ಕನ್ನಡಪ್ರಭ ವಾರ್ತೆ ಹುಣಸಗಿ
ಸಮೀಪದ ರಾಜನಕೋಳೂರು ಗ್ರಾಮದ ಪಿಕೆಜಿಬಿ ಬ್ಯಾಂಕಿನಲ್ಲಿ ಶಾಖಾ ವ್ಯವಸ್ಥಾಪಕ ಅಲ್ಲು ಶಿವಕೃಷ್ಣ ಅವರಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಗ್ರಾಹಕರಿಗೆ ಯಾವುದೇ ಸಮಸ್ಯೆ ಇದ್ದಾಗ ಸ್ಪಂದಿಸಿ ಪರಿಹರಿಸುವ ಕೆಲಸ ಮಾಡಿದಾಗ ಅದಕ್ಕಿಂತ ಪ್ರಾಮಾಣಿಕ ಕರ್ತವ್ಯ ಮತ್ತೊಂದಿಲ್ಲ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಖಾ ವ್ಯವಸ್ಥಾಪಕ ಅಲ್ಲುಶಿವಕೃಷ್ಣ, ಈ ಭಾಗದ ರೈತಾಪಿ ಜನರು ಬ್ಯಾಂಕಿನೊಂದಿಗೆ ಉತ್ತಮ ಸಂಬಂಧ ಹೊಂದಿದ್ದಲ್ಲದೆ ವಿಶ್ವಾಸ ಪಡೆದಿದ್ದಾರೆ ಎಂದರು.ಸಂಗಮೇಶ ನಾಯಕ, ನಿವೇದಿತಾ, ವಿಶಾಲ್, ಪ್ರಾಣೇಶ್, ಸಂಗನಬಸವ, ಬಿ.ಸಿ. ಪಾಟೀಲ್, ಅಮರಯ್ಯಸ್ವಾಮಿ ಸೇರಿದಂತೆ ಇತರರಿದ್ದರು.