ಕನ್ನಡಪ್ರಭ ವಾರ್ತೆ ಚನ್ನಗಿರಿ
ಅವರು ಸೋಮವಾರ ತಾಲೂಕಿನ ಹೊದಿಗೆರೆ ಗ್ರಾಮದಲ್ಲಿರುವ ಷಹಾಜಿ ರಾಜೇ ಭೋಂಸ್ಲೆ ಅವರ ರಾಷ್ಟ್ರೀಯ ಸ್ಮಾರಕ ಅಭಿವೃದ್ದಿ ಕಾಮಗಾರಿ ಕೆಲಸಗಳಿಗೆ ಗುದ್ದಲಿಪೂಜೆಯನ್ನು ನೆರವೇರಿಸಿ ಮಾತನಾಡಿದ ಅವರು ಈ ಹಿಂದೆ ಅಖಂಡ ಹಿಂದೂ ಸ್ಥಾನವನ್ನು ಉಳಿಸಬೇಕು ಎಂಬ ಕಲ್ಫನೆ ಇತ್ತು ಆದರೆ ಹಿಂದೂ ಸ್ವರಾಜ್ಯ ಸ್ಥಾಪನೆ ಮಾಡುವ ಉದ್ದೇಶದಲ್ಲಿದ್ದೇವೆ ಎಂದು ತಿಳಿಸುತ್ತಾ ಹೊದಿಗೆರೆ ಗ್ರಾಮಕ್ಕೆ ಬರುವ ಮಾರ್ಗದಲ್ಲಿ ಸಿಗುವ ನೀತಿಗೆರೆ, ಬೆಂಕಿಕೆರೆ ಗ್ರಾಮಗಳಲ್ಲಿ ದ್ವಾರ ಬಾಗಿಲುಗಳ ನಿರ್ಮಾಣ ಮಾಡಲಾಗುವುದು ಎಂದರು.
ಶಾಸಕ ಬಸವರಾಜು ವಿ.ಶಿವಗಂಗಾ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮರಾಠ ಸಮುದಾಯದ ಏಳಿಗೆಗಾಗಿ 187 ಕೋಟಿ ರು. ಹಣವನ್ನು ಮರಾಠ ಅಭಿವೃದ್ದಿ ನಿಗಮಕ್ಕೆ ನೀಡಿದ್ದು ಷಹಾಜಿ ಮಹಾರಾಜರ ಸ್ಮಾರಕ ಅಭಿವೃದ್ದಿಗೆ 5 ಕೋಟಿ ರು. ಅನುಧಾನ ಬಿಡುಗಡೆಗೊಳಿಸಿದ್ದು ಸ್ಮಾರಕದ ಮುಂಭಾಗದ ರಸ್ತೆಯ ಬದಿಗಳಿಗೆ ಫ್ಲೆಕ್ಸ್‌ಗಳ ಅಳವಡಿಕೆ, ಸ್ಮಾರಕದ ಮುಂಭಾಗ ಗ್ಯಾಲರಿ ನಿರ್ಮಾಣ, 200ಮೀಟರ್ ಸಿ.ಸಿ ಚರಂಡಿ ನಿರ್ಮಾಣ, 155 ಮೀಟರ್ ರಿಟೈನಿಂಗ್ ವಾಲ್, 3 ಅಂಕಣದ ಆರ್‌ಸಿಸಿ ಬಾಕ್ಸ್ ಕಲ್ವರ್ಟ್ ನಿರ್ಮಾಣ, 5.50 ಮೀ. ಅಗಲದ ಡಾಂಬರ್ ರಸ್ತೆಯ ಮರು ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ದಿ ಕೆಲಸಗಳನ್ನು ಮಾಡಿಸಲಾಗುವುದು ಎಂದರು.ಮರಾಠ ಸಮಾಜಕ್ಕೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಸಾಕಷ್ಟು ಅನುಧಾನವನ್ನು ನೀಡಿದ್ದು 400ವರ್ಷಗಳಿಂದ ಈ ಸ್ಮಾರಕದ ಅಭಿವೃದ್ದಿಯ ಬಗ್ಗೆ ಯಾರು ಚಿಂತನೆಯನ್ನು ನಡೆಸಿರಲಿಲ್ಲ ನಮ್ಮ ಸರ್ಕಾರ ಅನುಧಾನವನ್ನು ನೀಡುವ ಜತೆಗೆ ಈ ದಿನ ನಿಗಮದ ಅಧ್ಯಕ್ಷರಿಂದ ಗುದ್ದಲಿ ಪೂಜೆಯನ್ನು ಮಾಡಿಸುತ್ತಿರುವುದು ನಮ್ಮ ಸರ್ಕಾರದ ಅಭಿವೃದ್ದಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಎಂ.ಜಿ.ಮುಳೆ, ತಾಲೂಕು ಕಾಂಗ್ರೆಸ್ ಪಕ್ಷದ ಮುಖಂಡ ಹೊದಿಗೆರೆ ರಮೇಶ್, ಜೀವ ವೈವಿದ್ಯ ನಿಗಮದ ಅಧ್ಯಕ್ಷ ವಡ್ನಾಳ್ ಜಗದೀಶ್, ತಾಲೂಕು ಮರಾಠ ಸಮಾಜದ ಅಧ್ಯಕ್ಷ ಕಾಪೀಪುಡಿ ಶಿವಾಜಿರಾವ್, ಮಲ್ಲೇಶಣ್ಣ, ಲೋಕೇಶಪ್ಪ, ರಾಮಚಂದ್ರರಾವ್, ಸತೀಶ್ ಎಂ.ಪವಾರ್, ಗ್ರಾಮಸ್ಥರು, ಸಮಾಜ ಬಾಂಧವರು ಹಾಜರಿದ್ದರು.