ಕನ್ನಡಪ್ರಭ ವಾರ್ತೆ ಮಂಡ್ಯ
ಕೆಆರ್‌ಎಸ್‌ನಲ್ಲಿದ್ದ ನೀರಿದ್ದ ಸಮಯದಲ್ಲಿ ವಿಶ್ವೇಶ್ವರಯ್ಯ ನಾಲೆಗೆ ನೀರು ಹರಿಸಿ ಕೆರೆ-ಕಟ್ಟೆಗಳಿಗೆ ನೀರು ತುಂಬಿಸಿ ಜನ-ಜಾನುವಾರುಗಳಿಗೆ ನೀರೊದಗಿಸಲು ಸಾಧ್ಯವಾಗದಂತಹ ಸಂಕಷ್ಟ ಸ್ಥಿತಿಗೆ ಸರ್ಕಾರ ದೂಡಿದೆ. ಡಿಎಂಕೆ ಮೇಲಿನ ವ್ಯಾಮೋಹಕ್ಕೊಳಗಾಗಿ ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸುವ ಮೂಲಕ ಕಾವೇರಿ ಕಣಿವೆ ಪ್ರದೇಶದ ನೀರಿನ ಬವಣೆಗೆ ಕಾಂಗ್ರೆಸ್ ಸರ್ಕಾರ ನೇರ ಹೊಣೆಯಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೂಷಿಸಿದರು.
ಹಾಲಿಗೆ ಪ್ರೋತ್ಸಾಹಧನ ನೀಡಿಲ್ಲ. ಬೆಳೆಪರಿಹಾರದ ಹಣವನ್ನು ನೀಡದೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ. ಬರದಿಂದ ರೈತರ ಬದುಕು ಜರ್ಜರಿತವಾಗಿದೆ. ಜಾನುವಾರುಗಳಿಗೆ ಮೇವು-ನೀರಿಲ್ಲದಂತಾಗಿದೆ. ತೀವ್ರ ಬರಗಾಲದಿಂದ ಬದುಕಲು ಸಾಧ್ಯವಾಗದಂತಿರುವ ಜಾನುವಾರುಗಳಿಗೆ ಸಕಾಲದಲ್ಲಿ ಮೇವು ಮತ್ತು ನೀರು ಒದಗಿಸುವಂತಹ ಕೆಲಸವನ್ನು ಸರ್ಕಾರ ಮಾಡಬೇಕಿದೆ ಎಂದರು.ಪ್ರತಿ ಹಳ್ಳಿಗಳಲ್ಲಿ ಜಾನುವಾರುಗಳ ಕುಡಿಯುವ ನೀರಿಗಾಗಿ ನೀರಿನ ತೊಟ್ಟಿಗಳನ್ನು ನಿರ್ಮಿಸುವುದು ಅತ್ಯವಶ್ಯಕವಾಗಿದೆ. ಟ್ಯಾಂಕರ್‌ಗಳ ಮೂಲಕ ನೀರಿನ ತೊಟ್ಟಿಗಳಿಗೆ ನೀರು ತುಂಬಿಸುವ ಕೆಲಸ ತ್ವರಿತವಾಗಿ ನಡೆಯಬೇಕು. ಇಲ್ಲದಿದ್ದರೆ ಬಿಜೆಪಿ ವತಿಯಿಂದ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹೈನುಗಾರಿಕೆ ರೈತರ ಜೀವನಾಡಿಯಾಗಿದ್ದು ಪ್ರತಿಯೊಂದು ಹಳ್ಳಿಗಳಲ್ಲಿ ಡೈರಿ ಇರುವುದು ಸರಿಯಷ್ಟೇ. ಆದರೆ, ಬಿಸಿಲ ತಾಪದಿಂದ ಡಿಗ್ರಿ ಅಥವಾ ಟೆಸ್ಟ್ ಕಡಿಮೆ ಬಂದಿರುವುದರಿಂದ ರೈತರಿಗೆ ತೊಂದರೆ ನೀಡದೆ ಮಾಮೂಲಿ ದರವನ್ನೇ ನೀಡಬೇಕೆಂದು ಆಗ್ರಹಿಸಿದರು.
ನಾಳೆ ಜನಪದಗೀತೆ ಸ್ಪರ್ಧೆ
ಅಧ್ಯಕ್ಷತೆಯನ್ನು ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ವಹಿಸಲಿದ್ದು, ಉದ್ಘಾಟನೆಯನ್ನು ರಂಗನಟಿ ಮತ್ತು ಜಾನಪದ ಗಾಯಕಿ ಸವಿತಕ್ಕ ನೆರವೇರಿಸಲಿದ್ದಾರೆ, ವೇದಿಕೆಯಲ್ಲಿ ಪ್ರಾಂಶುಪಾಲ ಡಾ.ಮಂಜುನಾಥ್, ತೀರ್ಪುಗಾರಾಗಿ ರಾಷ್ಟ್ರೀಯ ಜಾನಪದ ಗಾಯಕ ಕೆ.ಆರ್.ರಮೇಶ್, ಆಕಾಶವಾಣಿ ಕಲಾವಿದ ಜಿ.ಜಿ.ನವೀನ್‌ಕುಮಾರ್, ಉಪನ್ಯಾಸಕ ಎಸ್.ಪಿ ಕ್ಯಾತೇಗೌಡ ಹಾಜರಿರುವರು.ಸಂಜೆ ೪-೩೦ಕ್ಕೆ ನಡೆಯುವ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಪಿಇಟಿ ಜಂಟಿ ಕಾರ್ಯದರ್ಶಿ ಕೆ.ಆರ್.ದಯಾನಂದ್ ವಿಜೇತರಿಗೆ ಬಹುಮಾನ ವಿತರಿಸಲಿದ್ದಾರೆ, ಸಾಂಸ್ಕೃತಿಕ ಸಮಿತಿ ಸಂಚಾಲಕಿ ಡಾ.ವಿ.ಸವಿತಾ, ಪ್ರೊ.ವೀರೇಶ್ ಮತ್ತು ಸದಸ್ಯರು ಪಾಲ್ಗೊಳ್ಳಲಿದ್ದಾರೆ, ಹೆಚ್ಚಿನ ಮಾಹಿತಿಗಾಗಿ ಪ್ರೊ.ನಂದೀಶ್‌ಕುಮಾರ್ ಮೊ. ೯೭೪೩೦೦೨೧೩ ಎಂದು ಪ್ರಕಟಣೆ ತಿಳಿಸಿದೆ.