ಧೈರ್ಯದಿಂದ ಉದ್ಯಮ ಸ್ಥಾಪಿಸಿ: ಜಗದೀಶ

KannadaprabhaNewsNetwork |  
Published : Oct 10, 2024, 02:27 AM IST
ಕಾರ್ಯಕ್ರಮವನ್ನು ಆರ್ಯನ್ ದೀಪಕ ಜಗದೀಶ ಉದ್ಘಾಟಿಸಿದರು. | Kannada Prabha

ಸಾರಾಂಶ

ಇಂದಿನ ದಿನಮಾನದಲ್ಲಿ ಪುರುಷರಷ್ಟೇ ಮಹಿಳೆಯರು ಉದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಯಶಸ್ವಿಯಾಗಿದ್ದಾರೆ

ಗದಗ: ಎಲ್ಲರಿಗೂ ಭಗವಂತ ತಮ್ಮದೇ ಆದ ಬುದ್ಧಿ ಶಕ್ತಿ ನೀಡಿರುತ್ತಾನೆ ಅದನ್ನು ನಾವು ಸರಿಯಾಗಿ ಸಮರ್ಪಕವಾಗಿ ಉಪಯೋಗಿಸಿಕೊಂಡು ಧೈರ್ಯದಿಂದ ಉದ್ದಿಮೆ ನಡೆಸಲು ಮುಂದೆ ಬರಬೇಕಾಗಿದೆ. ಅದಕ್ಕೆ ಮನೆಯವರ ಪ್ರೀತಿ ಮತ್ತು ವಿಶ್ವಾಸ ಮುಖ್ಯವಾಗಿದೆ. ಇದರಿಂದ ನಾವು ಸಮಾಜದಲ್ಲಿ ಒಳ್ಳೆಯ ಹಾಗೂ ಉನ್ನತಮಟ್ಟಕ್ಕೆ ಏರಲು ಸಾಧ್ಯವಾಗುತ್ತದೆ ಎಂದು ಆರ್ಯನ್ ದೀಪಕ ಜಗದೀಶ ಹೇಳಿದರು.

ಅವರು ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ರಜತ ಮಹೋತ್ಸವ, ಬನಪ್ಪ ಸಂಕಪ್ಪ ಸಂಕಣ್ಣವರ ನವೀಕೃತ ಹವಾನಿಯಂತ್ರತ ಸಭಾ ಭವನದ ಉದ್ಘಾಟನೆ ಹಾಗೂ ಕಟ್ಟಡದ ದಾನಿಗಳ ಭಾವಚಿತ್ರ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಾವು ದುಡಿದ ಹಣದಲ್ಲಿ ಸಮಾಜಕ್ಕೆ ಕೊಡುಗೆ ನೀಡುವುದು, ಅಂದರೆ ಹಸಿದವರಿಗೆ ಅನ್ನ ನೀಡುವುದು ಮತ್ತು ಬಡಮಕ್ಕಳಿಗೆ ವಿದ್ಯೆ ನೀಡುವುದು ಆಗಿರುತ್ತದೆ. ನಾವು ಬಿಳುತ್ತೇವೆ ಎಂದು ಹೆದರಿ ನಡೆದರೆ ಓಡಾಡಲು ಕೂಡಾ ಬರುವುದಿಲ್ಲ ಆದ್ದರಿಂದ ಹೆದರದೆ ಮುಂದೆ ಸಾಗಬೇಕು. ಅಂದಾಗ ಮಾತ್ರ ಯಶಸ್ವಿ ಮೆಟ್ಟಿಲು ಏರಲು ಸಾಧ್ಯವಾಗುತ್ತದೆ. ಇಂದಿನ ದಿನಮಾನದಲ್ಲಿ ಪುರುಷರಷ್ಟೇ ಮಹಿಳೆಯರು ಉದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಯಶಸ್ವಿಯಾಗಿದ್ದಾರೆ. ಸರ್ಕಾರವು ಕೂಡಾ ಸಾಕಷ್ಟು ಹಣಕಾಸಿನ ಸಹಾಯ ಸಹಕಾರ ನೀಡುತ್ತಿದೆ. ಅದನ್ನು ಸಮರ್ಪಕವಾಗಿ ಸದುಪಯೋಗ ಪಡಿಸಿಕೊಳ್ಳುವುದು ಅತೀ ಅವಶ್ಯವಾಗಿದೆ ಎಂದರು. ಸಾನಿಧ್ಯ ವಹಿಸಿದ ಹಾವೇರಿ ಶಿವಯೋಗ ಮಂದಿರ ಹುಕ್ಕೇರಿಮಠದ ಶ್ರೀಸದಾಶಿವ ಸ್ವಾಮಿಗಳು ಮಾತನಾಡಿ, ಭೂಮಿ ಮೇಲೆ ಯಾರು ಶಾಶ್ವತವಲ್ಲ, ಭೂಮಿ ಮೇಲೆ ಹುಟ್ಟಿದ ಮೇಲೆ ಸಾವು ಖಚಿತ. ಹುಟ್ಟು ಮತ್ತು ಸಾವುಗಳ ನಡುವೆ ನಾವು ಸಮಾಜದಲ್ಲಿ ಹೆಸರು ಉಳಿಸಿಕೊಂಡು ಹೋದರೆ ಮಾತ್ರ ಜೀವನ ಸಾರ್ಥಕವಾಗುತ್ತದೆ. ಬರುವ ವರ್ಷ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯು ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಗದಗ ಉತ್ಸವದಲ್ಲಿ ಹೆಸರಿನಲ್ಲಿ ಉದ್ಯಮದಾರರಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುವುದು ಇಡೀ ರಾಜ್ಯಕ್ಕೆ ಮಾದರಿಯಾದ ಸಂಸ್ಥೆಯಾಗಿದೆ ಎಂದರು.

ಸಂಸ್ಥೆಯ ನವೀಕೃತ ಸಭಾ ಭವನ ಉಪ ಸಮಿತಿ ಚೇರಮನ್‌ ಚಂದ್ರು ಬಾಳಿಹಳ್ಳಿಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯು 1975 ರಿಂದ ಹುಟ್ಟಿ ಬೆಳೆದ ಬಂದ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡಿದರು.

ಈ ವೇಳೆ ದಾನಿಗಳಾದ ಅಶೋಕ ಸಂಕಪ್ಪ ಸಂಕಣ್ಣವರ, ನವೀನ ಅಕ್ಕಿ, ದೀರಜ ಕಾಂಚನ್ ಹಾಗೂ ರೊಹಿತ ಜಿ. ಗಾಂನಕರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಈಶ್ವರಪ್ಪ ಸಿ. ಮುನವಳ್ಳಿ ವಹಿಸಿದ್ದರು. ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಎಸ್.ಪಿ. ಸಂಶಿಮಠ, ಪದಾಧಿಕಾರಿಗಳಾದ ತಾತನಗೌಡ ಎಸ್. ಪಾಟೀಲ, ಶರಣಬಸಪ್ಪ ಎಸ್. ಗುಡಿಮನಿ, ರಾಜಣ್ಣಾ ಬಿ. ಮಲ್ಲಾಡದ, ಸದಾಶಿವಯ್ಯ ಎಸ್. ಮದರಿಮಠ, ಅಶೋಕಗೌಡ ಕೆ. ಪಾಟೀಲ, ಸುವರ್ಣಾ ಎಸ್. ಮದರಿಮಠ, ಸದಾಶಿವಯ್ಯ ಎಸ್. ಮದರಿಮಠ, ತೋಟಪ್ಪ(ರಾಜು) ಕೆ.ಕುರಡಗಿ, ಪ್ರಕಾಶ ಎಸ್. ಉಗಲಾಟದ ಸೇರಿದಂತೆ ಇತರರು ಇದ್ದರು.

ಗೌರವ ಕಾರ್ಯದರ್ಶಿ ಪ್ರಕಾಶ ಎಸ್. ಉಗಲಾಟದ ನಿರೂಪಿಸಿದರು. ಉಪಾಧ್ಯಕ್ಷ ಶರಣಬಸಪ್ಪ ಎಸ್.ಗುಡಿಮನಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ