ನಾಳೆಯಿಂದ ರಾಜ್ಯ ಮಟ್ಟದ ಫುಟ್ಬಾಲ್ ಚಾಂಪಿಯನಶಿಪ್

KannadaprabhaNewsNetwork | Published : Apr 25, 2025 12:33 AM

ಸಾರಾಂಶ

ನಗರದ ನೆಹರು ಕ್ರೀಡಾಂಗಣದಲ್ಲಿ ಹಾರೂರಗೇರಿ ಬುದ್ಧ ಭೂಷಣ ಸ್ಪೋರ್ಟ್ಸ ಅಕಾಡೆಮಿಯಿಂದ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ 134ನೇ ಜಯಂತ್ಯುತ್ಸವದ ಪ್ರಯುಕ್ತ ಫುಟ್‌ಬಾಲ್‌ ಚಾಂಪಿಯನ್‌ಶಿಪ್ ರಾಜ್ಯ ಮಟ್ಟದ ಸ್ಪರ್ಧೆಯನ್ನು ಏ.26ರ ಬೆಳಿಗ್ಗೆ 7 ಗಂಟೆಯಿಂದ ಏ.28ರ ಸಾಯಂಕಾಲ 5 ಗಂಟೆಯವರೆಗೆ ಆಯೋಜಿಸಲಾಗಿದೆ ಎಂದು ನಿವೃತ್ತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ.ಎಂ ಜ್ಯೋತಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೀದರ್‌

ನಗರದ ನೆಹರು ಕ್ರೀಡಾಂಗಣದಲ್ಲಿ ಹಾರೂರಗೇರಿ ಬುದ್ಧ ಭೂಷಣ ಸ್ಪೋರ್ಟ್ಸ ಅಕಾಡೆಮಿಯಿಂದ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ 134ನೇ ಜಯಂತ್ಯುತ್ಸವದ ಪ್ರಯುಕ್ತ ಫುಟ್‌ಬಾಲ್‌ ಚಾಂಪಿಯನ್‌ಶಿಪ್ ರಾಜ್ಯ ಮಟ್ಟದ ಸ್ಪರ್ಧೆಯನ್ನು ಏ.26ರ ಬೆಳಿಗ್ಗೆ 7 ಗಂಟೆಯಿಂದ ಏ.28ರ ಸಾಯಂಕಾಲ 5 ಗಂಟೆಯವರೆಗೆ ಆಯೋಜಿಸಲಾಗಿದೆ ಎಂದು ನಿವೃತ್ತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ.ಎಂ ಜ್ಯೋತಿ ತಿಳಿಸಿದರು.ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವಜನರಲ್ಲಿ ಕುಗ್ಗಿರುವ ದೈಹಿಕ ಸಾಮರ್ಥ್ಯ ಬಲಪಡಿಸಲು ಹಾಗೂ ಬೀದರ್‌ನಲ್ಲಿ ಫುಟ್‌ಬಾಲ್ ಕ್ರೀಡೆಯನ್ನು ಹೆಚ್ಚಿನ ರೀತಿಯಲ್ಲಿ ಪ್ರಚಾರಪಡಿಸಲು ಈ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ. ಮೂರು ದಿನಗಳ ಕಾಲ ನಡೆಯಲಿರುವ ಈ ಪಂದ್ಯಾವಳಿಯಲ್ಲಿ ಧಾರವಾಡ ಹಾಗೂ ಕಲಬುರ್ಗಿಯಿಂದ ನಾಲ್ಕು, ಹೈದರಾಬಾದ್‌ನಿಂದ ನಾಲ್ಕು ತಂಡಗಳು, ಬೀದರ್‌ನಿಂದ ಎರಡು ತಂಡಗಳು, ಪಕ್ಕದ ಮಹಾರಾಷ್ಟ್ರದ ಪರಭಣಿಯಿಂದ ಒಂದು ತಂಡ ಬರುವ ನಿರೀಕ್ಷೆಯಿದ್ದು ಈಗಾಗಲೇ 10 ತಂಡಗಳು ನೊಂದಣಿ ಮಾಡಿಕೊಂಡಿವೆ ಎಂದರು. ಈ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸುವ ತಂಡಕ್ಕೆ ₹25,000, ಟ್ರೋಫಿ, ಪದಕ ಹಾಗೂ ಪ್ರಶಸ್ತಿ ಫಲಕ, ದ್ವಿತೀಯ ಬಹುಮಾನ.15 ಸಾವಿರ ರು, ಮ್ಯಾನ್ ಆಫ್ ದಿ ಮ್ಯಾಚ್, ಬೆಸ್ಟ್ ಗೋಲ್ಡ್ ಕೀಪರ್, ಬೆಡ್ಸ್ ಸ್ಕೋರರ್ ಇತ್ಯಾದಿ ವೈಯಕ್ತಿಕ ಸ್ಪರ್ಧಾಳುಗಳಿಗೂ ಪದಕ, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುತ್ತಿದೆ ಎಂದರು.ಕ್ರೀಡಾಕೂಟದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ಉದ್ಘಾಟಿಸುವರು. ಸಚಿವ ರಹೀಂ ಖಾನ್, ವಿಶೇಷ ಆಹ್ವಾನಿತರಾಗಿ ಜಿ.ಪಂ ಮಾಜಿ ಅಧ್ಯಕ್ಷ ಶಿವರಾಜ ಹಾಸನಕರ್ ಉಪಸ್ಥಿತರಿರುವರು. ಕ್ರೀಡಾಸ್ತಕರು, ಸಮಾಜದ ಬುದ್ದಿಜೀವಿಗಳು, ಚಿಂತಕರು, ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕ್ರೀಡಾ ಪಟುಗಳಿಗೆ ಹುರಿದುಂಬಿಸಿ ಕ್ರಾರ್ಯಕ್ರಮ ಯಶಸ್ವಿಗೊಳಿಸಬೇಕೆಂದರು.

ಮಾರುತಿ ಬೌದ್ದೆ, ಅನಿಲಕುಮಾರ ಬೆಲ್ದಾರ್, ರಮೇಶ ಡಾಕುಳಗಿ ಮಾತನಾಡಿದರು. ರಾಷ್ಟ್ರ ಮಟ್ಟದ ಫುಟ್ಬಾಲ್ ಕ್ರೀಡಾಪಟು ವಸಂತ, ರಾಜ್ಯ ಮಟ್ಟದ ಫುಟ್ಬಾಲ್ ಕ್ರೀಡಾಪಟು ಶಾಮುವೆಲ್, ಮೌಲಪ್ಪ ಮಾಳಗೆ, ತಮ್ಮಣ್ಣ ಇದ್ದರು.

Share this article