ಸೆಂಟ್‌ ಮೇರಿಸ್‌ ಶಾಲೆ ಶೇ.100 ಫಲಿತಾಂಶದೊಂದಿಗೆ ಐಸಿಎಸ್‌ಇಯಲ್ಲಿ ಜಿಲ್ಲೆಗೆ ಪ್ರಥಮ

KannadaprabhaNewsNetwork |  
Published : May 01, 2026, 01:15 AM IST
ಸಸ | Kannada Prabha

ಸಾರಾಂಶ

ಚಿಕ್ಕಮಗಳೂರುಉಂಡೇದಾಸರಹಳ್ಳಿಯ ಸೆಂಟ್‌ ಮೇರಿಸ್ ಇಂಟರ್‌ ನ್ಯಾಷನಲ್ ಶಾಲೆ ಐಸಿಎಸ್‌ 12ನೇ ಮತ್ತು 10ನೇ ತರಗತಿಯ ಐಸಿಎಸ್‌ಇ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶದೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದೆ.

ಸೆಂಟ್‌ ಮೇರಿಸ್ ಇಂಟರ್‌ ನ್ಯಾಷನಲ್ ಶಾಲೆ ಸಂಸ್ಥಾಪಕ ಅಧ್ಯಕ್ಷ ಜೆರಾಲ್ಡ್ ಲೋಬೋಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಉಂಡೇದಾಸರಹಳ್ಳಿಯ ಸೆಂಟ್‌ ಮೇರಿಸ್ ಇಂಟರ್‌ ನ್ಯಾಷನಲ್ ಶಾಲೆ ಐಸಿಎಸ್‌ 12ನೇ ಮತ್ತು 10ನೇ ತರಗತಿಯ ಐಸಿಎಸ್‌ಇ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶದೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದೆ.

ಗುರುವಾರ 12ನೇ ಹಾಗೂ 10ನೇ ತರಗತಿ ಫಲಿತಾಂಶ ಆನ್‌ಲೈನ್‌ನಲ್ಲಿ ಪ್ರಕಟಿಸುತ್ತಿದ್ದಂತೆ ಶಾಲೆಯಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗಿತ್ತು. ಎರಡೂ ಹಂತದಲ್ಲಿ ಶಾಲೆಯ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣ ರಾಗುವ ಮೂಲಕ ಶೇ.100 ರಷ್ಟು ಫಲಿತಾಂಶ ಪಡೆದಿದೆ.

ಈ ಹಿನ್ನೆಲೆಯಲ್ಲಿ ಸೆಂಟ್‌ ಮೇರಿಸ್ ಇಂಟರ್‌ ನ್ಯಾಷನಲ್ ಶಾಲೆ ಸಂಸ್ಥಾಪಕ ಅಧ್ಯಕ್ಷ ಜೆರಾಲ್ಡ್ ಲೋಬೋ ಅತಿ ಹೆಚ್ಚು ಗಳಿಸಿದ ವಿದ್ಯಾರ್ಥಿಗಳಿಗೆ ಸಹಿ ತಿನ್ನಿಸಿ ಅಭಿನಂದಿಸಿದರು.

ಈ ವೇಳೆ ಮಾತನಾಡಿದ ಜೆರಾಲ್ಡ್ ಲೋಬೋ ಈ ವರ್ಷ ಐಎಸ್‌ಸಿ ಮತ್ತು ಐಸಿಎಸ್‌ಇ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಶೈಕ್ಷಣಿಕವಾಗಿ ಹೊಸ ಮೈಲಿಗಲ್ಲನ್ನು ಸಂಸ್ಥೆ ಸ್ಥಾಪಿಸಿದೆ. ಶಾಲೆ ವಿಜ್ಞಾನ ಮತ್ತು ವಾಣಿಜ್ಯ ಎರಡೂ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದೆ ಎಂದರು.

ವಿಜ್ಞಾನ ವಿಭಾಗದಲ್ಲಿ ಎಂ.ಆರ್. ಸೃಜನ್ ಶೇ.97 ರಷ್ಟು ಅಂಕದೊಂದಿಗೆ ಜಿಲ್ಲೆಗೆ ಪ್ರಥಮ. ನಂತರದ ಸ್ಥಾನದಲ್ಲಿ ಬಿ. ಆರ್. ಝೇಂಕಾರ್ ಶೇ. 96.75 ರಷ್ಟು, ಪಿ.ವಿಶ್ರುತ ಶೇ.96.ರ್ರಷ್ಟು ಅಂಕ ಗಳಿಸುವ ಮೂಲಕ ಶಾಲೆಯ ಉನ್ನತ ಸಾಧಕರಾಗಿದ್ದಾರೆ.

ಇನ್ನೂ ವಾಣಿಜ್ಯ ವಿಭಾಗದಲ್ಲಿ ಬಿ. ಎಂ. ವಿಸ್ಮಯ ಶೇ. 97.25 ರಷ್ಟು ಅಂಕಗಳೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ನಂತರ ಮೊಹಮ್ಮದ್ ಅಜರ್ ಅಲ್ಮಲ್ ಶೇ. 96.75ರಷ್ಟು ಮತ್ತು ಎಚ್. ಆರ್. ಯಶಸ್ ಶೇ. 94.75 ರಷ್ಟು ಅಂಕದೊಂದಿಗೆ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.10ನೇ ತರಗತಿಯಲ್ಲೂ ಶೇ.100 ರಷ್ಟು ಫಲಿತಾಂಶಐಸಿಎಸ್‌ಇ 10ನೇ ತರಗತಿ ಪರೀಕ್ಷೆಯಲ್ಲೂ ಶಾಲೆ ಶೇ. 100ರಷ್ಟು ಫಲಿತಾಂಶ ಸಾಧಿಸಿದೆ. ಅದಿತಿ ಚೌಹಾಣ್ ಶೇ. 97.6ರಷ್ಟು ಅಂಕಗಳೊಂದಿಗೆ ಶಾಲೆಗೆ ಪ್ರಥಮ ಸ್ಥಾನ. ನಂತರ ಎಂ.ಪ್ರೀತಮ್ ಮತ್ತು ವೈ. ಎಂ.ತನುಶ್ರೀ ಇಬ್ಬರೂ ಶೇ. 97.4 ರಷ್ಟು ಅಂಕಗಳನ್ನು ಗಳಿಸಿ ಸಾಧನೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

-- ಕೋಟ್‌ --

ಸೆಂಟ್‌ ಮೇರಿಸ್ ಶಿಕ್ಷಣ ಸಂಸ್ಥೆಗಳ ಒಟ್ಟು 136 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು, ಇದು ಸಂಸ್ಥೆಯ ನಿರಂತರ ಶೈಕ್ಷಣಿಕ ಗುಣಮಟ್ಟಕ್ಕೆ ಸಾಕ್ಷಿ. ಈ ಗಮನಾರ್ಹ ಸಾಧನೆಗೆ ಎಲ್ಲಾ ವಿದ್ಯಾರ್ಥಿಗಳ ಶ್ರಮ ಮತ್ತು ಬದ್ಧತೆ ಕಾರಣ. ಶ್ರಮಿಸಿದ ಬೋಧಕ ವರ್ಗದ ಪ್ರಯತ್ನ ಮತ್ತು ಪೋಷಕರ ಬೆಂಬಲಕ್ಕೆ ಅಭಿನಂದನೆಗಳು.

- ಜೆರಾಲ್ಡ್ ಲೋಬೋ, ಸಂಸ್ಥಾಪಕ ಅಧ್ಯಕ್ಷ, ಸೆಂಟ್‌ ಮೇರಿಸ್ ಇಂಟರ್ನ್ಯಾಷನಲ್ ಶಾಲೆ ಫೋಟೋಐಎಸ್‌ಸಿ ಮತ್ತು ಐಸಿಎಸ್‌ಇ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶದ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಚಿಕ್ಕಮಗಳೂರಿನ ಸೆಂಟ್‌ ಮೇರಿಸ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಹೆಚ್ಚು ಅಂಕ ಗಣಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಜೆರಾಲ್ಡ್ ಲೋಬೋ, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಕ್ಕಿನಾಳು ಗ್ರಾಮದಲ್ಲಿ ಬಿರುಗಾಳಿಗೆ ಬಾಳೆತೋಟ ನಾಶ
ಕೋಗೋಡು ಬಳಿ ಕಾಡಾನೆಗಳ ಸಂಚಾರ