ರಾಮನಗರ: ಕಳೆದ 11 ವರ್ಷಗಳಿಗೆ ಹೋಲಿಕೆ ಮಾಡಿದರೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಮನಗರ ಜಿಲ್ಲೆ 3ನೇ ಬಾರಿ ಎರಡಂಕಿ ದಾಟಿ ಕಳಪೆ ಸಾಧನೆ ಮಾಡಿದೆ.
2022-23ನೇ ಸಾಲಿನಲ್ಲಿ ಶೇ. 93.81ರಷ್ಟು ಫಲಿತಾಂಶದೊಂದಿಗೆ 12ನೇ ಸ್ಥಾನದಲ್ಲಿದ್ದ ರಾಮನಗರ ಜಿಲ್ಲೆಯು 2023-24ರಲ್ಲಿ ಶೇಕಡ 89.42ರಷ್ಟು ಫಲಿತಾಂಶ ಪಡೆದು 21ನೇ ಸ್ಥಾನಕ್ಕೆ ಕುಸಿಯಿತು. 2024ನೇ ಸಾಲಿನಲ್ಲಿ ಶೇಕಡ 71.16ರಷ್ಟು ಫಲಿತಾಂಶದೊಂದಿಗೆ 26ನೇ ಸ್ಥಾನಕ್ಕೆ ಕುಸಿತ ಕಂಡಿತು.
ಈ ಬಾರಿ (2025) ಶೇ.63.12ರಷ್ಟು ಫಲಿತಾಂಶ ಪಡೆದು ರಾಜ್ಯದಲ್ಲಿ 24ನೇ ಸ್ಥಾನ ಪಡೆದುಕೊಂಡಿದೆ. ಇದು ಕಳೆದ 10 ವರ್ಷಗಳಲ್ಲಿ ದಾಖಲಾದ ಅತಿ ಕಡಿಮೆ ಫಲಿತಾಂಶದ ಸಾಲಿಗೆಯೇ ಸೇರಿದೆ. ಇದು ಸಹಜವಾಗಿಯೇ ಚರ್ಚೆಗೆ ಕಾರಣವಾಗಿದೆ. ಆದರೆ, ಇದೊಂದು ಗುಣಾತ್ಮಕ ಫಲಿತಾಂಶ ಎಂಬುದು ಶಿಕ್ಷಣ ತಜ್ಞರ ಅಭಿಪ್ರಾಯ.ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಮನಗರ ಜಿಲ್ಲೆಗೆ ಪರಿಪೂರ್ಣ ಫಲಿತಾಂಶ ತಂದುಕೊಡಲು ಶಾಲಾ ಶಿಕ್ಷಕರು ಹಾಗೂ ಸರ್ಕಾರಿ ನೌಕರರು ಸಾಕಷ್ಟು ಪರಿಶ್ರಮ ಪಟ್ಟಿದ್ದರು. ಆದರೆ, ವಿದ್ಯಾರ್ಥಿಗಳಲ್ಲಿನ ಉದಾಸೀನತೆ ಫಲಿತಾಂಶದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.
ಸಿಗದ ಯಶಸ್ಸು:
ಈ ವರ್ಷ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ರಾಜ್ಯದಲ್ಲಿ ಮೊದಲ ಸ್ಥಾನ ಪಡೆಯಬೇಕೆಂಬ ಉದ್ದೇಶದಿಂದ ಮಕ್ಕಳನ್ನು ಪರೀಕ್ಷೆಗೆ ತಯಾರುಗೊಳಿಸಲು ನಾನಾ ಕ್ರಮಗಳನ್ನು ಅನುಸರಿಸಿತು. ಆದರೆ, ಇಲಾಖೆಯ ಪ್ರಯತ್ನಕ್ಕೆ ನಿರೀಕ್ಷಿಸಿದಷ್ಟು ಯಶಸ್ಸು ಸಿಗಲಿಲ್ಲ. ಇದು ಸಹಜವಾಗಿಯೇ ಶಿಕ್ಷಣ ಇಲಾಖೆ ಅಧಿಕಾರಿ ವರ್ಗದಲ್ಲಿ ಬೇಸರ ಮೂಡಿಸಿದೆ.
ಸಕ್ಸಸ್ ಆಗದ ವೇಕ್ ಆಪ್ ಕಾಲ್:
ಕಲಿಕೆಯಲ್ಲಿ ಸರಾಸರಿ, ಸರಾಸರಿಗಿಂತ ಕಡಿಮೆ ಮತ್ತು ಸರಾಸರಿಗಿಂತ ಉತ್ತಮವಾಗಿರುವ ವಿದ್ಯಾ ರ್ಥಿಗಳ ಗುಂಪುಗಳನ್ನು ಪ್ರತ್ಯೇಕವಾಗಿ ರಚಿಸಿ ಪ್ರತಿ ಶಿಕ್ಷಕರಿಗೆ ಸಮನಾಗಿ ವಿದ್ಯಾರ್ಥಿಗಳನ್ನು ದತ್ತು ನೀಡಲಾಗಿತ್ತು. ಪ್ರತಿ 15 ದಿನಗಳಿಗೊಮ್ಮೆ ಪೋಷಕರ ಸಭೆ ನಡೆಸಿ ಮಕ್ಕಳ ಕಲಿಕಾ ಪ್ರಗತಿಯನ್ನು ಒಪ್ಪಿಸುವ ಕಾರ್ಯವನ್ನು ಪ್ರೌಢ ಶಾಲಾ ಶಿಕ್ಷಕರು ಮತ್ತು ಪಿಯು ಕಾಲೇಜು ಉಪನ್ಯಾಸಕರು ಮಾಡುತ್ತಿದ್ದರು. ಇದ್ಯಾವುದರಿಂದಲು ಪ್ರಯೋಜನವಾಗಿಲ್ಲ.
ವರ್ಷಶೇಕಡವಾರು ಫಲಿತಾಂಶರಾಜ್ಯದಲ್ಲಿ ಎಷ್ಟನೇ ಸ್ಥಾನ
2015-16ಶೇ.82.1912
2016-17ಶೇ.78.55062017-18ಶೇ.80.7817
2018-19ಶೇ.88.49022019-20ಶೇ.87.0008
2020-21ಶೇ.100032021-22ಶೇ.90.28ಎ ಗ್ರೇಡ್
2022-23ಶೇ.89.90212023-24ಶೇ.71.1626
2024-25ಶೇ.63.1224-------------------------------------------------------------------------------