ಕನ್ನಡಪ್ರಭ ವಾರ್ತೆ ಕಾಗವಾಡ ರಾಜ್ಯ ಸರ್ಕಾರ ನಮ್ಮ ಪ್ರಮುಖ ಮೂರು ಬೇಡಿಕೆಗಳಾದ 7 ನೇ ವೇತನ ಅಯೋಗ, ಹಳೆ ಪಿಂಚಣಿ ಯೋಜನೆ ಮರು ಜಾರಿ ಹಾಗೂ ಅನಾರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನ ಮಾಡಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಗೌಡಪ್ಪ ಸಡ್ಡಿ ಆಗ್ರಹಿಸಿದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕಾಗವಾಡ ಘಟಕದ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಕ್ಕೆ ಕಾಗವಾಡ ಶಾಸಕ ರಾಜು ಕಾಗೆ ಮೂಲಕ ಸೋಮವಾರ ಉಗಾರದಲ್ಲಿ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು, ಕರ್ನಾಟಕದಲ್ಲಿ 6 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರಿದ್ದು, ಅವರನ್ನು ಪ್ರತಿನಿಧಿಸುವ ಏಕೈಕ ಬೃಹತ್ ಸಂಘಟನೆ ನಮ್ಮದು. ಕೂಡಲೇ ರಾಜ್ಯ ಸರಕಾರ ನಮ್ಮ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಈಡೇರಿಸಬೇಕು ಎಂದು ಒತ್ತಾಯಿಸಿದರು.
ತಹಸೀಲ್ದಾರ ರಾಜೇಶ ಬುಲಿ ಮಾತನಾಡಿ, ಕಾಗವಾಡ ಹಾಗೂ ಅಥಣಿ ಶಾಸಕದ್ವಯರು ಪ್ರಭಾವಿ ಶಾಸಕರುಗಳಾಗಿದ್ದೀರಿ. ನೀವು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿದರೆ ಸಾಕು. ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳು ಖಂಡಿತವಾಗಿ ಈಡೇರುತ್ತವೆ. ಅದಕ್ಕಾಗಿ ನಮ್ಮ ಮನವಿ ಸ್ವೀಕರಿಸಿ ನೌಕರರ ಬೇಡಿಕೆಗಳನ್ನು ಈಡೇರಿಸುಂತೆ ಒತ್ತಾಯಿಸಿದರು. ಮನವಿ ಸ್ವೀಕರಸಿ ಮಾತನಾಡಿದ ಶಾಸಕ ಕಾಗೆ, ನಿಮ್ಮ ಬೇಡಿಕೆಗಳು ಸೂಕ್ತವಾಗಿವೆ. ಅವು ಹಾಗೆ ಉಳಿದಿವೆ, ಒಬ್ಬ ನೌಕರನ ಮೇಲೆ ಇಡೀ ಕುಟುಂಬ ಅವಲಂಬಿತವಾಗಿರುತ್ತದೆ. ಆತನ ನಿವೃತ್ತಿ ನಂತರ ಆತನ ಕುಟುಂಬ ನಿರ್ವಹಿಸಲು ಸರ್ಕಾರ ಪಿಂಚಣಿ ನೀಡುವುದು ಅತ್ಯವಶ್ಯಕವಾಗದೆ. ಅನೇಕ ರಾಜ್ಯಗಳಲ್ಲಿ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಿವೆ. ನೌಕರರಿಗೆ ಮತ್ತು ಅವರ ಅವಲಂಬಿತರಿಗೆ ನಗದು ರಹಿತ ಆರೋಗ್ಯ ಚಿಕಿತ್ಸೆ ನೀಡುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನುಜಾರಿಗೊಳಿಸುವುದು ಅತ್ಯಂತ ಸೂಕ್ತವಾಗಿದೆ. ನಾನು ಫೆಬ್ರುವರಿಯಲ್ಲಿ ನಡೆಯಲಿರುವ ಬಜಟ್ ಅಧಿವೇಶನದಲ್ಲಿ ನಿಮ್ಮ ಸಮಸ್ಯೆ ಕುರಿತು ಮುಖ್ಯಮಂತ್ರಿಗಳ ಹಾಗೂ ಸರ್ಕಾರದ ಗಮನ ಸೆಳೆದು ನಿಮಗೆ ನ್ಯಾಯ ಕೊಡಿಸುವ ಪ್ರಯತ್ನ ಮಾಡುವೆ ಎಂದು ಭರವಸೆ ನೀಡಿದರು. ಈ ವೇಳೆ ತಾಲೂಕು ಪಂಚಾಯತ್ ಇಓ ಪ್ರವೀಣ ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್. ಮುಂಜೆ, ಸಿಡಿಪಿಒ ಸಂಜೀವ ಕುಮಾರ ಸದಲಗಿ, ಕೆ.ಕೆ,ಕುಲಕರ್ಣಿ, ಗೌತಮ್ ಶಿರಗಾಂವೆ, ಮೃತ್ಯುಂಜಯ ಹವಳೆಗೊಳ, ಚೇತನ ದೇವಮೂರೆ, ಸಂಜಯ ಕೋಲಿ, ಎ.ಬಿ.ಗಣೇಶವಾಡಿ, ಡಿ.ಕೆ.ಗುತ್ತೆ, ರಾಮ ಪಾಟೀಲ, ಎಂ.ಕೆ.ಸಂಕಪಾಳ, ಎಂ.ಜೆ.ಮಾಲಗಾಂವೆ,ಬಿ.ಎಸ್.ಹೂವಣ್ಣವರ, ಎಸ್.ಬಿ.ಕೊಳೇಕರ, ಅಮಸಿದ್ದ ತೆವರಟ್ಟಿ, ಸೇರಿದಂತೆ ನೂರಾರು ನೌಕರರು ಇದ್ದರು. ಕೋಟ್:ಫೆಬ್ರವರಿಯಲ್ಲಿ ನಡೆಯಲಿರುವ ಬಜಟ್ ಅಧಿವೇಶಕ್ಕೆ ನಿಮ್ಮ ಕೆಲವು ಪ್ರಮುಖರು ನನ್ನ ಜೊತೆ ಬನ್ನಿ. ನಿಮ್ಮ ಖರ್ಚು ವೆಚ್ಚಗಳನ್ನು ನಾನೇ ನೋಡಿಕೊಂಡು ನಾನು, ಲಕ್ಷ್ಮಣ ಸವದಿ ಹಾಗೂ ಪ್ರಕಾಶ ಹುಕ್ಕೇರಿ ಸೇರಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸಿ, ನಿಮಗೆ ನ್ಯಾಯ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.ರಾಜು ಕಾಗೆ. ಶಾಸಕ