ಕನ್ನಡಪ್ರಭ ವಾರ್ತೆ ವಿಜಯಪುರ
ಕೆಲವು ರಾಜ್ಯಗಳ ಆರ್ಥಿಕತೆ ಪ್ರವಾಸೋದ್ಯಮದ ಮೇಲೆ ಹೆಚ್ಚು ಅವಲಂಬಿತವಾಗಿದೆ. ವಿಜಯಪುರ ಜಿಲ್ಲೆಯಲ್ಲಿಯೂ ಪ್ರವಾಸೋದ್ಯಮ, ತೋಟಗಾರಿಕೆ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿದ್ದರೂ ಸಂಸದರು ಯಾವುದಕ್ಕು ಸ್ಪಂದಿಸಲಿಲ್ಲ. ಕೆಲಸ ಮಾಡದವರು ಸಾಕು, ಕ್ರಿಯಾಶೀಲ ಹೊಸಬರಿಗೆ ಅವಕಾಶ ನೀಡೋಣ. ಪ್ರೊ.ರಾಜು ಆಲಗೂರ ಅವರನ್ನು ಗೆಲ್ಲಿಸಿ, ಅಭಿವೃದ್ಧಿ ಮಾಡಿಸುವುದು ನನ್ನ ಗ್ಯಾರಂಟಿ ಎಂದು ಸಚಿವರು ಜನತೆಗೆ ವಾಗ್ದಾನ ನೀಡಿದರು.
ಪ್ರೊ.ರಾಜು ಆಲಗೂರ ಅವರು ವಿಜಯಪುರದ ಸರ್ವಾಂಗೀಣ ಅಭಿವೃದ್ಧಿಗೆ ವಿಜನ್ ಹೊಂದಿದ್ದು, ಈಗಾಗಲೇ 10 ಅಂಶಗಳ ಪ್ರಣಾಳಿಕೆ ಪ್ರಕಟಿಸಿದ್ದಾರೆ. ಸರಳ, ಸಜ್ಜನ ರಾಜಕಾರಣಿಯಾಗಿರುವ ಅವರಿಗೆ ಮತ ಹಾಕಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಸಂಗನಗೌಡ ಪಾಟೀಲ ಚಿಕ್ಕಗಲಗಲಿ, ಕಾಂಗ್ರೆಸ್ ಮುಖಂಡರಾದ ಬಸನಗೌಡ ಪಾಟೀಲ ಹೊಸೂರ, ಎಸ್.ಎಂ.ಸೊನ್ನದ, ಎಂ.ಕೆ.ಶಿವಣ್ಣವರ, ಸಂಜು ಕಂಬಾಗಿ ಮಾತನಾಡಿ, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಅವರನ್ನು ಗೆಲ್ಲಿಸೋಣ. ಸಚಿವ ಎಂ.ಬಿ.ಪಾಟೀಲ ಅವರ ಕೈ ಬಲಪಡಿಸೋಣ ಎಂದರು.
ಈ ಸಂದರ್ಭದಲ್ಲಿ ಎಲ್.ಎಸ್.ನಿಡೋಣಿ, ಲಕ್ಷ್ಮಣ ಚಿಗದಾನಿ, ಪಾಂಡುಗೌಡ ಬಿರಾದಾರ, ವಿ.ಎಚ್.ಪಾಟೀಲ, ರಮೇಶ ಯರಗಟ್ಟಿ, ಸಂಜುಗೌಡ ಪಾಟೀಲ, ಎಂ.ಬಿ.ಮದರಖಂಡಿ, ಕೆ.ಎಂ.ಮಠಪತಿ, ರಂಗನಗೌಡ ಬಿರಾದಾರ, ಅಪ್ಪಾಸಾಹೇಬಗೌಡ ಪಾಟೀಲ, ಮಲ್ಲಿಕಾರ್ಜುನ ಅಂಗಡಿ, ಮಾಳಿಂಗರಾಯ ಮಹಾರಾಜರು ಮುಂತಾದವರು ಉಪಸ್ಥಿತರಿದ್ದರು.