ಸಾರ್ವಜನಿಕ ಹಿತಾಸಕ್ತಿ ಕಡೆಗಣಿಸಿರುವ ರಾಜ್ಯ ಸರ್ಕಾರ: ಭೋಜರಾಜ

KannadaprabhaNewsNetwork |  
Published : May 31, 2025, 01:54 AM IST
ಫೋಟೋ : ಭೋಜರಾಜ ಕರೂದಿ. | Kannada Prabha

ಸಾರಾಂಶ

ಎರಡು ವರ್ಷಗಳಿಂದ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ವಿದ್ಯುತ್ ಗ್ರಾಹಕರು, ಅದರಲ್ಲೂ ಕೃಷಿ ಪಂಪ್‌ಸೆಟ್ ಬಳಕೆದಾರರು ವಿದ್ಯುತ್ ವ್ಯತ್ಯಯದಿಂದಾಗಿ ನಿತ್ಯ ರೋಧಿಸುವಂತಾಗಿದೆ.

ಹಾನಗಲ್ಲ: ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳ ಗೃಹಜ್ಯೋತಿ ಕೇವಲ ತೋರಿಕೆಗೆ ಮಾತ್ರದ ಯೋಜನೆಯಾಗಿದ್ದು, ವಿದ್ಯುತ್ ಅನಿಶ್ಚಿತತೆಯನ್ನು ಹುಟ್ಟುಹಾಕಿದೆ ಎಂದು ಬಿಜೆಪಿ ರಾಜ್ಯ ಪ್ರಕೋಷ್ಟಗಳ ಸಹ ಸಂಯೋಜಕ ಭೋಜರಾಜ ಕರೂದಿ ಕಿಡಿಕಾರಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎರಡು ವರ್ಷಗಳಿಂದ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ವಿದ್ಯುತ್ ಗ್ರಾಹಕರು, ಅದರಲ್ಲೂ ಕೃಷಿ ಪಂಪ್‌ಸೆಟ್ ಬಳಕೆದಾರರು ವಿದ್ಯುತ್ ವ್ಯತ್ಯಯದಿಂದಾಗಿ ನಿತ್ಯ ರೋಧಿಸುವಂತಾಗಿದೆ. ಕೆಪಿಟಿಸಿಎಲ್ ಅವ್ಯವಸ್ಥೆ ನುಂಗಲಾರದ ತುತ್ತಾಗಿದೆ. ದಿನಕ್ಕೆ ಹತ್ತಾರು ಬಾರಿ ವಿದ್ಯುತ್ ವ್ಯತ್ಯಯವಾಗುತ್ತಿರುವುದಲ್ಲದೆ, ವೋಲ್ಟೇಜ್ ಸಮಸ್ಯೆ, ಒಂದು ಚಿಕ್ಕ ಗಾಳಿ ಮಳೆ ಬಂದರೂ ತಕ್ಷಣ ವಿದ್ಯುತ್ ಕಡಿತಗೊಳಿಸುವ ಹೆಸ್ಕಾಂನ ನಡೆ ಸಾರ್ವಜನಿಕರನ್ನು ಚಿಂತೆಗೀಡು ಮಾಡಿದೆ ಎಂದರು. ತಾಲೂಕಿನಲ್ಲಿ ವಿದ್ಯುತ್ ನಿರ್ವಹಣೆಗೆ 5 ಸಹಾಯಕ ಎಂಜಿನಿಯರ್ ಬೇಕು. ಆದರೆ ಇರುವವರು ಕೇವಲ ಒಬ್ಬರು, 3 ಜನ ಕಿರಿಯ ಎಂಜಿನಿಯರ್ ಬೇಕು. ಇರುವವರು ಒಬ್ಬರು ಮಾತ್ರ. 27 ಕಚೇರಿ ಸಿಬ್ಬಂದಿ ಬೇಕು. ಇರುವವರು ಕೇವಲ 14 ಜನ. 162 ಲೈನ್‌ಮನ್‌ಗಳು ಬೇಕು. ಇರುವವರು ಕೇವಲ 48. ಪಟ್ಟಣಕ್ಕೆ 15 ಲೈನ್‌ಮನ್‌ಗಳು ಬೇಕು. ಇರುವವರು ಕೇವಲ ಇಬ್ಬರು. 250ಕ್ಕೂ ಅಧಿಕ ಸಿಬ್ಬಂದಿ ಬೇಕಾಗಿದೆಯಾದರೂ ಇರುವವರು ಕೇವಲ 97. ಇಂತಹ ಅವ್ಯವಸ್ಥೆ ಹುಟ್ಟು ಹಾಕಿದ ರಾಜ್ಯ ಸರ್ಕಾರ ವಿದ್ಯುತ್ ಗ್ರಾಹಕರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಪ್ರವೀಣ ಚಿಕ್ಕಣ್ಣನವರ ಇದ್ದರು.ಹಿರೇಕೆರೂರಿನ ಸಾರ್ವಜನಿಕ ಆಸ್ಪತ್ರೆ ಬಳಿ ಪ್ರತಿಭಟನೆ

ಹಿರೇಕೆರೂರು: ಜನೌಷಧಿ ಕೇಂದ್ರಗಳನ್ನು ನಿರ್ಧಾರ ಖಂಡಿಸಿ ಹಿರೇಕೆರೂರು ಬಿಜೆಪಿ ಮಂಡಲದ ಕಾರ್ಯಕರ್ತರು ಕೈಗೆ ಕಪ್ಪು ಪಟ್ಟಿ ಧರಿಸಿಕೊಂಡು ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷ ಶಿವಕುಮಾರ್ ತಿಪ್ಪ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಬಸಮ್ಮ ಅಬಲೂರ್, ಮುಖಂಡರಾದ ಜಿ.ಪಿ. ಪ್ರಕಾಶ್ ಮಾತನಾಡಿದರು. ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ದುರ್ಗೇಶ್ ತಿರ್ಕಪ್ಪನವರ್, ಮಂಡಲ ಪ್ರಧಾನ ಕಾರ್ಯದರ್ಶಿ ಲಿಂಗಾಚಾರ್ ಮಾಯಾಚಾರ್, ಪಟ್ಟಣ ಪಂಚಾಯಿತಿ ಸದಸ್ಯರಾದ ರಮೇಶ್ ತೋರಣಗಟ್ಟಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಸಂಜೀವ್ ಹಕ್ಕಳ್ಳಿ, ಮಂಡಲ ಯುವ ಮೋರ್ಚಾ ಅಧ್ಯಕ್ಷ ಜಗದೀಶ್ ದೊಡ್ಡಗೌಡ್ರು ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ