ಬೀದರ್: ಪುನೀತ ರಾಜಕುಮಾರ 50ನೇ ಜನ್ಮದಿನ ನಿಮಿತ್ತ ಕರ್ನಾಟಕ ಸಾಹಿತ್ಯ ಸಾಂಸ್ಕೃತಿಕ ಸಭಾಂಗಣದಲ್ಲಿ 17ರಂದು ಬೆಳಗ್ಗೆ 11.30ರವರೆಗೆ ಕರವೇ ಕಾವಲು ಪಡೆಯಿಂದ ಪುನೀತ್ ರಾಜಕುಮಾರ ಅವರ 50ನೇ ಜನ್ಮ ದಿನಾಚರಣೆ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ.
ಹವಾಮಲ್ಲಿನಾಥ ಸ್ವಾಮಿಜಿ ಸಾನಿಧ್ಯ ವಹಿಸಲಿದ್ದು, ನಗರ ಸಭೆ ಅಧ್ಯಕ್ಷ ಎಂಡಿ ಗೌಸ್ ಉದ್ಘಾಟಿಸುವರು. ಕರವೇ ಕಾವಲುಪಡೆ ರಾಜ್ಯಾಧ್ಯಕ್ಷ ಎಚ್ ಸುರೇಶ ಬೆಂಗಳೂರು ಅಧ್ಯಕ್ಷತೆ ವಹಿಸುವರು. ಸಚಿವ ಈಶ್ವರ ಖಂಡ್ರೆ, ಪೌರಾಡಳಿತ, ಹಜ್ ಸಚಿವರಾದ ರಹೀಂ ಖಾನ್ ಸಂಸದರಾದ ಸಾಗರ ಖಂಡ್ರೆ, ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ಅಮೃತರಾವ ಚಿಮಕೊಡೆ ಸೇರಿದಂತೆ ಇನ್ನಿತರರು ಭಾಗವಹಿಸುವರು.
ಇದೇ ಸಂದರ್ಭದಲ್ಲಿ 70 ಜನ ವಿವಿಧ ಸಾಧಕರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪುನೀತ ರಾಜಕುಮಾರ ಜೀವನ ಮತ್ತು ಸಾಮಾಜ ಸೇವೆ ಕುರಿತು ಸಾಹಿತಿ ಡಾ. ಸುಬ್ಬಣ್ಣ ಕರಕನಳ್ಳಿ ಉಪನ್ಯಾಸ ನೀಡುವರು ಎಂದು ತಿಳಿಸಿದ್ದಾರೆ.--
ಚಿತ್ರ 15ಬಿಡಿಆರ್59ಅವಿನಾಶ ಬುದೇರಾಕರ್