18ರಂದು ನಮ್ಮೊಳಗಿನ ನಕ್ಷತ್ರಗಳು ಸರಣಿಗೆ ಚಾಲನೆ

KannadaprabhaNewsNetwork |  
Published : Oct 17, 2026, 02:30 AM IST
ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ನಮ್ಮನೆ ಭಟ್ಟರ ಹೋಟೆಲ್. | Kannada Prabha

ಸಾರಾಂಶ

ಗೋಡಿನ ಗಣೇಶ ತಿಮ್ಮಣ್ಣ ಹೆಗಡೆ ಅವರು ‘ತಿಗಣೇಶ’ ಎಂಬ ಕಾವ್ಯನಾಮದಿಂದ ಗುರುತಿಸಿಕೊಂಡಿದ್ದಾರೆ. ಗೂಡಂಗಡಿಯಿಂದ ಆರಂಭಿಸಿ ಹೋಟೆಲ್ ಉದ್ಯಮದವರೆಗೆ ಬೆಳೆದಿರುವ ಅವರು, ಸಾಹಿತ್ಯದ ಮೇಲಿನ ಆಸಕ್ತಿಯನ್ನು ಸಾಮಾಜಿಕ ಚಟುವಟಿಕೆಯಾಗಿ ರೂಪಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಹೊನ್ನಾವರ: ತಾಲೂಕು ಪಂಚಾಯಿತಿ ಕಟ್ಟಡದ ಎದುರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ‘ನಮ್ಮನೆ ಭಟ್ಟರ ಹೋಟೆಲ್ ಇನ್ಮುಂದೆ ಸಾಹಿತ್ಯಾಸಕ್ತರ ಸಂಗಮ ತಾಣವಾಗಲಿದೆ. ಕವಿ, ಲೇಖಕ ಹಾಗೂ ಸಾಹಿತ್ಯಾಸಕ್ತ ಗಣೇಶ ಹೆಗಡೆ ಅವರು ಜೀವನೋಪಾಯಕ್ಕಾಗಿ ನಡೆಸುತ್ತಿರುವ ಈ ಹೋಟೆಲ್‌ನಲ್ಲಿ ಅ. 18ರಿಂದ ಪ್ರತಿ ಹದಿನೈದು ದಿನಕ್ಕೊಮ್ಮೆ ಭಾನುವಾರ ಸಂಜೆ ‘ನಮ್ಮೊಳಗಿನ ನಕ್ಷತ್ರಗಳು’ ಎಂಬ ವಿನೂತನ ಸಾಹಿತ್ಯ ಸರಣಿ ಕಾರ್ಯಕ್ರಮ ನಡೆಯಲಿದೆ.ಸ್ಥಳೀಯ ಸಾಹಿತಿಗಳು, ಅವರ ಸಾಹಿತ್ಯ ಕೃತಿಗಳು ಹಾಗೂ ಸಾಧನೆಗಳನ್ನು ಪರಿಚಯಿಸುವುದರ ಜತೆಗೆ ಪ್ರತಿಯೊಂದು ಕಾರ್ಯಕ್ರಮದಲ್ಲೂ ಹಿರಿಯ ಸಾಹಿತಿಯೊಬ್ಬರನ್ನು ಗೌರವಿಸುವ ಉದ್ದೇಶವನ್ನು ಈ ವೇದಿಕೆ ಹೊಂದಿದೆ. ಸರಣಿಯ ಉದ್ಘಾಟನಾ ಕಾರ್ಯಕ್ರಮ ಅ. 18ರಂದು ಸಂಜೆ 4 ಗಂಟೆಗೆ ನಡೆಯಲಿದೆ.ಮಾಗೋಡಿನ ಗಣೇಶ ತಿಮ್ಮಣ್ಣ ಹೆಗಡೆ ಅವರು ‘ತಿಗಣೇಶ’ ಎಂಬ ಕಾವ್ಯನಾಮದಿಂದ ಗುರುತಿಸಿಕೊಂಡಿದ್ದಾರೆ. ಗೂಡಂಗಡಿಯಿಂದ ಆರಂಭಿಸಿ ಹೋಟೆಲ್ ಉದ್ಯಮದವರೆಗೆ ಬೆಳೆದಿರುವ ಅವರು, ಸಾಹಿತ್ಯದ ಮೇಲಿನ ಆಸಕ್ತಿಯನ್ನು ಸಾಮಾಜಿಕ ಚಟುವಟಿಕೆಯಾಗಿ ರೂಪಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಈ ಕಾರ್ಯಕ್ಕೆ ಹಳದೀಪುರದ ಗಣೇಶ ಜೋಶಿ ಅವರ ಸತ್ವಾಧಾರ ಫೌಂಡೇಶನ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಎಚ್.ಎಸ್. ಗೌಡ ಹಾಗೂ ಚುಟುಕು ಸಾಹಿತಿ ರವೀಂದ್ರ ಭಟ್ ಸೂರಿ ಕೈಜೋಡಿಸಿದ್ದಾರೆ.ಈ ಪಾಕ್ಷಿಕ ಸಾಹಿತ್ಯ ಸರಣಿಯನ್ನು ಪತ್ರಕರ್ತ ಜಿ.ಯು. ಭಟ್ ಉದ್ಘಾಟಿಸಲಿದ್ದು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹಾಗೂ ಸಾಹಿತಿ ರೋಹಿದಾಸ ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಪತ್ರಕರ್ತ ಕೃಷ್ಣಮೂರ್ತಿ ಹೆಬ್ಬಾರ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಮೊದಲ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಡಾ. ಜಿ.ಎಲ್. ಹೆಗಡೆ ಅವರ ಯಕ್ಷಗಾನ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳ ಸಾಧನೆಗಳನ್ನು ಪರಿಚಯಿಸಿ ಗೌರವಿಸಲಾಗುವುದು.ವಿಶೇಷ ಪ್ರದರ್ಶನ ಮಳಿಗೆಯಲ್ಲಿ ಸಾಹಿತಿಗಳ ಪರಿಚಯ, ಕೃತಿಗಳು ಮತ್ತು ಸಾಧನೆಗಳ ವಿವರಗಳನ್ನು ಪ್ರದರ್ಶಿಸಲಾಗುವುದು. ಗ್ರಾಹಕರು ಪುಸ್ತಕಗಳನ್ನು ವೀಕ್ಷಿಸುವುದರ ಜತೆಗೆ ಆಸಕ್ತಿಯಿಂದ ಓದಬಹುದು ಹಾಗೂ ಖರೀದಿಸಲೂ ಅವಕಾಶವಿರಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಜಯ ಸಾಮ್ರಾಟ್ ಸಂಸ್ಥೆಯ ವತಿಯಿಂದ ಪುತ್ತೂರುದ ಪಿಲಿಗೊಬ್ಬು'''' ಸೀಸನ್ ೪
ವಿಶೇಷ ಚೇತನರಿಗೆ ಮೆಡಿಕಲ್ ಕಾಲೇಜ್‌ನಲ್ಲಿ ಉದ್ಯೋಗ ಒದಗಿಸಲು ಯತ್ನ-ಶಾಸಕ ಅಶೋಕ್ ರೈ