ಎಸ್ಸೆಸ್ಸೆಲ್ಸಿ: ಸುಂಟಿಕೊಪ್ಪ ಹೋಬಳಿಯ ಪ್ರೌಢಶಾಲೆ ಉತ್ತಮ ಸಾಧನೆ

KannadaprabhaNewsNetwork |  
Published : May 02, 2025, 11:47 PM IST
ಚಿತ್ರ.1: ಈ ಪೈಕಿ ಪ್ರೀತಿ ಕೆ.  601 ಅಂಕಗಳಿಸಿ ಶೇ. 96.16% ವರ್ಷಿಣಿ ಎಸ್. 600 ಶೇ. 96.00%, ಶಾಹನಾಜ್ 560 89.60%, ಮಹಮ್ಮದ್ ಸೂಫಿಯನ್ 88.80% ಪಡೆದುಕೊಂಡವರು. | Kannada Prabha

ಸಾರಾಂಶ

ಹೋಬಳಿಯ ಕಾನ್‌ಬೈಲ್ ಸರ್ಕಾರಿ ಪ್ರೌಢಶಾಲೆಯು ಶೇ.100 ಫಲಿತಾಂಶ ಪಡೆದುಕೊಂಡಿದೆ. ಕೊಡಗರಹಳ್ಳಿಯ ಶಾಂತಿನೀಕೇತನ ಪ್ರೌಢಶಾಲೆ ಶೇ.99 ಫಲಿತಾಂಶ ಪಡೆದಿವೆ. ಶಾಂತಿನಿಕೇತನ ಶಾಲೆಯ 95 ವಿದ್ಯಾರ್ಥಿಗಳಲ್ಲಿ 94 ಮಕ್ಕಳು ಉತ್ತೀರ್ಣಗೊಂಡಿದ್ದಾರೆ. ಅತ್ಯುನ್ನತ್ತ ಶ್ರೇಣಿಯಲ್ಲಿ 19 ಮಕ್ಕಳು ಮತ್ತು ಪ್ರಥಮ ದರ್ಜೆಯಲ್ಲಿ 66 ಹಾಗೂ ದ್ವಿತೀಯ ಶ್ರೇಣಿಯಲ್ಲಿ 9 ಮಕ್ಕಳು ಉತ್ತೀರ್ಣರಾಗಿದ್ದು, ಈ ಪೈಕಿ ಪ್ರೀತಿ ಕೆ. 601 ಅಂಕಗಳಿಸಿ ಶೇ.96.16 ಅಂಕ ಪಡೆದಿದ್ದಾರೆ. ಉಳಿದಂತೆ ನಿಖಿಲ್ 599, ಅರ್ಜುನ್ ಅರವಿಂದ್ 598 ಅಂಕಗಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ಸುಂಟಿಕೊಪ್ಪ ಹೋಬಳಿಯ ಪ್ರೌಢಶಾಲೆಗಳು ಅತ್ಯುತ್ತಮ ಸಾಧನೆ ಮಾಡಿದೆ.

ಹೋಬಳಿಯ ಕಾನ್‌ಬೈಲ್ ಸರ್ಕಾರಿ ಪ್ರೌಢಶಾಲೆಯು ಶೇ.100 ಫಲಿತಾಂಶ ಪಡೆದುಕೊಂಡಿದೆ. ಕೊಡಗರಹಳ್ಳಿಯ ಶಾಂತಿನೀಕೇತನ ಪ್ರೌಢಶಾಲೆ ಶೇ.99 ಫಲಿತಾಂಶ ಪಡೆದಿವೆ. ಶಾಂತಿನಿಕೇತನ ಶಾಲೆಯ 95 ವಿದ್ಯಾರ್ಥಿಗಳಲ್ಲಿ 94 ಮಕ್ಕಳು ಉತ್ತೀರ್ಣಗೊಂಡಿದ್ದಾರೆ. ಅತ್ಯುನ್ನತ್ತ ಶ್ರೇಣಿಯಲ್ಲಿ 19 ಮಕ್ಕಳು ಮತ್ತು ಪ್ರಥಮ ದರ್ಜೆಯಲ್ಲಿ 66 ಹಾಗೂ ದ್ವಿತೀಯ ಶ್ರೇಣಿಯಲ್ಲಿ 9 ಮಕ್ಕಳು ಉತ್ತೀರ್ಣರಾಗಿದ್ದು, ಈ ಪೈಕಿ ಪ್ರೀತಿ ಕೆ. 601 ಅಂಕಗಳಿಸಿ ಶೇ.96.16 ಅಂಕ ಪಡೆದಿದ್ದಾರೆ. ಉಳಿದಂತೆ ನಿಖಿಲ್ 599, ಅರ್ಜುನ್ ಅರವಿಂದ್ 598 ಅಂಕಗಳಿಸಿದ್ದಾರೆ.ಸಂತಮೇರಿ ಶಾಲೆಯ 109 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದು, 99 ಮಕ್ಕಳು ಉತ್ತೀರ್ಣರಾಗುವ ಮೂಲಕ ಶೇ.90.82 ಫಲಿತಾಂಶ ದಾಖಲಿಸಿದ್ದಾರೆ. ಅತ್ಯುನ್ನತ್ತ ಶ್ರೇಣಿಯಲ್ಲಿ ಒಟ್ಟು 15 ಮಂದಿ ತೇರ್ಗಡೆಗೊಂಡರೆ, ಪ್ರಥಮ ಶ್ರೇಣಿಯಲ್ಲಿ 63 ಮಂದಿ ಬಾಲಕರು, 25 ಮಂದಿ ಬಾಲಕಿಯರು, ದ್ವಿತೀಯ ಶ್ರೇಣಿಯಲ್ಲಿ 20 ತೇರ್ಗಡೆಗೊಂಡಿದ್ದಾರೆ. ಈ ಪೈಕಿ ವರ್ಷಿಣಿ ಎಸ್. 600 ಅಂಕ, ಶಾಹನಾಜ್ 560 ಅಂಕ ಪಡದಿದ್ದಾರೆ.ಕೊಡಗರಹಳ್ಳಿ ಸುಂಟಿಕೊಪ್ಪ ನಾಡು ಪ್ರೌಢಶಾಲೆಯ 49 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 43 ಮಂದಿ ಉತ್ತೀರ್ಣರಾಗಿದ್ದಾರೆ. ಉನ್ನತ ಶ್ರೇಣಿಯಲ್ಲಿ 4 ಮಂದಿ, ಪ್ರಥಮ ಶ್ರೇಣಿಯಲ್ಲಿ 29 ಮಂದಿ, ದ್ವಿತೀಯ ಶ್ರೇಣಿಯಲ್ಲಿ 10 ಮಂದಿ ಉತ್ತೀರ್ಣರಾಗಿದ್ದಾರೆ. ಈ ಪೈಕಿ ವಿ.ಕೆ. ಸುಜೇಶ್ 565 ಅಂಕ, ಸೀಮಾ ಬಿ. 555, ರೇನಿಲ್ 554 ಅಂಕಗಳಿದ್ದಾರೆ. ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ 46 ಮಂದಿ ಪರೀಕ್ಷೆಗೆ ಹಾಜರಾಗಿದ್ದು, 30 ಮಕ್ಕಳು ಉತ್ತೀರ್ಣರಾಗಿದ್ದಾರೆ. ಪ್ರಥಮ ಶ್ರೇಣಿಯಲ್ಲಿ 25 ಮಂದಿ, ದ್ವಿತೀಯ ಶ್ರೇಣಿಯಲ್ಲಿ 5 ಮಂದಿ ಉತ್ತೀರ್ಣಗೊಂಡಿದ್ದಾರೆ.7ನೇ ಹೊಸಕೋಟೆ ಸರ್ಕಾರಿ ಪ್ರೌಢಶಾಲೆ ಹತ್ತನೇ ತರಗತಿಯಲ್ಲಿ 15 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 12 ಉತ್ತೀರ್ಣಗೊಂಡಿದ್ದಾರೆ.ಕಾನ್‌ಬೈಲ್ ಸರ್ಕಾರಿ ಪ್ರಾಢಶಾಲೆಯಲ್ಲಿ 6 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲರೂ ಉತ್ತೀರ್ಣರಾಗುವ ಮೂಲಕ ಶೇ.100 ಫಲಿತಾಂಶ ದಾಖಲಿಸಿದ್ದಾರೆ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...