ಶಿಕ್ಷಕ ಎಂ.ಎಚ್. ದಿಂಡವಾಡ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಅಧ್ಯಯನ ಜತೆಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಲಕ್ಷ್ಮೇಶ್ವರ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿದೆ. ಭವಿಷ್ಯ ಉತ್ತಮಗೊಳ್ಳುವಲ್ಲಿ 10ನೇ ತರಗತಿ ಫಲಿತಾಂಶ ಭದ್ರ ಬುನಾದಿಯಾಗಿದೆ ಎಂದು ದೊಡ್ಡೂರು ಕ್ಲಸ್ಟರ್ ಸಿಆರ್‌ಪಿ ಶಿವಾನಂದ ಅಸುಂಡಿ ತಿಳಿಸಿದರು.
ತಾಲೂಕಿನ ಯಲ್ಲಾಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಹತ್ತನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಉತ್ತಮ ಅಂಕ ಪಡೆದು ಶಾಲೆ, ತಾಲೂಕು ಮತ್ತು ಜಿಲ್ಲೆಗೆ ಕೀರ್ತಿ ತರಬೇಕು ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಶಿಕ್ಷಕ ಎಂ.ಎಚ್. ದಿಂಡವಾಡ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಅಧ್ಯಯನ ಜತೆಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕ ಎಸ್.ಐ. ಮುರಡಿ, ಪಿ.ಎಸ್. ಲಚ್ಚಾಣ, ಶಿಕ್ಷಕಿ ಎ.ಐ. ಡಂಬಳ ಅವರು ತಲಾ ₹25 ಸಾವಿರವನ್ನು ಶಾಲಾ ದತ್ತಿನಿಧಿಗೆ ದೇಣಿಗೆ ನೀಡಿ, ಅದರಿಂದ ಬರುವ ಹಣದಲ್ಲಿ ಪ್ರತಿವರ್ಷ ಹತ್ತನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನೀಡಿ ಪ್ರೋತ್ಸಾಹಿಸಲು ತಿಳಿಸಿದರು.
ಈ ವೇಳೆ ತಾಯಂದಿರಿಗೆ ಮಕ್ಕಳಿಂದ ಪಾದಪೂಜೆ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳು ಶಾಲೆಗೆ ಸ್ಟೀಲ್ ಟಾಕಿ, ತಾಮ್ರದ ಟಾಕಿ ಹಾಗೂ ಸೈರನ್ ದೇಣಿಗೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಮಂಜಣ್ಣ ಅಂಗಡಿ ವಹಿಸಿದ್ದರು. ಶಿಕ್ಷಕ ಎಸ್.ಸಿ. ಹಾವೇರಿ ಅವರು ಶಾಲಾ ವಾರ್ಷಿಕ ವರದಿ ವಾಚಿಸಿದರು. ಮಹಾಂತಗೌಡ್ರ ಭರಮಗೌಡ್ರ, ಮುಖ್ಯ ಶಿಕ್ಷಕ ಬಿ.ಎನ್. ಗಾಯಕವಾಡ, ನಿಂಗಪ್ಪ ಮತ್ತೂರ, ಸಂಗಮೇಶ ಅಂಗಡಿ, ವಿ.ಜಿ. ಜೊಗೋಜಿ, ಲಕ್ಷ್ಮೀ ಅಂಗಡಿ, ಶ್ರೀಶೈಲ ಸುತಾರ, ಎಸ್.ಬಿ. ಹಿರೇಮಠ, ವಿನೋದಾ ಗೋಣಿ, ವಿದ್ಯಾ ತೆಳಗಿನಮನಿ, ಸಿ.ಆರ್. ಮೂಲಿಮನಿ, ರಫೀಕ್ ಪಿರ್ಜಾದೆ, ಪ್ರವೀಣ ಭಜಂತ್ರಿ, ರಾಜು ಅಂಗಡಿ, ಯಶೋದಾ ದಾನಣ್ಣವರ ಇದ್ದರು. ಗೀತಾ ಹಳ್ಳಿ ಹಾಗೂ ರೂಪಾ ಭರಮಗೌಡ್ರ ನಿರೂಪಿಸಿದರು. ಮಹೇಶ ಸಾಸಲವಾಡ ಹಾಗೂ ಹೇಮಾವತಿ ಲಮಾಣಿ ಸ್ವಾಗತಿಸಿದರು. ನಂದೀಶಗೌಡ ಪಾಟೀಲ ಮತ್ತು ವಿದ್ಯಾ ಮತ್ತೂರ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.