ಎಸ್ಸೆಸ್ಸೆಲ್ಸಿ ಫಲಿತಾಂಶ: ಕೊಡಗು ಜಿಲ್ಲೆ ರಾಜ್ಯಕ್ಕೆ 8 ನೇ ಸ್ಥಾನ

KannadaprabhaNewsNetwork |  
Published : Apr 24, 2026, 03:15 AM IST
ವಿದ್ಯಾರ್ಥಿ | Kannada Prabha

ಸಾರಾಂಶ

ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದ್ದು, ಕೊಡಗು ಜಿಲ್ಲೆಯಲ್ಲಿ ಪರೀಕ್ಷೆ ಬರೆದಿದ್ದ 5,948 ವಿದ್ಯಾರ್ಥಿಗಳಲ್ಲಿ 5,742 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.96.54 ರಷ್ಟು ಫಲಿತಾಂಶ ಪಡೆದು, ರಾಜ್ಯದಲ್ಲಿ 8 ನೇ ಸ್ಥಾನ ಹೊಂದಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದ್ದು, ಕೊಡಗು ಜಿಲ್ಲೆಯಲ್ಲಿ ಪರೀಕ್ಷೆ ಬರೆದಿದ್ದ 5,948 ವಿದ್ಯಾರ್ಥಿಗಳಲ್ಲಿ 5,742 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.96.54 ರಷ್ಟು ಫಲಿತಾಂಶ ಪಡೆದು, ರಾಜ್ಯದಲ್ಲಿ 8 ನೇ ಸ್ಥಾನ ಹೊಂದಿದೆ. ಕೊಡಗು ಜಿಲ್ಲೆ ಕಳೆದ ಬಾರಿ ಶೇ.82 ರಷ್ಟು ಫಲಿತಾಂಶ ಪಡೆದು ರಾಜ್ಯದಲ್ಲಿ 4ನೇ ಸ್ಥಾನ ಪಡೆದಿತ್ತು. ಆದರೆ ಈ ಬಾರಿ ಫಲಿತಾಂಶ ಹೆಚ್ಚಳವಾಗಿದ್ದರೂ ಸಹ, ಫಲಿತಾಂಶ ಸ್ಥಾನದಲ್ಲಿ ಪಲ್ಲಟವಾಗಿದೆ. ಸ್ಥಾನದಲ್ಲಿ ಬದಲಾವಣೆ ಕಂಡು ಬಂದಿದ್ದರೂ ಸಹ ಕಳೆದ ಬಾರಿಗಿಂತ ಈ ಬಾರಿ ಶೇ.14.54 ರಷ್ಟು ಫಲಿತಾಂಶ ವೃದ್ಧಿಯಾಗಿರುವುದು ಕಂಡು ಬಂದಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಬಸವರಾಜು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ 2904 ಬಾಲಕರಲ್ಲಿ 2776 ಉತ್ತೀರ್ಣರಾಗಿ ಶೇ.95.59 ರಷ್ಟು ಫಲಿತಾಂಶ ಪಡೆದಿದ್ದಾರೆ. ಪರೀಕ್ಷೆ ಬರೆದಿದ್ದ 3044 ಬಾಲಕಿಯರಲ್ಲಿ 2966 ಬಾಲಕಿಯರು ಉತ್ತೀರ್ಣರಾಗಿ ಶೇ.97.44 ರಷ್ಟು ಫಲಿತಾಂಶ ಪಡೆದಿದ್ದಾರೆ. ತಾಲೂಕುವಾರು ಶೇಕಡ ಫಲಿತಾಂಶ ಗಮನಿಸಿದಾಗ ಮಡಿಕೇರಿ ತಾಲೂಕು ಶೇ.95.35, ಸೋಮವಾರಪೇಟೆ ಶೇ.97.50, ವಿರಾಜಪೇಟೆ ಶೇ.96.25 ರಷ್ಟು ಫಲಿತಾಂಶ ಬಂದಿದೆ. ಎಸ್ಸೆಸ್ಸೆಲ್ಸಿಯ ಒಟ್ಟು 625 ಅಂಕಕ್ಕೆ 621 ಅಂಕವನ್ನು ಜಿಲ್ಲೆಯ ಇಬ್ಬರು ವಿದ್ಯಾರ್ಥಿನಿಯರು ಪಡೆದು ಪ್ರಥಮ ಸ್ಥಾನ ಹೊಂದಿದ್ದಾರೆ.

ಮಡಿಕೇರಿಯ ಸಂತ ಜೋಸೆಫರ ಸಂಯುಕ್ತ ಪ್ರೌಢ ಶಾಲೆಯ ಲಿನ್ಸಿ ದೇಚಮ್ಮ ಟಿ.ಟಿ. ಅವರು 621, ಹಾಗೆಯೇ ಕೊಡಗರಹಳ್ಳಿಯ ಶಾಂತಿನಿಕೇತನ ಪ್ರೌಢ ಶಾಲೆಯ ಸಿಂಚನ ಕೆ.ಐ. ಅವರು 621 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಉಳಿದಂತೆ ವಿರಾಜಪೇಟೆ ಸಂತ ಅನ್ನಮ್ಮ ಪ್ರೌಢ ಶಾಲೆಯ ಡೀನ್ ಸೆಲ್ವ ಡಿ’ಸೋಜ 620, ಸೋಮವಾರಪೇಟೆಯ ವಿಶ್ವಮಾನವ ಕುವೆಂಪು ಪ್ರೌಢ ಶಾಲೆಯ ಶಿವಾನಿ ಶಾರದಮಣಿ, ವಿರಾಜಪೇಟೆಯ ಕಾವೇರಿ ಪ್ರೌಢಶಾಲೆಯ ಯು.ಎಸ್.ಶ್ರೀವತ್ಸ, ಗೋಣಿಕೊಪ್ಪ ಕಳತ್ಮಾಡುವಿನ ಲಯನ್ಸ್ ಪ್ರೌಢ ಶಾಲೆಯ ಸಿದ್ಧಾರ್ಥ ಕಾವೇರಪ್ಪ ಇವರು 619 ಅಂಕ ಪಡೆದಿದ್ದಾರೆ. ನಗರದ ಸಂತ ಜೋಸೆಫರ ಸಂಯುಕ್ತ ಪ್ರೌಢ ಶಾಲೆಯ ಸೋನಶ್ರೀ ಕೆ.ಇ., ಗೋಣಿಕೊಪ್ಪ ಸೆಂಟ್ ಥಾಮಸ್ ಪ್ರೌಢ ಶಾಲೆಯ ನಮನ ಈ ಇಬ್ಬರು 618 ಅಂಕ ಪಡೆದಿದ್ದಾರೆ. ಉಳಿದಂತೆ ಸೋಮವಾರಪೇಟೆಯ ಅವರ್ ಲೇಡಿ ಆಫ್ ವಿಕ್ಟೋರಿಯಸ್ ಪ್ರೌಢ ಶಾಲೆಯ ತಾನ್ವಿ, ವಿರಾಜಪೇಟೆಯ ಶ್ರೀ ಕಾವೇರಿ ಪ್ರೌಢ ಶಾಲೆಯ ಮೊಹಮ್ಮದ್ ಶಿಫಾನ್, ಕೊಡಗರಳ್ಳಿಯ ಶಾಂತಿನಿಕೇತನ ಪ್ರೌಢ ಶಾಲೆಯ ರೆನಿತ್ ಈ ಮೂವರು 617 ಅಂಕ ಪಡೆದಿದ್ದಾರೆ.ಜಿಲ್ಲೆಯಲ್ಲಿ 140 ಪ್ರೌಢ ಶಾಲೆಗಳಲ್ಲಿ 84 ಶಾಲೆಗಳು ಶೇ.100 ರಷ್ಟು ಫಲಿತಾಂಶ ಪಡೆದಿರುವುದು ವಿಶೇಷವಾಗಿದೆ. ಇದರಲ್ಲಿ ಸರ್ಕಾರಿ ಪ್ರೌಢ ಶಾಲೆಯ 47 ರಲ್ಲಿ 37 ಪ್ರೌಢ ಶಾಲೆಗಳು ಶೇ.100 ರಷ್ಟು ಫಲಿತಾಂಶ, ಅನುದಾನಿತ 40 ಪ್ರೌಢ ಶಾಲೆಗಳಲ್ಲಿ 10 ಶಾಲೆಗಳು ಶೇ.100 ರಷ್ಟು, ಅನುದಾನ ರಹಿತ 53 ಪ್ರೌಢ ಶಾಲೆಯಲ್ಲಿ 37 ಪ್ರೌಢ ಶಾಲೆಗಳು ಶೇ.100 ರಷ್ಟು ಫಲಿತಾಂಶ ಪಡೆದಿವೆ. ಒಟ್ಟಾರೆ ಜಿಲ್ಲೆಯಲ್ಲಿ ಪರೀಕ್ಷೆ ಬರೆದಿದ್ದ 5,948 ವಿದ್ಯಾರ್ಥಿಗಳಲ್ಲಿ 5742 ವಿದ್ಯಾರ್ಥಿಗಳು ಉತ್ತೀರ್ಣರಾಗಿ, 206 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಲ್‌ ತುಂಬದ್ದಕ್ಕೆ ಶಾಸಕರ ಕಚೇರಿಗೆ ವಿದ್ಯುತ್ ಕಟ್
ವಿಪಕ್ಷಗಳಿಂದ ಭಾರತ ಮಾತೆಯ ಭ್ರೂಣ ಹತ್ಯೆ