ಗ್ಯಾರಂಟಿ ಹೆಸರಿನಲ್ಲಿ ಜನರಿಗೆ ರಾಜ್ಯ ಸರ್ಕಾರ ಮೋಸ -ಜೋಶಿ ಟೀಕೆ

KannadaprabhaNewsNetwork | Published : Apr 29, 2024 1:36 AM

ಸಾರಾಂಶ

ರಾಜ್ಯ ಸರ್ಕಾರವು ಇಂದು ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಜನರನ್ನು ಕೊಳ್ಳೆ ಹೊಡೆಯುತ್ತಿದೆ. ಉಚಿತವಾಗಿ ಕೊಡುತ್ತೇವೆ ಎಂದು ಹೇಳಿ ಒಂದು ಕಡೆ ಹೆಚ್ಚು ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್‌ ಜೋಶಿ ಹೇಳಿದರು.

ಶಿಗ್ಗಾವಿ: ರಾಜ್ಯ ಸರ್ಕಾರವು ಇಂದು ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಜನರನ್ನು ಕೊಳ್ಳೆ ಹೊಡೆಯುತ್ತಿದೆ. ಉಚಿತವಾಗಿ ಕೊಡುತ್ತೇವೆ ಎಂದು ಹೇಳಿ ಒಂದು ಕಡೆ ಹೆಚ್ಚು ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್‌ ಜೋಶಿ ಹೇಳಿದರು.

ತಾಲೂಕಿನ ನೀರಲಗಿ (ಎನ್. ಎಂ. ತಡಸ) ಗ್ರಾಮದಲ್ಲಿ ಬೃಹತ್ ರೋಡ್ ಶೋ ನಡೆಸಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ರಾಜ್ಯದ ಕಾಂಗ್ರೆಸ್ ಸರ್ಕಾರ ಬಸ್ ದರ ಹೆಚ್ಚಿಗೆ ಮಾಡಿದೆ. ಬಾಂಡ್ ದರ ಹೆಚ್ಚಿಗೆ ಮಾಡಿದೆ. ಆದರೆ ಗ್ಯಾರಂಟಿ ಹೆಸರಿನಲ್ಲಿ ಕೆಲವೊಂದು ನೀಡಿ ಕೆಲವೊಂದು ವಸ್ತುಗಳ ಬೆಲೆಯನ್ನು ಹೆಚ್ಚಿಗೆ ಮಾಡಿದೆ. ಹತ್ತು ಕೆಜಿ ಅಕ್ಕಿ ಫ್ರೀ ಅಂತಾರೆ, ಅದರಲ್ಲಿ ಐದು ಕೆ.ಜಿ. ಕೇಂದ್ರ ಸರ್ಕಾರ ನೀಡುತ್ತದೆ ಎಂದರು.

ಕೇಂದ್ರದ ಮೋದಿ ಸರ್ಕಾರ ರೈತರಿಗೆ, ಮಹಿಳೆಯರಿಗೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳ ಪ್ರಸಾರವನ್ನು ಮಾಡಬೇಕು. ಮನೆ ಮನೆಗೆ ನೀರನ್ನು ನೀಡುವ ಯೋಜನೆ, ಉಜ್ವಲ್ ಯೋಜನೆ, ಕಿಸಾನ್ ಸಮ್ಮಾನ್ ಯೋಜನೆ ಅತ್ಯಂತ ಮಹತ್ವ ಪಡೆದಿವೆ. ನರೇಂದ್ರ ಮೋದಿಯವರ ಕೈಬಲಪಡಿಸಲು ಬಿಜೆಪಿ ಕಮಲದ ಚಿಹ್ನೆಗೆ ತಮ್ಮ ಅಮುಲ್ಯವಾದ ಮತವನ್ನು ನೀಡಬೇಕು ಎಂದು ಮನವಿ ಮಾಡಿದರು.

ಗ್ರಾಮದ ಬಿಜೆಪಿ ಮುಖಂಡ ಎಂ.ಎಸ್. ಪಾಟೀಲ ಮಾತನಾಡಿ, ಕ್ಷೇತ್ರಕ್ಕೆ ಹಲವಾರು ಸಮಾಜಮುಖಿ ಕಾರ್ಯವನ್ನು ಮಾಡಿದ ಬಿಜೆಪಿಯ ಪ್ರಹ್ಲಾದ್‌ ಜೋಶಿಗೆ ನಮ್ಮ ನಿಮ್ಮೆಲ್ಲರ ಮತವನ್ನು ನೀಡಿ ಮೋದಿಯವರ ಕೈಬಲಪಡಿಸುವುದರ ಎಂದರು.

ಪ್ರಾಸ್ತಾವಿಕವಾಗಿ ತಾಲೂಕು ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಗ್ರಾಮದ ಮುಖಂಡರುಗಳು ಮಾತನಾಡಿದರು.

ಮುಖಂಡರುಗಳಾದ ಮಲ್ಲನಗೌಡ ಎಸ್. ಪಾಟೀಲ್, ಶ್ರೀಕಾಂತ್ ದುಂಡಿಗೌಡ್ರು, ಶಂಕರಗೌಡ ಅತ್ತಿಮರ, ಗಂಗಣ್ಣ ಸಾತಣ್ಣವರ್, ಶಿವಪ್ರಸಾದ್ ಸೂರುಗಿಮಠ, ತಿಪ್ಪಣ್ಣ ಸಾತಣ್ಣವರ, ನರಹರಿ ಕಟ್ಟಿ, ಶ್ರೀಕಾಂತ್ ಬುಳ್ಳಕ್ಕನವರ, ಕರಿಯಪ್ಪ ಕಟ್ಟಿಮನಿ, ರೇಣುಕುಗೌಡ್ ಪಾಟೀಲ್, ಯಲ್ಲಪ್ಪ ಹಂಚಿನಮನಿ, ಹನುಮರಡ್ಡಿ ನಡುವಿನಮನಿ, ರವಿ ಕುಡವಕ್ಕಲಿಗಾರ, ಶೇಖಣ್ಣಾ ಗಣಾಚಾರಿ, ಗ್ರಾಂ ಪಂ. ಸದಸ್ಯರಾದ ಸಿದ್ದಯ್ಯ ಬಳಗಲಿ, ಗುರುನಾಥ ಧರೆಪ್ಪನವರ, ಉಳವಪ್ಪ ಕುಬಸದ, ಶಿದ್ದಯ್ಯ ಹಿರೇಮಠ, ಕಾರ್ಯಕರ್ತರು ಪಾಲ್ಗೊಂಡಿದ್ದರು.

Share this article