿಂದ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದದ್ದಲ್ಲದೆ, ಹಿಂದಿನ ಫಲಿತಾಂಶವನ್ನು ಉ‍ಳಿಸಿಕೊಳ್ಳಲು ಸಾಧ್ಯವಾಗಿದೆ. ಮುಖ್ಯವಾಗಿ 20ಕ್ಕಿಂತ ಕಡಿಮೆ ಅಂಕ ಪಡೆದವರಿಗೆ 20 ಅಂಕದ ಪ್ಯಾಕೇಜ್‌ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶೇಕಡಾವಾರು ಫಲಿತಾಂಶ ಹೆಚ್ಚಳಕ್ಕೆ ಹಾಗೂ ಫೇಲ್‌ ಆದವರ ಸಂಖ್ಯೆ ಗಣನೀಯ ಇಳಿಕೆಗೆ ಕಾರಣವಾಗಿದೆ. ಮುಂದಿನ ವರ್ಷ ಮೂರಂಕೆಯಲ್ಲಿರುವ ಫೇಲಾದವರ ಪ್ರಮಾಣವನ್ನು ಎರಡಂಕೆಗೆ ಇಳಿಸಲು ಪ್ರಯತ್ನಿಸಲಾಗುವುದು.

-ಜಿ.ಎಸ್‌.ಶಶಿಧರ್‌, ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರು, ದ.ಕ.

----------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪೂವ೯ಭಾವಿ ಸಭೆ
ವಿವಿಧೆಡೆ ಕಳ್ಳತನದ ಪ್ರಕರಣಗಳ ಆರೋಪಿತರ ಬಂಧನ