ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಹೊನ್ನಾವರ ತಾಲೂಕು ಶೇ.88.70 ಫಲಿತಾಂಶ

KannadaprabhaNewsNetwork | Published : May 3, 2025 12:15 AM

ಸಾರಾಂಶ

ಹತ್ತನೇ ತರಗತಿ ಫಲಿತಾಂಶ ಬಿಡುಗಡೆ ಆಗಿದ್ದು, ಹೊನ್ನಾವರ ತಾಲೂಕಿನಲ್ಲಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಹೊನ್ನಾವರ: 2024-2025 ನೇ ಸಾಲಿನ ಹತ್ತನೇ ತರಗತಿ ಫಲಿತಾಂಶ ಬಿಡುಗಡೆ ಆಗಿದ್ದು, ಹೊನ್ನಾವರ ತಾಲೂಕಿನಲ್ಲಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ತಾಲೂಕಿನಲ್ಲಿ ಒಟ್ಟು 1876 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇದರಲ್ಲಿ 1664 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. 961 ಗಂಡುಮಕ್ಕಳು ಹಾಗೂ 915 ಹೆಣ್ಣು ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 817 ಗಂಡು ಮಕ್ಕಳು ಹಾಗೂ 847 ವಿದ್ಯಾರ್ಥಿನಿಯರು ಪಾಸಾಗಿರುತ್ತಾರೆ. ತಾಲೂಕಿನ ಫಲಿತಾಂಶ 88.70 ಶೇಕಡಾ ಆಗಿರುತ್ತದೆ ಎಂದು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಮಾಹಿತಿ ನೀಡಿದ್ದಾರೆ.

ಸರಕಾರಿ ಪ್ರೌಢಶಾಲೆಗಳು:

ಬಣಸಾಲೆ ಶೇ. ೯೦.೧೬, ಹೊದ್ಕೆಶಿರೂರು ಶೇ.೮೬.೩೬, ಕೋಟೇಬೈಲ್ ಶೇ.೮೬.೬೭, ಚಿತ್ತಾರ ಶೇ.೮೦.೪೩, ಹಡಿನಬಾಳ ಶೇ.೯೩.೧೦, ಜಲವಳಕರ್ಕಿ ಶೇ. ೯೬.೮೮, ಅಳ್ಳಂಕಿ ಶೇ.೯೫.೩೧, ಪ್ರಭಾತನಗರ ಶೇ ೮೯.೭೪, ಇಡಗುಂಜಿ ಶೇ.೯೨.೬೫, ಮಂಕಿ ಶೇ.೮೭.೮೮, ಗೇರಸೊಪ್ಪಾ ಶೇ. ೮೯.೭೪.

ಅನುದಾನಿತ ಶಾಲೆಗಳು:

ಅನಿಲಗೋಡದ ಜನತಾ ವಿದ್ಯಾಲಯ ಶೇ.೯೭.೫೬, ಮಲ್ಲಾಪುರದ ಗುರುಪ್ರಸಾದ ಪ್ರೌಢಶಾಲೆ ಶೇ.೮೧.೬೩, ಗುಂಡಬಾಳಾದ ಆರೋಗ್ಯಮಾತಾ ಪ್ರೌಢಶಾಲೆ ಶೇ. ೭೦.೮೩, ಹಳದೀಪುರದ ಆರ್.ಇ.ಎಸ್. ಪ್ರೌಢಶಾಲೆ ಶೇ. ೮೭.೫, ಹೊನ್ನಾವರ ಹೋಲಿರೋಸರಿ ಕಾನ್ವೆಂಟ್ ಶೇ. ೮೧.೯೩, ಹೊನ್ನಾವರದ ನ್ಯೂ ಇಂಗ್ಲೀಷ್ ಸ್ಕೂಲ್ (ಕನ್ನಡ) ಶೇ. ೭೬.೬೦, ಹೊನ್ನಾವರದ ಸೇಂಟ್ ಥಾಮಸ್ ಪ್ರೌಢಶಾಲೆ ಶೇ. ೪೮.೩೩,, ಕಡತೋಕದ ಜನತಾ ವಿದ್ಯಾಲಯ ಶೇ.೯೨.೧೯, ಕರ್ಕಿಯ ಶ್ರೀ ಚನ್ನಕೇಶವ ಪ್ರೌಢಶಾಲೆ ಶೇ.೮೯.೬೧, ಕಾಸರಕೋಡದ ಜನತಾ ವಿದ್ಯಾಲಯ ಶೇ. ೮೪.೭೮, ಗುಣವಂತೆಯ ಕರಾವಳಿ ಪ್ರೌಢಶಾಲೆ ಶೇ.೧೦೦, ಖರ್ವಾದ ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆ ಶೇ. ೯೫.೪೫, ಹೊಸಾಡದ ಶರಾವತಿ ಪ್ರೌಢಶಾಲೆ ಶೇ.೮೨.೩೫, ಮಾಗೋಡ ಸಂಶಿಯ ಶಾರದಾಂಬಾ ಪ್ರೌಢಶಾಲೆ ಶೇ. ೮೦.೪೩, ಕವಲಕ್ಕಿಯ ಶ್ರೀ ಸುಬ್ರಹ್ಮಣ್ಯ ಪ.ಪೂ ಕಾಲೇಜ ಶೇ. ೮೮.೨೪, ಅರೇಅಂಗಡಿಯ ಎಸ್.ಕೆ.ಪಿ. ಪ್ರೌಢಶಾಲೆ ಶೇ. ೯೧.೬೭.

ಅನುದಾನ ರಹಿತ ಪ್ರೌಢಶಾಲೆಗಳು:

ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಅಳ್ಳಂಕಿ ಶೇ. ೯೭.೪೪, ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ ಮಂಕಿ ಶೇ.೯೭.೨೨, ಮಂಕಿಯ ಅಸ್ಸಿಸಿ ಆಂಗ್ಲ ಮಾಧ್ಯಮ ಪ್ರೌಡಶಾಲೆ ಶೇ. ೧೦೦, ಅಲ್.ಇಲಾಲ್ ಪ್ರೌಡಶಾಲೆ ಮಂಕಿ ಶೇ. ೮೮.೮೯, ಹೊನ್ನಾವರದ ನ್ಯೂ ಇಂಗ್ಲೀಷ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಶೇ. ೧೦೦, ಹೊನ್ನಾವರದ ಮಾರ್ಥೋಮಾ ಪ್ರೌಢಶಾಲೆ ಶೇ.೯೭.೨೫, ಜ್ಞಾನೇಶ್ವರಿ ಆಂಗ್ಲ ಮಾಧ್ಯಮ ವಿದ್ಯಾಲಯ ಕರ್ಕಿ ಶೇ.೧೦೦, ಕರ್ಕಿಯ ದಯಾನಂದ ವಿದ್ಯಾಭಾರತೀ ಆಂಗ್ಲಮಧ್ಯಮ ಪ್ರೌಢಶಾಲೆ ಶೇ ೮೦.೭೭, ಕಾಸರಕೋಡದ ಮಝರೆಲ್ಲೋ ಆಂಗ್ಲ ಮಾಧ್ಯಮ ಪ್ರೌಢಶಾಲೆ ಶೇ. ೧೦೦, ಖರ್ವಾದ ಸಿದ್ದಿವಿನಾಯಕ ಆಂಗ್ಲ ಮಧ್ಯಮ ಪ್ರೌಡಶಾಲೆ ಶೇ ೧೦೦, ಮಾವಿನಕುರ್ವಾದ ಸ್ವಾಮಿ ವಿವೇಕಾನಂದ ಪ್ರೌಢಶಾಲೆ ಶೇ. ೮೩.೩೩, ಮಾಗೋಡದ ಎಸ್.ಎಫ್.ಎಸ್. ಆಂಗ್ಲ ಮಾಧ್ಯಮ ಪ್ರೌಢಶಾಲೆ ೯೫.೨೪, ಕವಲಕ್ಕಿಯ ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢಶಾಲೆ ಶೇ.೯೩.೩೩, ಶೇ.೯೫.೨೪, ಅರೇಅಂಗಡಿಯ ಎಸ್.ಎಸ್.ಕೆ.ಪಿ.ಆಂಗ್ಲ ಮಾಧ್ಯಮ ಪ್ರೌಢಶಾಲೆ ೧೦೦, ಆಲ್. ಮುನಿನಾತ್ ಪಬ್ಲಿಕ್ ಶಾಲೆ ಮಂಕಿ ಶೇ.೧೦೦ ಫಲಿತಾಂಶ ಪಡೆದಿವೆ.

Share this article