ರಬಕವಿ-ಬನಹಟ್ಟಿ: ರಬಕವಿ-ಬನಹಟ್ಟಿ ಮತ್ತು ತೇರದಾಳ ತಾಲೂಕುಗಳ ೧೦ ಪರೀಕ್ಷಾ ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿಯ ಸಮಾಜ ವಿಜ್ಞಾನ ವಿಷಯದ ಪರೀಕ್ಷೆ ಸಾಂಗವಾಗಿ ಜರುತು. ಅವಳಿ ತಾಲೂಕಿನ ೩೩೯೦ ಪರೀಕ್ಷಾರ್ಥಿಗಳ ಪೈಕಿ ೩೧ ಮಕ್ಕಳು ಗೈರಾಗಿದ್ದು, ೩೩೫೯ ಮಕ್ಕಳು ಪರೀಕ್ಷೆ ಬರೆದಿದ್ದಾರೆ. ಯಾವುದೇ ಪರೀಕ್ಷಾ ಕೇಂದ್ರಗಳಲ್ಲಿ ನಕಲು ಪ್ರಕರಣಗಳು ನಡೆದಿಲ್ಲ.
ರಬಕವಿಯ ಎಂ.ವಿ.ಪಟ್ಟಣ ಪರೀಕ್ಷೆ ಕೇಂದ್ರದ ೨೫೪ರ ಪೈಕಿ ೨೫೩ ಮಕ್ಕಳು ಪರೀಕ್ಷೆ ಬರೆದಿದ್ದು, ಒಬ್ಬರು ಗೈರಾಗಿದ್ದಾರೆ. ಬನಹಟ್ಟಿ ಎಸ್‌ಆರ್‌ಎ ಕೇಂದ್ರದ ೩೧೫ ಮಕ್ಕಳಲ್ಲಿ ೩೧೩ ಹಾಜರಿದ್ದು, ಇಬ್ಬರು ಗೈರಾಗಿದ್ದಾರೆ. ರಾಮಪುರ ಪೂರ್ಣಪ್ರಜ್ಞ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕೇಂದ್ರದ ೩೨೭ರ ಪೈಕಿ ೩೨೬ ಹಾಜರಿದ್ದು, ಒಬ್ಬರು ಗೈರು, ಹೊಸೂರ-ರಬಕವಿಯ ಪದ್ಮಾವತಿ ಇಂಟರ್‌ನ್ಯಾಶನಲ್ ಹೈಸ್ಕೂಲ್ ಕೇಂದ್ರದ ೪೨೮ರ ಪೈಕಿ ೪೨೩ ಹಾಜರಿದ್ದು, ಐವರು ಗೈರಾಗಿದ್ದಾರೆ. ಯಲ್ಲಟ್ಟಿಯ ಕೊಣ್ಣೂರ ಆಂಗ್ಲ ಮಾಧ್ಯಮ ಹೈಸ್ಕೂಲ್ ಕೇಂದ್ರದಲ್ಲಿ ಎಲ್ಲ ೪೬೫ ವಿದ್ಯಾರ್ಥಿಗಳು, ಸರ್ಕಾರಿ ಪ್ರೌಢಶಾಲೆ ರಬಕವಿ-ಬನಹಟ್ಟಿ ಕೇಂದ್ರದಲ್ಲಿ ೨೩೫ ವಿದ್ಯಾರ್ಥಿಗಳು, ಜಗದಾಳ ಸರ್ಕಾರಿ ಪ್ರೌಢಶಾಲೆ ಕೇಂದ್ರದ ೩೬೬ರ ಪೈಕಿ ೩೫೪ ವಿದ್ಯಾರ್ಥಿಗಳು ಹಾಜರಿದ್ದು, ೧೨ ಗೈರಾಗಿದ್ದರು. ತೇರದಾಳದ ಎಸ್‌ಎಂ ಪ್ರೌಢಶಾಲೆ ಕೇಂದ್ರದಲ್ಲಿ ೩೨೭ರ ಪೈಕಿ ೩೨೨ ಹಾಜರಿದ್ದು, ಐವರು ಗೈರಾಗಿದ್ದರು. ತೇರದಾಳದ ಎಸ್‌ಪಿ.ಪ್ರೌಢಶಾಲೆ ಕೇಂದ್ರದ ೩೩೨ರ ಪೈಕಿ ೩೨೯ ಹಾಜರಿದ್ದು, ಮೂವರು ಗೈರಾಗಿದ್ದರು. ಶ್ರೀಸಿದ್ದೇಶ್ವರ ಪ್ರೌಢಶಾಲೆ ಕೇಂದ್ರದ ೩೪೧ರ ಪೈಕಿ ೩೩೯ ಹಾಜರಿದ್ದು, ಇಬ್ಬರು ಗೈರಾಗಿದ್ದರು.ಕನ್ನಡ, ಗಣಿತ, ವಿಜ್ಞಾನ ಪರೀಕ್ಷೆಗಳ ಬಳಿಕ ನಾಲ್ಕನೇ ಪರೀಕ್ಷೆಯಾದ ಸಮಾಜ ವಿಜ್ಞಾನ ವಿಷಯದ ಪರೀಕ್ಷೆಗೆ ಬನಹಟ್ಟಿ ಮತ್ತು ತೇರದಾಳ ಪೋಲೀಸರು ಕಟ್ಟುನಿಟ್ಟಿನ ಬಂದೋಬಸ್ತ್ ನೀಡಿದ್ದರು. ತಹಸೀಲ್ದಾರ ಗಿರೀಶ ಸ್ವಾದಿ, ಬಿಇಒ ಅಶೋಕ ಬಸಣ್ಣವರ, ಶಿಕ್ಷಣ ಸಂಯೋಜಕ ಸಂಗಮೇಶ ವಿಜಾಪುರ, ತಾಪಂ ಇಒ ಸಿದ್ದಪ್ಪ ಪಟ್ಟಿಹಾಳ ಸೇರಿದಂತೆ ಜಾಗೃತ ದಳ, ಸ್ಥಳೀಯ ಸ್ಕ್ವಾಡ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಭದ್ರತೆ ಅವಲೋಕಿಸಿದರು.