ಗ್ರಾಪಂ ವ್ಯಾಪ್ತಿಗೆ ಒಳಪಡದ ಕೆಲಸ ವಹಿಸದಂತೆ ಸಿಬ್ಬಂದಿ ಮನವಿ

KannadaprabhaNewsNetwork |  
Published : Aug 15, 2026, 03:00 AM IST
ನರಸಿಂಹರಾಜಪುರ ತಾಲೂಕು ಪಂಚಾಯಿತಿ ಇ.ಓ. ನವೀನ್ ಕುಮಾರ್ ಅವರಿಗೆ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಮನವಿ ಪತ್ರ ಅರ್ಪಿಸಿದರು. | Kannada Prabha

ಸಾರಾಂಶ

ನರಸಿಂಹರಾಜಪುರಗ್ರಾಮ ಪಂಚಾಯಿತಿಗಳ ಸಿಬ್ಬಂದಿ ಕರ್ತವ್ಯ ವ್ಯಾಪ್ತಿಗೆ ಒಳಪಡದ ಅನ್ಯ ಇಲಾಖೆಗಳ ಕೆಲಸವನ್ನು ಗ್ರಾಪಂ ಸಿಬ್ಬಂದಿ ಮೇಲೆ ಹೆಚ್ಚುವರಿಯಾಗಿ ವಹಿಸ ದಂತೆ ತಾಲೂಕಿನ ಎಲ್ಲಾ ಗ್ರಾಪಂ ಸಿಬ್ಬಂದಿ ತಾಪಂ ಇಓ ಎಚ್.ಡಿ.ನವೀನ್‌ಕುಮಾರ್ ಗೆ ಬುಧವಾರ ಮನವಿ ಸಲ್ಲಿಸಿದರು.

ತಾಪಂ ಇಓ ಎಚ್.ಡಿ.ನವೀನ್‌ಕುಮಾರ್ ಗೆ ಕೋರಿಕೆ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಗ್ರಾಮ ಪಂಚಾಯಿತಿಗಳ ಸಿಬ್ಬಂದಿ ಕರ್ತವ್ಯ ವ್ಯಾಪ್ತಿಗೆ ಒಳಪಡದ ಅನ್ಯ ಇಲಾಖೆಗಳ ಕೆಲಸವನ್ನು ಗ್ರಾಪಂ ಸಿಬ್ಬಂದಿ ಮೇಲೆ ಹೆಚ್ಚುವರಿಯಾಗಿ ವಹಿಸ ದಂತೆ ತಾಲೂಕಿನ ಎಲ್ಲಾ ಗ್ರಾಪಂ ಸಿಬ್ಬಂದಿ ತಾಪಂ ಇಓ ಎಚ್.ಡಿ.ನವೀನ್‌ಕುಮಾರ್ ಗೆ ಬುಧವಾರ ಮನವಿ ಸಲ್ಲಿಸಿದರು.

ನಾವುಗಳು ತಮ್ಮ ಮೂಲ ಕರ್ತವ್ಯಗಳ ಜೊತೆಗೆ ಈಗಾಗಲೇ ವಿವಿಧ ಸರ್ಕಾರಿ ಯೋಜನೆಗಳ ಅನುಷ್ಠಾನ , ಸಾರ್ವಜನಿಕ ಸೇವೆ, ತೆರಿಗೆ ಹಾಗೂ ಇತರೆ ರಾಜಸ್ವ ಸಂಬಂಧ ಕಾರ್ಯ, ದಾಖಲೆಗಳ ನಿರ್ವಹಣೆ, ಆನ್‌ಲೈನ್ ನಮೂದು, ವರದಿ ಸಲ್ಲಿಕೆ, ಗ್ರಾಮಸಭೆ, ವಾರ್ಡ್ ಸಭೆಗಳಿಗೆ ಸಂಬಂಧಿ ಸಿದ ಕೆಲಸ, ಸರ್ವೇ ಕಾರ್ಯ, ಕಛೇರಿ ಕಡತಗಳ ನಿರ್ವಹಣೆ, ಸಿಬ್ಬಂದಿ ಕೊರತೆ ಇದ್ದರೂ ಜವಾಬ್ದಾರಿ ನಿರ್ವಹಿಸುತ್ತಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ಗ್ರಾಪಂ ಸಿಬ್ಬಂದಿ ಕರ್ತವ್ಯ ವ್ಯಾಪ್ತಿಗೆ ನೇರವಾಗಿ ಸಂಬಂಧಿಸದ ಅನ್ಯ ಇಲಾಖೆಗಳ ಕೆಲಸ ನಿರಂತರವಾಗಿ ಹೆಚ್ಚುವರಿಯಾಗಿ ನಿರ್ವಹಿಸುವುದರಿಂದ ಗ್ರಾ.ಪಂ.ಗೆ ಸಂಬಂಧಿಸಿದ ಮೂಲಭೂತ ಕರ್ತವ್ಯ ನಿಗಧಿತ ಅವಧಿಯಲ್ಲಿ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸಲು ತೊಂದರೆಯಾಗುತ್ತಿದೆ.

ಸಾರ್ವಜನಿಕರಿಗೆ ನೀಡಬೇಕಾದ ಸೇವೆಗಳ ಮೇಲೂ ಪರಿಣಾಮ ಬೀರುತ್ತಿದೆ. ಗ್ರಾಪಂ ಸಿಬ್ಬಂದಿ ಯಾವುದೇ ಹೆಚ್ಚುವರಿ ಕರ್ತವ್ಯ ವಹಿಸುವ ಸಂದರ್ಭ ದಲ್ಲಿ ಅದು ಸರ್ಕಾರದ ಅಧಿನಿಯಮ, ನಿಯಮ, ಅಧಿಕೃತ ಆದೇಶ ಅಥವಾ ಸಕ್ಷಮ ಪ್ರಾಧಿಕಾರದಿಂದ ಹೊರಡಿಸಲಾದ ಸ್ಪಷ್ಟ ನಿರ್ದೇಶನದ ಆಧಾರದ ಮೇಲೆ ಮಾತ್ರ ಹೆಚ್ಚುವರಿ ಕಾರ್ಯ ವಹಿಸಬೇಕು. ಗ್ರಾಪಂ ಸಿಬ್ಬಂದಿಗಳ ಮೇಲೆ ಅನಗತ್ಯ ಕೆಲಸದ ಒತ್ತಡ ಉಂಟಾಗ ದಂತೆ ಹಾಗೂ ಅವರ ನಿಯಮ ಬದ್ಧ ಕರ್ತವ್ಯ ನಿರ್ವಹಣೆಗೆ ಸೂಕ್ತ ವಾತಾವರಣ ಕಲ್ಪಿಸಲು ಅಗತ್ಯ ನಿರ್ದೇಶನ ಅನ್ಯ ಇಲಾಖೆಗೆ ನೀಡಬೇಕೆಂದು ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ತಾಪಂ ಪಂಚಾಯತ್ ರಾಜ್ ಸಹಾಯಕ ನಿರ್ದೇಶಕಿ ಮಂಜುಳಾ, ಗ್ರಾಪಂ ಸಿಬ್ಬಂದಿ ಜಯಕುಮಾರ್,ನಾಗರಾಜ್, ಶಾಂತ ರಾಜ್,ರಾಜೇಶ್,ಜಗದೀಶ್,ಪ್ರಸನ್ನ, ನಾಗವೇಣಿ, ಲತಾ,ಗಿರೀಶ್,ಈರಪ್ಪ, ನಾಗೇಶ್,ರಮ್ಯ, ಎಸ್.ಜಾನಕಿ, ಜೀವನ್, ಮಂಜುನಾಥ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮೀರ್ ಮೊಬೈಲಲ್ಲಿ ಭಾರತ ವಿರೋಧಿ ಮ್ಯಾಪ್‌!
ಚಿಕ್ಕಮಗಳೂರು ನಗರದಲ್ಲಿ 15 ಭಾರತ್‌ ಜೋಡೋ: ಆಯುಕ್ತ ಬಸವರಾಜ್‌