ರಾಜ್ಯ ಸರ್ಕಾರ ರೈತರ ಪರ ಕೆಲಸ ಮಾಡುತ್ತಿಲ್ಲ

KannadaprabhaNewsNetwork |  
Published : Aug 04, 2025, 11:45 PM IST
ಕ್ಯಾಪ್ಶನ್ | Kannada Prabha

ಸಾರಾಂಶ

ರಾಜ್ಯ ಕಾಂಗ್ರೆಸ್ ಸರ್ಕಾರದ ಸಾರ್ವಜನಿಕರು, ರೈತರ ಪರ ಕೆಲಸ ಮಾಡದೆ, ದಲ್ಲಾಳಿಗಳು, ವ್ಯಾಪಾರಿಗಳ ಪರ ಕೆಲಸ ಮಾಡುತ್ತಿದ್ದು, ಸಂಪೂರ್ಣವಾಗಿ ರೈತರ ಹಿತ ಕಡೆಗಣಿಸಿದೆ ಎಂದು ಜೆಡಿಎಸ್‌ ಜಿಲ್ಲಾಧ್ಯಕ್ಷ ಆರ್.ಸಿ.ಆಂಜನಪ್ಪ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರು

ರಾಜ್ಯ ಕಾಂಗ್ರೆಸ್ ಸರ್ಕಾರದ ಸಾರ್ವಜನಿಕರು, ರೈತರ ಪರ ಕೆಲಸ ಮಾಡದೆ, ದಲ್ಲಾಳಿಗಳು, ವ್ಯಾಪಾರಿಗಳ ಪರ ಕೆಲಸ ಮಾಡುತ್ತಿದ್ದು, ಸಂಪೂರ್ಣವಾಗಿ ರೈತರ ಹಿತ ಕಡೆಗಣಿಸಿದೆ ಎಂದು ಜೆಡಿಎಸ್‌ ಜಿಲ್ಲಾಧ್ಯಕ್ಷ ಆರ್.ಸಿ.ಆಂಜನಪ್ಪ ಆರೋಪಿಸಿದ್ದಾರೆ.

ಜೆಡಿಎಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಸರಕಾರದ ವಿರುದ್ಧ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ ರಾಜ್ಯ ಸರಕಾರ ರೈತರಿಗೆ ಸ್ಪಂದಿಸುತ್ತಿಲ್ಲ. ಹಾವಮಾನ ಇಲಾಖೆಯ ಮುನ್ಸೂಚನೆ ಇದ್ದರೂ ರಸಗೊಬ್ಬರ, ಬಿತ್ತನೆ ಬೀಜಗಳಿಗೆ ಸಮರ್ಪಕ ವಿತರಣೆಗೆ ಪೂರ್ವ ತಯಾರಿ ಮಾಡಿಕೊಳ್ಳದೆ, ರೈತರು ಪರದಾಡುವಂತೆ ಮಾಡಿದ್ದಾರೆ. ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಕೃಷಿ ಸಚಿವರು ಸಂಪೂರ್ಣ ವಿಫಲರಾಗಿದ್ದು, ಕೂಡಲೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು. ಕಳೆದ 2 ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ಲಂಚಗುಳಿತನ, ದುರಾಡಳಿತ, ಆಡಳಿತ ವೈಫಲ್ಯತೆಯಿಂದ ಜನರ ಆಕ್ರೋಶಕ್ಕೆ ತುತ್ತಾಗಿದೆ. ಉತ್ತಮ ಮಳೆಯಾಗಿ ರೈತರು ಕೃಷಿ ಚಟುಟವಟಿಕೆ ಆರಂಭಿಸುತ್ತಿರುವ ಸಂದರ್ಭದಲ್ಲಿ ಅವರಿಗೆ ಸರಕಾರ ರಸಗೊಬ್ಬರ, ಬಿತ್ತನೆ ಬೀಜ ಪೂರೈಸುವಲ್ಲಿ ವಿಫಲವಾಗಿದೆ ಎಂದರು.ಮುಂಜಾಗೃತವಾಗಿ ರಸಗೊಬ್ಬರನ್ನು ದಾಸ್ತಾನು ಮಾಡದೆ ನಿರ್ಲಕ್ಷ ಮಾಡಿದ ಪರಿಣಾಮ ಇಂದು ರೈತರು ಗೊಬ್ಬರ ಸಿಗದೆ ಪರಿತಪಿಸುವಂತಾಗಿದೆ. ಅಲ್ಲದೆ, ಮಳೆ ಹಾಗೂ ನೆರೆ ಹಾವಳಿಯಿಂದ ಫಸಲು ನಷ್ಟವಾದ ಹಾಗೂ ಮಳೆ ಅಭಾವದ ಕಡೆ ಬೆಳೆ ಹಾನಿಗೊಳಗಾದ ರೈತರಿಗೆ ಪರಿಹಾರ, ವಿಮಾ ಹಣವನ್ನು ತಲುಪಿಸುವಲ್ಲಿ ಸರಕಾರ ವಿಫಲವಾಗಿದೆ. ಇಂತಹ ಹೊಣೆಗೇಡಿ ಸರಕಾರಕ್ಕೆ ಜನರೇ ಮುಂದಿನ ದಿನಗಳಲ್ಲಿ ಪಾಠ ಕಲಿಸಲಿದ್ದಾರೆ ಎಂದು ನುಡಿದರು.ಕುಣಿಗಲ್ ಮುಖಂಡ ಜಗದೀಶ್ ನಾಗರಾಜಯ್ಯ ಮಾತನಾಡಿ, ಎರಡೂ ವರ್ಷಗಳಿಂದ ರೈತರಿಗೆ ಅನ್ಯಾಯ ಮಾಡಿಕೊಂಡು ಬರಲಾಗುತ್ತಿದೆ. ರಾಜ್ಯದಲ್ಲಿ ಭಷ್ಟ ಸರಕಾರ ಅಧಿಕಾರದಲ್ಲಿದೆ. ಜನಸಾಮಾನ್ಯರ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ರೈತರು ರಸಗೊಬ್ಬರಕ್ಕಾಗಿ ಹೋರಾಟ ಮಾಡುತ್ತಿದ್ದರೂ ಸಮಸ್ಯೆ ಬಗೆಹರಿಸಬೇಕಾದ ಸರ್ಕಾರದ ನಾಯಕರು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಾ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರ ಸರಬರಾಜು ಮಾಡಿದ್ದ ರಸಗೊಬ್ಬರವನ್ನು ರೈತರಿಗೆ ಹಂಚಿಕೆ ಮಾಡದೆ ದಲ್ಲಾಳಿಗಳ ಮೂಲಕ ಕಾಳಸಂತೆಯಲ್ಲಿ ಮಾರಾಟ ಮಾಡಿದ್ದಾರೆ ಎಂದರು.ತಿಪಟೂರು ಮುಖಂಡ ಕೆ.ಟಿ.ಶಾಂತಕುಮಾರ್ ಮಾತನಾಡಿ, ಕೇಂದ್ರ ಸರಕಾರದ ಜೊತೆ ವ್ಯವಹರಿಸಿ ಅಗತ್ಯಗೊಬ್ಬರ ಪಡೆಯುವಲ್ಲಿ ವಿಫಲವಾಗಿರುವ ರಾಜ್ಯ ಸರಕಾರ, ಸಮಸ್ಯೆಗೆ ಪರಿಹಾರ ಕಂಡು ಕೊಂಡು ರೈತರಿಗೆ ಗೊಬ್ಬರ ನೀಡದೆ, ಕೇಂದ್ರದ ಮೇಲೆ ಆರೋಪ ಮಾಡುತ್ತಾ ಸಮಸ್ಯೆಯನ್ನು ಮತ್ತಷ್ಟು ಜಟಿಲ ಮಾಡುತ್ತಿದೆ. ಇರುವ ಗೊಬ್ಬರವನ್ನು ಬ್ರೋಕರ್‌ಗಳ ಮೂಲಕ ಮಾರಾಟ ಮಾಡಿ ಹಣ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಆಡಳಿತಕ್ಕೆ ರೈತರು ರೋಸಿಹೋಗಿದ್ದಾರೆ. ಗ್ಯಾರಂಟಿ ಆಸೆ ತೋರಿಸಿ ಜನರಿಂದ ವೋಟು ಪಡೆದ ಕಾಂಗ್ರೆಸ್‌ನವರು ಅಧಿಕಾರಕ್ಕೆ ಬಂದ ನಂತರ ಜನರ ಹಿತ ಮರೆತಿದ್ದಾರೆ. ರೈತರನ್ನು ಕಡೆಗಣಿಸಿದ್ದಾರೆ. ಎಲ್ಲಾ ಕಡೆ ಭೃಷ್ಟಾಚಾರ ತುಂಬಿದೆ. ಸರಕಾರಿ ಕಚೇರಿಗಳಲ್ಲಿ ರೈತರ ಅಹವಾಲು ಕೇಳುವವರಿಲ್ಲ. ಜಿಲ್ಲಾಡಳಿತವೂ ಹದಗೆಟ್ಟಿದೆ. ಎಕ್ಸ್ ಪ್ರೆಸ್ ಕೆನಾಲ್ ವಿರುದ್ಧ ಹೋರಾಟಕ್ಕಿಳಿದ ರೈತರನ್ನು ಪೊಲೀಸರನ್ನು ಬಳಸಿ ಬೆದರಿಸಲಾಗಿದೆ. ಆದರೆ ಕಾಂಗ್ರೆಸ್‌ನ ಸಚಿವರಾಗಲಿ, ಶಾಸಕರಾಗಲಿ ರೈತರ ಪರ ನಿಲ್ಲಲಿಲ್ಲ ಎಂದು ಟೀಕಿಸಿದರು.ಈ ಸಂಬಂಧ ಮನವಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಅಧೀಕ್ಷಕರಿಗೆ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಮಾಜಿ ಶಾಸಕರಾದ ಕೆ.ಎಂ.ತಿಮ್ಮರಾಯಪ್ಪ, ಪಿ.ಆರ್.ಸುಧಾಕರಲಾಲ್, ಜಿಲ್ಲಾ ಜೆಡಿಎಸ್‌ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ನಗರ ಅಧ್ಯಕ್ಷ ವಿಜಯ್‌ಗೌಡ, ಯೋಗಾನಂದಕುಮಾರ್, ಟಿ.ಕೆ. ನರಸಿಂಹಮೂರ್ತಿ, ಧರಣೇಂದ್ರ ಕುಮಾರ್, ಹೆಚ್.ಡಿ.ಕೆ. ಮಂಜುನಾಥ್, ರಾಮಕೃಷ್ಣಪ್ಪ, ಮುಖಂಡರಾದ ಉಗ್ರೇಶ್, ಕಾಮರಾಜು, ಕೊಂಡವಾಡಿ ಚಂದ್ರಶೇಖರ್, ತಿಮ್ಮಾರೆಡ್ಡಿ, ಸೋಲಾರ್‌ ಕೃಷ್ಣಮೂರ್ತಿ, ಗಂಗಣ್ಣ, ಮೆಡಿಕಲ್ ಮಧು, ರೇಖಾರಾಜು, ಸೊಗಡು ವೆಂಕಟೇಶ್, ಚೆನ್ನಮಲ್ಲಯ್ಯ, ತಾಹೇರಾಕುಲ್ಸಂ, ಲೀಲಾವತಿ, ಲಕ್ಷ್ಮೀದೇವಮ್ಮಮತ್ತಿತರರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ಷೇತ್ರದ ಕೆಲಸವನ್ನು ತಲೆಮೇಲೆ ಹೊತ್ತು ಮಾಡುವೆ
ಜಾತಿ ವೈಷಮ್ಯಕ್ಕೆ ಅವಕಾಶವಿಲ್ಲ:ಡಾ. ತೌಫೀಕ್‌ ಪಾರ್ಥನಳ್ಳಿ