ಹುಬ್ಬಳ್ಳಿ: ನಗರದಿಂದ ದೇಶದ ವಿವಿಧ ಭಾಗಗಳಿಗೆ ಶೀಘ್ರದಲ್ಲಿ ಸ್ಟಾರ್ ಏರ್‌ಲೈನ್ಸ್ ಕಾರ್ಯಾಚರಣೆ ನಡೆಸಲಿದೆ ಎಂದು ಘೋಡಾವತ್ ಗ್ರೂಪ್ ಅಧ್ಯಕ್ಷ ಸಂಜಯ ಘೋಡಾವತ್ ಭರವಸೆ ನೀಡಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಹುಬ್ಬಳ್ಳಿ- ಜೋಧಪುರ, ಹುಬ್ಬಳ್ಳಿ- ಅಹಮದಾಬಾದ್, ಹುಬ್ಬಳ್ಳಿ- ದೆಹಲಿ, ಹುಬ್ಬಳ್ಳಿ- ಚೆನ್ನೈ ಮತ್ತು ಹುಬ್ಬಳ್ಳಿ- ಶಿರಡಿಗೆ ಹೋಗಲು ಸ್ಟಾರ್ ಏರ್‌ಲೈನ್ಸ್‌ನ ವಿಮಾನ ಸಂಚಾರ ಪ್ರಾರಂಭಿಸಲು ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಸಂಜಯ ಘೋಡಾವತ್, ಮುಂಬರುವ ದಿನಗಳಲ್ಲಿ ಸ್ಟಾರ್ ಏರ್‌ಲೈನ್ಸ್‌ನಿಂದ ಎರಡು ಹೊಸ ವಿಮಾನಗಳನ್ನು ಕೊಂಡುಕೊಳ್ಳಲಾಗುವುದು, ಅವುಗಳಲ್ಲಿ ಒಂದನ್ನು ಹುಬ್ಬಳ್ಳಿ- ಜೋಧಪುರ ಮಾರ್ಗವಾಗಿ ಸಂಚಾರ ಪ್ರಾರಂಭಿಸಲಾಗುವುದು. ಮತ್ತೊಂದನ್ನು ಬೇರೆ ಮಾರ್ಗಕ್ಕೆ ಉಪಯೋಗಿಸಲಾಗುವುದು ಎಂದು ಭರವಸೆ ನೀಡಿದರು ಎಂದು ನಿಯೋಗ ಪ್ರಕಟಣೆಯ ಮೂಲಕ ತಿಳಿಸಿದೆ. ಈ ವೇಳೆ ಸುಧೀರ ವೋರಾ, ಉಜ್ವಲ್ ಸಿಂಘಿ, ಸುಭಾಷ ಡಂಕ ಮತ್ತಿತರರಿದ್ದರು.