ಸಿದ್ದಗಂಗಪ್ಪಗೆ ಪುಟ್ಟರಾಜ ಹೆಸರಿನ ರಾಜ್ಯ ಪ್ರಶಸ್ತಿ

KannadaprabhaNewsNetwork |  
Published : Oct 05, 2024, 01:34 AM IST
3ಡಿಡಬ್ಲೂಡಿ7ಡಾ. ಎಚ್. ಎಸ್. ಸಿದ್ದಗಂಗಪ್ಪ | Kannada Prabha

ಸಾರಾಂಶ

ಪ್ರಶಸ್ತಿಯು ₹ 5 ಸಾವಿರ ನಗದು ಬಹುಮಾನ, ಪ್ರಮಾಣಪತ್ರ, ನೆನಪಿನ ಕಾಣಿಕೆ ಸತ್ಕಾರ ಒಳಗೊಂಡಿದೆ. ಅ. 20ರಂದು ಸೇವಾ ಸಮಿತಿಯು ಹಮ್ಮಿಕೊಳ್ಳುವ ಪಂ. ಪುಟ್ಟರಾಜ ಸಾಹಿತ್ಯೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಧಾರವಾಡ:

ಬೆಂಗಳೂರಿನ ಡಾ. ಎಚ್.ಎಸ್. ಸಿದ್ದಗಂಗಪ್ಪ ಅವರ ಕರ್ನಾಟಕದ ಸಾಧನೆ ಸಂಪನ್ನರು ಸಾಹಿತ್ಯ ಕೃತಿಯು ಡಾ. ಪಂ. ಪುಟ್ಟರಾಜ ಸಾಹಿತ್ಯ ಪುರಸ್ಕಾರ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದೆ.

ಈ ಪ್ರಶಸ್ತಿಯು ₹ 5 ಸಾವಿರ ನಗದು ಬಹುಮಾನ, ಪ್ರಮಾಣಪತ್ರ, ನೆನಪಿನ ಕಾಣಿಕೆ ಸತ್ಕಾರ ಒಳಗೊಂಡಿದೆ. ಅ. 20ರಂದು ಸೇವಾ ಸಮಿತಿಯು ಹಮ್ಮಿಕೊಳ್ಳುವ ಪಂ. ಪುಟ್ಟರಾಜ ಸಾಹಿತ್ಯೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಪ್ರಶಸ್ತಿಗಾಗಿ ಬಂದ 130ಕ್ಕೂ ಹೆಚ್ಚು ಸಾಹಿತ್ಯ ಕೃತಿಗಳಲ್ಲಿ ಪ್ರಥಮ ಸ್ಥಾನ ಪಡೆದ ಕೃತಿಗಳಾದ ಹುಬ್ಬಳ್ಳಿಯ ಪದ್ಮಜಾ ಜಯತೀರ್ಥ ಉಮರ್ಜಿ ಇವರ ಬೃಂಗದ ಬೆನ್ನೇರಿ (ಕಥಾ ಸಂಕಲನ), ಬಾದಾಮಿಯ ಸುರೇಶ್ ಅರಳಿಮರದರವರ ಹೀಗೇ ಒಂದಿಷ್ಟು (ಕವನ ಸಂಕಲನ) ಧಾರವಾಡದ ಡಾ. ಈರಣ್ಣ ಇಂಜಗನೇರಿ ಇವರ ಫ್ರೀಡಮ್ (ಕಾದಂಬರಿ) ಕೊಪ್ಪಳ ಜಿಲ್ಲೆಯ ಬೈರಾಪುರದ ಎಲ್ಲಪ್ಪ ಮ. ಹರ್ನಾಳಗಿ ಇವರ ತಿರುವು (ಲೇಖನಗಳ ಸಂಗ್ರಹ), ಧಾರವಾಡದ ಸರಸ್ವತಿ ರಾ ಭೋಸಲೆ ಇವರ ಮೂರನೇ ಕಾಲು (ಮಕ್ಕಳ ಕಥೆಗಳು), ಧಾರವಾಡದ ಡಾ. ವೀಣಾ ಸಂಕನಗೌಡರ ಅವರ ಮೂರು ಮತ್ತೊಂದು ನಾಟಕಗಳು, ಬೆಳಗಾವಿಯ ಡಾ. ಪಿ. ನಾಗರಾಜ್ ಅವರ ವಚನ ನಿರ್ವಚನ, ಶಿವಪುತ್ರ ಕಂಠಿ ಚಿಂಚನಸೂರ ಇವರ ಸಾಧನೆಯ ಶಿಖರವನ್ನು ಏರಿದ ಶಿವಶರಣರು, ಬೀದರಿನ ಪೂಜ್ಯಶ್ರೀ ಜಗದ್ಗುರು ಶಿವಯೋಗಿಶ್ವರ ಸ್ವಾಮಿಗಳ ಆತ್ಮಾನುಭವದ ಬುತ್ತಿ, ಡಾ. ಅಂಬುಜ ಎನ್ ಮಳಖೇಡಕರ್ ಮನ ಹರಿ ಧ್ಯಾನ ಮಂದಿರ ಭಕ್ತಿಗೀತೆಗಳು ಕೃತಿಗಳಿಗೆ ಸೇವಾ ಸಮಿತಿಯ ವರ್ಷದ ಶ್ರೇಷ್ಠ ಕೃತಿ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ವರ್ಷದ ಶ್ರೇಷ್ಠ ಕೃತಿ ರತ್ನ ಪ್ರಶಸ್ತಿಯು ಪ್ರಶಸ್ತಿ ಪತ್ರ ನೆನಪಿನ ಕಾಣಿಕೆ ಒಳಗೊಂಡಿರುತ್ತದೆ. ಇದಲ್ಲದೇ, ವಿನುತ ಹಂಚಿನಮನಿ ಇವರ ನಾತಿಚರಾಮಿ, ರೂಪಾ ದೇವಿ ಬಂಗಾರ ಮುಡಿಪು, ಮಹಾಂತೇಶ ಕುಂಬಾರ ಇವರ ಕುಲಮಿಯೊಳಗಿನ ಕವಿತೆಗಳು, ಎ.ಆರ್. ಪಂಪಣ್ಣ ಶೂನ್ಯದಿಂದತ್ತ, ಮಾಲತೇಶ ಅಂಗೂರು ಕಾಡು ಮೇಡು ಮತ್ತು ಪುಟ್ಟೇ ಸೋನುವಿನ ತರಲೆ ಕಥೆಗಳು ಕೃತಿಗಳು ತೀರ್ಪುಗಾರರ ಮೆಚ್ಚಿನ ಕೃತಿ ಅಭಿನಂದನಾ ಪ್ರಶಸ್ತಿಗೆ ಆಯ್ಕೆ ಆಗಿವೆ ಎಂದು ಡಾ. ಪಂ. ಪುಟ್ಟರಾಜ ಸಾಹಿತ್ಯ ಪುರಸ್ಕಾರದ ಸದಸ್ಯೆ ಡಾ. ಸುಮಾ ಹಡಪದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿಯ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ!
ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ