ಭಟ್ಕಳ: ತಾಲೂಕಿನ ಕಾಯ್ಕಿಣಿ ಬಸ್ತಿಯಲ್ಲಿ ವೆಂಕಟೇಶ್ವರ ಪತ್ತಿನ ಸಹಕಾರಿ ಸಂಘದ 2ನೇ ಶಾಖೆಯನ್ನು ಮಾಜಿ ಶಾಸಕ ಜೆ ಡಿ ನಾಯ್ಕ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, ಸಹಕಾರಿ ಸಂಘವಿರಲಿ, ಬ್ಯಾಂಕುಗಳಿರಲಿ ಠೇವಣಿದಾರರಿಗೆ ನೀಡಿದ ಗೌರವವನ್ನು ಸಾಲಗಾರರಿಗೂ ನೀಡುವಂತಾಗಬೇಕು. ಅಂದಾಗ ಮಾತ್ರ ಸಹಕಾರಿ ಸಂಘ, ಬ್ಯಾಂಕುಗಳು ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತದೆ. ಅದರಂತೆ ಸಹಕಾರಿ ಸಂಘ ಉತ್ತಮ ಅಭಿವೃದ್ಧಿ ಕಾಣಬೇಕಾದರೆ ಅಲ್ಲಿನ ಸಿಬ್ಬಂದಿ ಮತ್ತು ಆಡಳಿತ ಮಂಡಳಿಯವರ ಶಿಸ್ತುಬದ್ಧ ವ್ಯವಹಾರ, ಆಡಳಿತ ಮುಖ್ಯವಾಗಿರುತ್ತದೆ ಎಂದರು.
ಗ್ರಾಹಕರಿಗೆ ನಗುಮುಖದ ಉತ್ತಮ ಮತ್ತು ತ್ವರಿತ ಸೇವೆ ನೀಡಿದರೆ ಬ್ಯಾಂಕಿನ ಅಭಿವೃದ್ಧಿ ಸಹಕಾರ ನೀಡುತ್ತಾರೆ ಎಂದರು.ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಗೋವಿಂದ ನಾಯ್ಕ,ಕಳೆದ ಹತ್ತು ವರ್ಷಗಳ ಹಿಂದೆ ಆರಂಭಗೊಂಡ ನಮ್ಮ ಸಹಕಾರಿ ಸಂಘ ಎರಡು ಶಾಖೆ ತೆರೆದು ಉತ್ತಮ ವ್ಯವಹಾರ ಮಾಡುತ್ತಿದೆ. ಮುಂದಿನ ವರ್ಷದಲ್ಲಿ ಮುರುಡೇಶ್ವರದಲ್ಲೂ ಶಾಖೆ ತೆರೆಯಲು ನಿರ್ಧರಿಸಲಾಗಿದೆ. ಸಂಘದ ಬೆಳವಣಿಗೆಗೆ ಎಲ್ಲರ ಸಹಕಾರ ಅಗತ್ಯವೆಂದರು.
ಉಪಸ್ಥಿತರಿದ್ದ ಕಾಯ್ಕಿಣಿ ಸೊಸೈಟಿ ನಿವೃತ್ತ ಮುಖ್ಯಕಾರ್ಯನಿರ್ವಾಹಕ ಮೋಹನ ಶೆಟ್ಟಿ ಮಾತನಾಡಿದರು. ವೇದಿಕೆಯಲ್ಲಿ ಸಂಘದ ಭದ್ರತಾ ಕೊಠಡಿ ಉದ್ಘಾಟಿಸಿದ ಕಾಯ್ಕಿಣಿ ಗ್ರಾ.ಪಂ ಅಧ್ಯಕ್ಷ ರಾಜು ನಾಯ್ಕ, ಮಾವಳ್ಳಿ ನಾಮಧಾರಿ ಸಮಾಜದ ಉಪಾಧ್ಯಕ್ಷ ನಾಗೇಂದ್ರ ನಾಯ್ಕ, ನಾರಾಯಣ ಜಟ್ಟ ನಾಯ್ಕ, ಜಟ್ಗ ಮೊಗೇರ, ಸಂಘದ ನಿರ್ದೇಶಕ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ನಿರ್ದೇಶಕ ಶ್ರೀಧರ ನಾಯ್ಕ ಸ್ವಾಗತಿಸಿದರು. ಉಪಾದ್ಯಕ್ಷ ಎಸ್.ಎಂ. ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಮುಖ್ಯ ಕಾರ್ಯನಿರ್ವಾಹಕ ಮಂಜುನಾಥ ನಾಯ್ಕ ನಿರೂಪಿಸಿದರು. ಹಿರಿಯರಾದ ಕೆ.ಆರ್. ನಾಯ್ಕ ವಂದಿಸಿದರು.ಭಟ್ಕಳದ ಕಾಯ್ಕಿಣಿ ಬಸ್ತಿಯಲ್ಲಿ ವೆಂಕಟೇಶ್ವರ ಪತ್ತಿನ ಸಹಕಾರಿ ಸಂಘದ 2ನೇ ಶಾಖೆಯನ್ನು ಮಾಜಿ ಶಾಸಕ ಜೆ ಡಿ ನಾಯ್ಕ ಉದ್ಘಾಟಿಸಿದರು.