- ಲಕ್ಷಾಂತರ ರು.ಗಳ ಬಹುಮಾನ, ಸರಣಿ ಪುರುಷೋತ್ತಮರಿಗೆ ಬೈಕ್, ಸ್ಕೂಟರ್: ವಿನಾಯಕ
ಕನ್ನಡಪ್ರಭ ವಾರ್ತೆ ದಾವಣಗೆರೆ ಚನ್ನಗಿರಿ ತಾಲೂಕಿನ ದೊಡ್ಡಘಟ್ಟ ಗ್ರಾಮದಲ್ಲಿ 2027ರ ಫೆಬ್ರವರಿ 16 ರಿಂದ 21ರವರೆಗೆ ರಾಜ್ಯಮಟ್ಟದ ಹೊನಲು ಬೆಳಕಿನ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಅಸ್ತ್ರ ಕ್ರಿಕೆಟರ್ಸ್‌ನ ಬಿ.ಎನ್.ವಿನಾಯಕ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಹೊನಲು-ಬೆಳಕಿನ ಕ್ರಿಕೆಟ್ ಟೂರ್ನಿಯ ಆಯೋಜನೆ, ಗ್ರಾಮೀಣ ಮತ್ತು ನಗರ ವಿಭಾಗದ ತಂಡಗಳಿಗೆ ಲಕ್ಷಾಂತರ ರು. ಬಹುಮಾನ ವಿತರಣೆ, ಸರಣಿ ಪುರುಷೋತ್ತಮರಿಗೆ ಬೈಕ್, ಸ್ಕೂಟರ್ ನೀಡುತ್ತಿರುವುದು ಹೊಸ ಮೈಲಿಗಲ್ಲು ಎಂದರು.ದೊಡ್ಡಘಟ್ಟದ ಜೊತೆಗೆ ಕಬ್ಬಳ, ತ್ಯಾವಣಿಗೆ, ನವಿಲೇಹಾಳ್, ಅಕ್ಕಪಕ್ಕದ ಗ್ರಾಮಗಳ ಯುವಕರು, ಆಟಗಾರರ ಜೊತೆಗೆ ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಪ್ತೋತ್ಸಾಹ ನೀಡುವ ಉದ್ದೇಶದಿಂದ ವಿನೂತನವಾಗಿ ಕ್ರೀಡಾಹಬ್ಬ ಆಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಮುಕ್ತ ವಿಭಾಗದಲ್ಲಿ ರಾಜ್ಯ ಮತ್ತು ಅಂತಾರಾಜ್ಯದ 16 ಮೇಲ್ಪಟ್ಟ ತಂಡಗಳು ಭಾಗವಹಿಸಲಿವೆ. ಪ್ರಥಮ ಬಹುಮಾನವಾಗಿ ₹3 ಲಕ್ಷ ನಗದು, ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನವಾಗಿ ₹1.50 ಲಕ್ಷ, ಆಕರ್ಷಕ ಟ್ರೋಫಿ, ಸರಣಿ ಆಟಗಾರನಿಗೆ ಸ್ಕೂಟರ್ ಅಥವಾ ಇತರೆ ಆಕರ್ಷಕ ಬಹುಮಾನ ನೀಡಲಾಗುವುದು. ಯೂಟ್ಯೂಬ್ ಮೂಲಕ ಲೈವ್ ಸ್ಟ್ರೀಮಿಂಗ್ ಮೂಲಕ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
- - -