ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆ ತಕ್ಷಣ ಆರಂಭಿಸಿ

KannadaprabhaNewsNetwork |  
Published : Nov 09, 2026, 03:00 AM IST
ಜಮಖಂಡಿ: ನಗರದ ಪಂಚಮಸಾಲಿ ಸಮುದಾಯ ಕಲ್ಯಾಣಮಂಟಪದಲ್ಲಿ ನಡೆದ ರೈತರ ಸಭೆಯಲ್ಲಿ ರೈತರ ಕಬ್ಬು ಮತ್ತು ಕಬ್ಬು ಸಾಗಿಸುವ ವಾಹನಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ಒತ್ತಾಯಿಸಿ ತಹಶೀಲ್ದಾರ ಅನೀಲ ಬಡಿಗೇರ ಅವರಿಗೆ ಮನವಿ ಸಲ್ಲಿಸಿದರರು. | Kannada Prabha

ಸಾರಾಂಶ

ತಾಲೂಕಿನ ಸುತ್ತಮುತ್ತಲಿನ ಕಬ್ಬು ಬೆಳೆಗಾರ ರೈತರು ಸಭೆ ನಡೆಸಿ 2026-27 ನೇ ಸಾಲಿನ ಕಬ್ಬಿನ ದರಕ್ಕೆ ಒಪ್ಪಿಗೆ ಸೂಚಿಸಿದ್ದು, ಒಪ್ಪದದಂತೆ ತಕ್ಷಣವೇ ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆಯವರು ಕಬ್ಬು ಕಟಾವು ಆರಂಭಿಸಬೇಕೆಂದು ರೈತರು ಅಧಿಕಾರಿಗಳಿಗೆ ಒತ್ತಾಯಿಸಿದರು.ನಗರದ ಪಂಚಮಸಾಲಿ ಸಮುದಾಯ ಕಲ್ಯಾಣ ಮಂಟಪದಲ್ಲಿ ನಡೆದ ರೈತರ ಸಭೆಯಲ್ಲಿ ತಹಸೀಲ್ದಾರ್‌ ಅನೀಲ ಬಡಿಗೇರ ಅವರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ತಾಲೂಕಿನ ಸುತ್ತಮುತ್ತಲಿನ ಕಬ್ಬು ಬೆಳೆಗಾರ ರೈತರು ಸಭೆ ನಡೆಸಿ 2026-27 ನೇ ಸಾಲಿನ ಕಬ್ಬಿನ ದರಕ್ಕೆ ಒಪ್ಪಿಗೆ ಸೂಚಿಸಿದ್ದು, ಒಪ್ಪದದಂತೆ ತಕ್ಷಣವೇ ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆಯವರು ಕಬ್ಬು ಕಟಾವು ಆರಂಭಿಸಬೇಕೆಂದು ರೈತರು ಅಧಿಕಾರಿಗಳಿಗೆ ಒತ್ತಾಯಿಸಿದರು.ನಗರದ ಪಂಚಮಸಾಲಿ ಸಮುದಾಯ ಕಲ್ಯಾಣ ಮಂಟಪದಲ್ಲಿ ನಡೆದ ರೈತರ ಸಭೆಯಲ್ಲಿ ತಹಸೀಲ್ದಾರ್‌ ಅನೀಲ ಬಡಿಗೇರ ಅವರಿಗೆ ಮನವಿ ಸಲ್ಲಿಸಿ ಪ್ರಮುಖರು ಮಾತನಾಡಿ, ರಾಜ್ಯದಲ್ಲಿ ರೈತ ಸಂಘಟನೆಗಳ ಪ್ರತಿಭಟನೆಗಳ ಸಂದರ್ಭದಲ್ಲಿ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತ ಹಾಗೂ ರಾಜ್ಯ ರೈತ ಸಂಘದ ಮುಖಂಡರ ನೇತೃತ್ವದಲ್ಲಿ ನಡೆದ ಒಪ್ಪಂದದ ಪ್ರಕಾರ, ಪ್ರಸಕ್ತ ಸಾಲಿನ ಕಬ್ಬಿನ ದರವನ್ನು ಮೊದಲ ಕಂತಿನಲ್ಲಿ ಪ್ರತಿ ಟನಗೆ ₹3500 ಹಾಗೂ ಕಾರ್ಖಾನೆ ಹಂಗಾಮು ಮುಕ್ತಾಯದ ನಂತರ ಎರಡನೇ ಕಂತಿನಲ್ಲಿ ₹100 ಸೇರಿಸಿ ಪ್ರತಿ ಟನ್‌ಗೆ ₹3600 ದರ ನಿಗದಿಪಡಿಸಲಾಗಿದೆ. ಈ ದರಕ್ಕೆ ಕಬ್ಬು ಬೆಳೆಗಾರರ ಸಂಪೂರ್ಣ ಒಪ್ಪಿಗೆ ಇದೆ ಸೂಚಿಸಿದರು.

ಕಬ್ಬು ಕಟಾವು ಗ್ಯಾಂಗ್‌ ಹಾಗೂ ಕಬ್ಬು ಸಾಗಿಸುವ ವಾಹನಗಳ ಮಾಲೀಕರಿಗೆ ಲಕ್ಷಾಂತರ ಮುಂಗಡ ಹಣವನ್ನು ನೀಡಲಾಗಿದೆ. ನಿಗದಿತ ಅವಧಿಯಲ್ಲಿ ಕಾರ್ಖಾನೆ ಆರಂಭವಾಗದಿದ್ದರೆ ಕಟಾವು ಗ್ಯಾಂಗ್‌ಗಳು ಹಾಗೂ ವಾಹನ ಮಾಲೀಕರು ಬೇರೆ ಸ್ಥಳಗಳಿಗೆ ತೆರಳುವ ಸಾಧ್ಯತೆಯಿದೆ. ಇದರಿಂದ ರೈತರಿಗೆ ಮತ್ತಷ್ಟು ಆರ್ಥಿಕ ಸಂಕಷ್ಟ ಎದುರಾಗುವ ಆತಂಕವಿದೆ. ಮಳೆ ಅಭಾವದಿಂದ ಬರ ಪರಿಸ್ಥಿತಿ ದಿನದಿಂದದಿನಕ್ಕೆ ತೀವ್ರಗೊಳ್ಳುತ್ತಿದ್ದು, ಸಾರ್ವಜನಿಕರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕಬ್ಬು ಕಟಾವು ವಿಳಂಬವಾದರೆ ಕೃಷಿ ಚಟುವಟಿಕೆಗಳಿಗೂ ತೊಂದರೆಯಾಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು.ಸಕ್ಕರೆ ಕಾರ್ಖಾನೆಯವರು ಕಬ್ಬು ಕಟಾವು ಆದೇಶ ನೀಡದ್ದು, ರೈತರು ಸ್ವಯಂಪ್ರೇರಿತವಾಗಿ ಕಬ್ಬು ಕಟಾವು ಮಾಡಿ ಕಾರ್ಖಾನೆಯ ಗೇಟ್‌ ಬಳಿ ತಂದು ವಾಹನನಿಲ್ಲಿಸಿದ್ದಾರೆ. ಆದರೆ ಕಾರ್ಖಾನೆಯವರು ಕಬ್ಬು ಹಾಗೂ ಕಬ್ಬು ವಾಹನಗಳನ್ನು ಒಳಗೆ ತೆಗೆದುಕೊಳ್ಳುತ್ತಿಲ್ಲ. ಇದರಿಂದ ರೈತರು ಹಾಗೂ ಕಬ್ಬು ಸಾಗಿಸುವ ವಾಹನಗಳ ಮಾಲೀಕರು ಆತಂಕಕ್ಕೆ ಒಳಗಾಗಿದ್ದಾರೆ. ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಡಿವೈಎಸ್ಪಿ, ತಹಸೀಲ್ದಾರರು ಹಾಗೂ ಸಿಪಿಐ ವೃತ್ತ ನಿರೀಕ್ಷಕರಿಗೆ ರೈತರು ಮನವಿ ಸಲ್ಲಿಸಿ, ರೈತರ ಕಬ್ಬು ಮತ್ತು ಕಬ್ಬು ಸಾಗಿಸುವ ವಾಹನಗಳಿಗೆ ಸೂಕ್ತ ಭದ್ರತೆ ಒದಗಿಸುವ ಮೂಲಕ ಕಾರ್ಖಾನೆಯನ್ನು ಆದಷ್ಟು ಶೀಘ್ರವಾಗಿ ಪ್ರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಕಬ್ಬು ಬೆಳೆಗಾರ ರೈತರು, ಕಾರ್ಖಾನೆಯವರು ಮತ್ತು ಜಿಲ್ಲಾಡಳಿತದ ನಡುವೆ ಈಗಾಗಲೇ ನಿಗದಿಪಡಿಸಿರುವ ದರದ ಕುರಿತು ಸಂಪೂರ್ಣ ಒಪ್ಪಿಗೆಯಿದ್ದು, ರೈತರ ಹಿತದೃಷ್ಟಿಯಿಂದ ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆ ತಕ್ಷಣ ಪ್ರಾರಂಭಿಸಬೇಕು. ಕಬ್ಬು ಸಾಗಿಸುವ ವಾಹನಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು. ರೈತರ ಕೃಷಿ ಚಟುವಟಿಕೆಗಳು ಹಾಗೂ ಕಬ್ಬು ಬೆಳೆಗಾರರ ಆರ್ಥಿಕ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಕಾರ್ಖಾನೆಯ ಆಡಳಿತ ಮಂಡಳಿ ಮತ್ತು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರೈತರು ಮನವಿ ತಹಶೀಲ್ದಾರ ಅನೀಲ ಬಡಿಗೇರ ಅವರಿಗೆ ಮನವಿ ಸಲ್ಲಿಸಿದರು.

ಸಭೆಯಲ್ಲಿ ಪುಂಡಲೀಕ ಫಾಲಬಾವಿ, ಈಶ್ವರ ಕರಸಬನ್ನವರ, ಸೋಮನಾಥ ಪಾಟೀಲ, ಭೀಮು ಹಿಪ್ಪರಗಿ, ಅಪ್ಪಾಸಿ ಚೌವ್ಹಾಣ, ಸದಪ್ಪ ಹಿಪ್ಪರಗಿಕ ಭೀಮಸಿ ಮಗದುಮ, ಮಲ್ಲಪ್ಪ ಪೂಜಾರಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟನ್ ಕಬ್ಬಿಗೆ ₹1,000 ಹೆಚ್ಚುವರಿ ದರ ನಿಗದಿಗೆ ಪಟ್ಟು
ದೀಪಾವಳಿ ಸಂಭ್ರಮಕ್ಕೆ ಕಳೆಗಟ್ಟಿದ ಕುಂದಾನಗರಿ ಮಾರುಕಟ್ಟೆ