)
ರಾಮನಗರ: ಶಾಲಾ ಶಿಕ್ಷಣ ಇಲಾಖೆ ಗುರುವಾರ ಬಿಡುಗಡೆ ಮಾಡಿದ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷಾ ಫಲಿತಾಂಶದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆ ಶೇ.92.82 ಫಲಿತಾಂಶ ಲಭಿಸಿದ್ದು, ರಾಜ್ಯದಲ್ಲಿ 27ನೇ ಸ್ಥಾನ ಪಡೆದುಕೊಂಡಿದೆ.
2023ರಲ್ಲಿ ಶೇ.89.90 ಫಲಿತಾಂಶ ದಾಖಲು ಮಾಡಿದ್ದ ಜಿಲ್ಲೆಯು, 2024ರಲ್ಲಿ ಶೇ.71.16 ಫಲಿತಾಂಶ ಪಡೆದು ಕುಸಿತ ಕಂಡು ರಾಜ್ಯದಲ್ಲಿ 26ನೇ ಸ್ಥಾನ ಪಡೆದಿತ್ತು. 2025ರಲ್ಲಿ ಶೇ.63.12 ಫಲಿತಾಂಶದೊಂದಿಗೆ 24ನೇ ಸ್ಥಾನದಲ್ಲಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ.29.71 ಹೆಚ್ಚಿನ ಫಲಿತಾಂಶ ಬಂದಿದ್ದರೂ 27ನೇ ಸ್ಥಾನ ಅಲಂಕರಿಸಿದೆ.
ಚನ್ನಪಟ್ಟಣ ತಾಲೂಕಿನಲ್ಲಿ 2678ರಲ್ಲಿ 2545 (ಶೇ.95.03), ಮಾಗಡಿ ತಾಲೂಕಿನಲ್ಲಿ 228ರಲ್ಲಿ 2154 (ಶೇ.94.43), ರಾಮನಗರ ತಾಲೂಕಿನಲ್ಲಿ 2968ರಲ್ಲಿ 2766 (ಶೇ.93.19) ಹಾಗೂ ಕನಕಪುರ ತಾಲೂಕಲ್ಲಿ 3293ರ ಪೈಕಿ 2966 (ಶೇ.89.09) ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.ಗ್ರೇಡ್ ಮಾದರಿ ಹಾಗೂ ಗುಣಾತ್ಮಕ ವಿಧಾನದ ಮೂಲಕ ಫಲಿತಾಂಶ ಪ್ರಕಟಿಸಲಾಗಿದ್ದು, ಇದರಲ್ಲಿ 651 ವಿದ್ಯಾರ್ಥಿಗಳು ಎ+ ಶ್ರೇಣಿ, 1531 ವಿದ್ಯಾರ್ಥಿಗಳು ಎ ಶ್ರೇಣಿ, 1776 ಮಂದಿ ಬಿ + ಶ್ರೇಣಿ, 2100 ವಿದ್ಯಾರ್ಥಿಗಳು ಬಿ ಶ್ರೇಣಿ, 2202 ಮಂದಿ ಸಿ + ಶ್ರೇಣಿ ಹಾಗೂ 2171 ವಿದ್ಯಾರ್ಥಿಗಳು ಸಿ ಶ್ರೇಣಿಯಲ್ಲಿ ಪಾಸಾಗಿದ್ದಾರೆ.
ಈ ಬಾರಿಯೂ ಪರೀಕ್ಷೆಯಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆ ಬರೆದ 5620 ಬಾಲಕರ ಪೈಕಿ 5088 ಉತ್ತೀರ್ಣರಾಗಿ ಶೇ.90.53 ಹಾಗೂ 5,600 ಬಾಲಕಿಯರ ಪೈಕಿ 5343 ತೇರ್ಗಡೆಯಾಗಿ ಶೇ.95.41 ಫಲಿತಾಂಶ ಗಳಿಸಿದ್ದಾರೆ.
ಪರೀಕ್ಷೆ ಬರೆದವರ ಪೈಕಿ ಮಾಧ್ಯಮವಾರು ಅಂಕಿ ಅಂಶದಲ್ಲಿ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳು ಹೆಚ್ಚು ಉತ್ತೀರ್ಣರಾದರೆ, ಉರ್ದು ಮಾಧ್ಯಮ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಕನ್ನಡ ಮಾಧ್ಯಮದಲ್ಲಿ ಹಾಜರಾದ 5439 ವಿದ್ಯಾರ್ಥಿಗಳ ಪೈಕಿ 4990 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.91.74 ಫಲಿತಾಂಶ ದಾಖಲು ಮಾಡಿದ್ದಾರೆ. ಆಂಗ್ಲ ಮಾಧ್ಯಮ ಪಡೆದು ಪರೀಕ್ಷೆಗೆ ಹಾಜರಾದ 5697 ವಿದ್ಯಾರ್ಥಿಗಳ ಪೈಕಿ 5370 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಒಟ್ಟು 94.26 ಫಲಿತಾಂಶ ದಾಖಲು ಮಾಡಿದ್ದಾರೆ. ಜತೆಗೆ, ಉರ್ದು ಮಾಧ್ಯಮ 84 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 71 ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗುವ ಮೂಲಕ ಶೇ.84.5 ಫಲಿತಾಂಶ ದಾಖಲು ಮಾಡಿದ್ದಾರೆ.
ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಫಲಿತಾಂಶದ ಪೈಕಿ ಖಾಸಗಿ ಶಾಲೆಯ ವಿದ್ಯಾರ್ಥಿಗಳು ಹೆಚ್ಚು ಉತ್ತೀರ್ಣರಾಗಿದ್ದಾರೆ. ಅನುದಾನ ರಹಿತ ಶಾಲೆಗಳಲ್ಲಿ 3878 ವಿದ್ಯಾರ್ಥಿಗಳ ಪೈಕಿ 3631 ಉತ್ತೀರ್ಣರಾಗಿ ಶೇ.93.63 ದಾಖಲು ಮಾಡಿದರೆ, ಸರ್ಕಾರಿ ಶಾಲೆಗಳಲ್ಲಿ 4726 ವಿದ್ಯಾರ್ಥಿಗಳ ಪೈಕಿ 4410 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ.93.31 ಹಾಗೂ ಅನುದಾನಿತ ಶಾಲೆಗಳಲ್ಲಿ 2616 ವಿದ್ಯಾರ್ಥಿಗಳಲ್ಲಿ 2390 ವಿದ್ಯಾರ್ಥಿಗಳು ಪಾಸಾಗಿ ಶೇ.91.36 ಫಲಿತಾಂಶವನ್ನು ದಾಖಲು ಮಾಡಿದೆ.
ಜಿಲ್ಲೆಯಲ್ಲಿ ಸರ್ಕಾರಿ-61, ಅನುದಾನಿತ - 15 ಹಾಗೂ ಅನುದಾನ ರಹಿತ - 37 ಸೇರಿದಂತೆ ಒಟ್ಟು 113 ಶಾಲೆಗಳು ಶೇಕಡ 100 ರಷ್ಟು ಫಲಿತಾಂಶ ಪಡೆದುಕೊಂಡಿವೆ. ಚನ್ನಪಟ್ಟಣ ತಾಲೂಕಿನಲ್ಲಿ 29, ಮಾಗಡಿ ತಾಲೂಕಿನಲ್ಲಿ 28, ರಾಮನಗರ ತಾಲೂಕಿನಲ್ಲಿ 35 ಹಾಗೂ ಕನಕಪುರ ತಾಲೂಕಿನಲ್ಲಿ 21 ಶಾಲೆಗಳು ಶೇ.100 ಫಲಿತಾಂಶ ದಾಖಲಿಸಿವೆ.
ಜಿಲ್ಲೆಯ ಟಾಪರ್ಸ್:
ಬಾಕ್ಸ್ ..............
ಲಿಂಗವಾರು ಫಲಿತಾಂಶದ ವಿವರಬಾಲಕರು ಬಾಲಕಿಯರು
ತಾಲೂಕುಹಾಜರಿಉತ್ತೀರ್ಣಶೇಕಡಹಾಜರಿಉತ್ತೀರ್ಣಶೇಕಡಚನ್ನಪಟ್ಟಣ1285120293.541393134396.41
ಮಾಗಡಿ1184108991.981097106597.08ರಾಮನಗರ1464134291.671504142494.68
ಕನಕಪುರ1687145586.251606151194.08ಒಟ್ಟು5620508890.535600534395.41