ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾದ್ಯಂತ ನವ ವಸಂತಾಗಮನದ ಹರ್ಷ..!

KannadaprabhaNewsNetwork |  
Published : Mar 30, 2025, 03:08 AM ISTUpdated : Mar 30, 2025, 08:46 AM IST
29ಕೆಎಂಎನ್ ಡಿ22 | Kannada Prabha

ಸಾರಾಂಶ

ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಬಟ್ಟೆ ಅಂಗಡಿಗಳು ಜನರಿಂದ ತುಂಬಿಹೋಗಿದ್ದವು. ಮಹಿಳೆಯರು, ಮಕ್ಕಳೊಂದಿಗೆ ಅಂಗಡಿಗಳಿಗೆ ಬಂದು ಹೊಸ ಬಟ್ಟೆ ಖರೀದಿಯಲ್ಲಿ ತೊಡಗಿದ್ದರು. ಇಷ್ಟವಾದ ಬಟ್ಟೆಗಳನ್ನು ಖರೀದಿಸಿದ ಖುಷಿ ಮಕ್ಕಳಲ್ಲಿದ್ದರೆ, ಮಹಿಳೆಯರು ಹೊಸ ಸೀರೆಗಳನ್ನು ಖರೀದಿಸಿದ ಸಂಭ್ರಮದಲ್ಲಿದ್ದರು.

 ಮಂಡ್ಯ : ನೂತನ ವಸಂತಾಗಮನವನ್ನು ಅದ್ಧೂರಿಯಾಗಿ ಸ್ವಾಗತಿಸಲು ಜಿಲ್ಲೆಯ ಜನರು ಭರದ ಸಿದ್ಧತೆ ನಡೆಸಿದ್ದಾರೆ. ಹಬ್ಬದ ಸಾಮಾನುಗಳ ಖರೀದಿ ಭರಾಟೆ ಜೋರಾಗಿದ್ದು, ಹೊಸ ವರ್ಷಕ್ಕೆ ಹೊಸ ಬಟ್ಟೆ ಖರೀದಿಯಲ್ಲಿ ಜನರು ಕುಟುಂಬದವರೊಂದಿಗೆ ನಿರತರಾಗಿದ್ದರು.

ಹಬ್ಬದ ಮುನ್ನಾ ದಿನವಾದ ಶನಿವಾರ ನಗರದ ಪೇಟೆಬೀದಿ ಸೇರಿದಂತೆ ಪ್ರಮುಖ ರಸ್ತೆಗಳೆಲ್ಲವೂ ಜನಜಂಗುಳಿಯಿಂದ ತುಂಬಿತ್ತು. ನಗರ ಮತ್ತು ಗ್ರಾಮೀಣ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಮಾರುಕಟ್ಟೆಯ ಇಕ್ಕೆಲಗಳಲ್ಲಿ ಹಣ್ಣು, ಹೂವು, ತರಕಾರಿ ಮಾರಾಟ ಜೋರಾಗಿಯೇ ನಡೆದಿತ್ತು.

ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಬಟ್ಟೆ ಅಂಗಡಿಗಳು ಜನರಿಂದ ತುಂಬಿಹೋಗಿದ್ದವು. ಮಹಿಳೆಯರು, ಮಕ್ಕಳೊಂದಿಗೆ ಅಂಗಡಿಗಳಿಗೆ ಬಂದು ಹೊಸ ಬಟ್ಟೆ ಖರೀದಿಯಲ್ಲಿ ತೊಡಗಿದ್ದರು. ಇಷ್ಟವಾದ ಬಟ್ಟೆಗಳನ್ನು ಖರೀದಿಸಿದ ಖುಷಿ ಮಕ್ಕಳಲ್ಲಿದ್ದರೆ, ಮಹಿಳೆಯರು ಹೊಸ ಸೀರೆಗಳನ್ನು ಖರೀದಿಸಿದ ಸಂಭ್ರಮದಲ್ಲಿದ್ದರು. ಜನರನ್ನು ಸೆಳೆಯಲು ಬಟ್ಟೆ ಅಂಗಡಿಯವರು ಹಬ್ಬದ ಪ್ರಯುಕ್ತ ರಿಯಾಯ್ತಿ ದರದಲ್ಲಿ ಬಟ್ಟೆಗಳನ್ನು ಮಾರಾಟ ಮಾಡುವ ಬ್ಯುಸಿಯಲ್ಲಿದ್ದರು.

ನಗರದ ಪೇಟೆ ಬೀದಿ, ಮಾರುಕಟ್ಟೆಗೆ ತೆರಳುವ ರಸ್ತೆ, ವಿ.ವಿ.ರಸ್ತೆಗಳಲ್ಲಿ ಮಾವಿನ ಸೊಪ್ಪನ್ನು ರಾಶಿ ಹಾಕಿಕೊಂಡು ಮಾರಾಟದಲ್ಲಿ ನಿರತರಾಗಿದ್ದರು. ಯುಗಾದಿಯ ದಿನ ಮನೆಯ ಬಾಗಿಲಿಗೆ ತೋರಣವಾಗಿ ಅಲಂಕರಿಸಲ್ಪಡುವ ಮಾವಿನಸೊಪ್ಪಿಗೆ ಎಲ್ಲೆಡೆ ಭರ್ಜರಿ ಬೇಡಿಕೆ ಇತ್ತು. ಮಾವಿನ ಸೊಪ್ಪು ಪ್ರತಿ ಕಟ್ಟಿಗೆ-೧೦ ರು., ಬೇವಿನಸೊಪ್ಪು-೧೦ ರು.ಗೆ ಮಾರಾಟವಾಗುತ್ತಿತ್ತು.

ಹೂವು, ಹಣ್ಣು ಬೆಲೆ ಹೆಚ್ಚಳ:

ಯುಗಾದಿ ಹಬ್ಬಕ್ಕೆ ಹೂವು, ಹಣ್ಣು ಬೆಲೆಯಲ್ಲಿ ಏರಿಕೆಯಾಗಿದೆ. ಪ್ರತಿ ಮಾರು ಕನಕಾಂಬರ -೧೦೦ ರು., ಮಲ್ಲಿಗೆ-೧೦೦ ರು., ಕಾಕಡ-೧೦೦ ರು., ಸೇವಂತಿಗೆ ೧೦೦ ರು.ನಿಂದ ೧೨೦ ರು., ಬಟನ್ಸ್-೧೨೦ ರು., ಗಣಗಲೆ ಹೂ-೮೦ ರು., ಚೆಂಡು ಹೂ-೬೦ ರು., ತುಳಸಿ-೫೦ ರು., ಸುಗಂಧರಾಜ ಕೆಜಿ ೪೦೦ ರು., ಹೂವಿನ ಹಾರಗಳು ೧೫೦ ರು.ನಿಂದ ೬೦೦ ರು.ವರೆಗೆ ಮಾರಾಟವಾಗುತ್ತಿತ್ತು.

ಹಣ್ಣುಗಳ ಬೆಲೆ ಏರುಗತಿಯಲ್ಲಿತ್ತು. ಪ್ರತಿ ಕೆಜಿ ಮಿಕ್ಸ್ ಹಣ್ಣು-೧೫೦ ರು., ಕಿತ್ತಳೆ-೧೨೦ ರು., ಮೂಸಂಬಿ-೬೦ ರು., ಸೇಬು-೨೪೦ ರು.ನಿಂದ ೨೯೦ ರು,, ದಾಳಿಂಬೆ-೨೬೦ ರು., ಸಿಹಿ ದ್ರಾಕ್ಷಿ-೧೦೦ ರು., ಕಪ್ಪುದ್ರಾಕ್ಷಿ-೧೩೦ ರು., ಬಾಳೆಹಣ್ಣು-೧೦೦ ರು., ಪಚ್ಚಬಾಳೆ-೪೦ ರು., ಪರಂಗಿ ಹಣ್ಣು-೩೦ ರು., ಅನಾನಸ್-೭೦ ರು.ನಿಂದ ೮೦ ರು., ಸೀಬೆ-೮೦ ರಿಂದ ೧೨೦ ರು., ಕರ್ಬೂಜ-೪೦ ರು.

ತರಕಾರಿ ಬೆಲೆಗಳು ಸಾಮಾನ್ಯವಾಗಿತ್ತು. ಬೀನಿಸ್ ಮಾತ್ರ ಪ್ರತಿ ಕೆಜಿಗೆ ೧೦೦ ರು., ಸೌತೆಕಾಯಿ ೪ ಕ್ಕೆ ೨೦ ರು., ೪ ನಿಂಬೆಹಣ್ಣು-೨೦ ರು., ಕೊತ್ತಂಬರಿ ಸೊಪ್ಪು-೨೦ ರು. ಟಮೋಟೋ-೧೦ ರು.,ಅವರೆಕಾಯಿ-೬೦ ರು., ಚಪ್ಪರದವರೆಕಾಯಿ-೮೦ ರು., ಹೂಕೋಸು-೫೦ ರು., ಕ್ಯಾರೆಟ್-೩೦ ರು., ಗೆಡ್ಡೆಕೋಸು-೩೦ ರು., ಬೀಟ್‌ರೂಟ್-೩೦ ರು., ದಪ್ಪಮೆಣಸಿನಕಾಯಿ-೮೦ ರು., ಮೆಣಸಿನಕಾಯಿ ಕೆಜಿ ೧೨೦ ರು. ಇತ್ತು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ