ಕನ್ನಡಪ್ರಭ ವಾರ್ತೆ ಮೈಸೂರುಎಲ್ಲಾ ದ್ರಾವಿಡ ಭಾಷೆಗಳು ಸಹೋದರರು., ಯಾರೂ ಪೋಷಕರಲ್ಲ ಎಂದು ವೈದ್ಯ ಸಾಹಿತಿ ಡಾ.ಸಿ. ಶರತ್ ಕುಮಾರ್ ಹೇಳಿದರು.ಬಾಗಲಕೋಟೆಯ ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವಿಜಯನಗರ ಕನ್ನಡ ಸಾಹಿತ್ಯ ಭವನ ಡಾ.ಎಚ್.ಎಸ್. ವೆಂಕಟೇಶಮೂರ್ತಿ ಮುಖ್ಯ ವೇದಿಕೆಯಲ್ಲಿ ಬಾನುವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ಮೇಘಮೈತ್ರಿ 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಅವರು ಮಾತನಾಡಿ, ಸಂಸ್ಕೃತದ ಪ್ರಭಾವ: ಕನ್ನಡವು ದ್ರಾವಿಡ ಭಾಷೆಯಾಗಿದ್ದರೂ, ಸಂಸ್ಕೃತ ಮತ್ತು ಇತರ ಭಾರತೀಯ ಭಾಷೆಗಳಿಂದಲೂ ಪ್ರಭಾವಿತವಾಗಿದೆ. ಎಲ್ಲಾ ದ್ರಾವಿಡ ಭಾಷೆಗಳನ್ನು ಸಹೋದರರಂತೆ ಪರಿಗಣಿಸಬಹುದು. ಯಾವ ಭಾಷೆಯೂ ಇನ್ನೊಬ್ಬರಿಂದ ಜನಿಸಿಲ್ಲ ಎಂದು ನಟ ಕಮಲ್ ಹಾಸನ್ ಅವರ ಇತ್ತೀಚಿನ ಹೇಳಿಕೆಗೆ ತಿರುಗೇಟು ನೀಡಿದರು.ಕನ್ನಡವು ದಕ್ಷಿಣ ದ್ರಾವಿಡ ಶಾಖೆಯ ಭಾಗವಾಗಿದ್ದರೂ, ಅದು ಕುಟುಂಬದೊಳಗೆ ತನ್ನದೇ ಆದ ವಿಶಿಷ್ಟ ಇತಿಹಾಸ ಮತ್ತು ಅಭಿವೃದ್ಧಿಯನ್ನು ಹೊಂದಿದೆ. ತಮಿಳು ಸಾಹಿತ್ಯದ ಉಳಿದಿರುವ ಸಂಗ್ರಹವು ಅದರ ಕನ್ನಡ ಪ್ರತಿರೂಪಕ್ಕಿಂತ ಹಳೆಯದಾಗಿರಬಹುದು, ಆದಾಗ್ಯೂ ಇದರ ಅರ್ಥ ತಮಿಳು ಕನ್ನಡಕ್ಕಿಂತ ಹಳೆಯ ಭಾಷೆ ಎಂದು ಅರ್ಥವಲ್ಲ ಎಂದರು.ದ್ರಾವಿಡ ಭಾಷೆಯಾದ ಕನ್ನಡವು ದೀರ್ಘ ಮತ್ತು ಶ್ರೀಮಂತ ಇತಿಹಾಸವನ್ನು ಹೊಂದಿದೆ.ಇದು ಕ್ರಿ.ಪೂ 3 ನೇ ಶತಮಾನದಷ್ಟು ಹಿಂದೆಯೇ ಮಾತನಾಡಲ್ಪಟ್ಟಿತು ಎಂಬುದಕ್ಕೆ ಪುರಾವೆಗಳಿವೆ. ಕನ್ನಡವು ಒಂದು ವಿಶಿಷ್ಟ ಲಿಪಿ ಮತ್ತು ಶಬ್ದಕೋಶವನ್ನು ಹೊಂದಿದೆ. ಇದು ಸಂಸ್ಕೃತದಿಂದ ಪ್ರಭಾವಿತವಾಗಿದ್ದರೂ, ವಿಶೇಷವಾಗಿ ತಾಂತ್ರಿಕ ಮತ್ತು ತಾತ್ವಿಕ ಪರಿಭಾಷೆಯಲ್ಲಿ, ಇದು ಒಂದು ವಿಶಿಷ್ಟ ದ್ರಾವಿಡ ಭಾಷೆಯಾಗಿ ಉಳಿದಿದೆ ಎಂದು ಅವರು ಹೇಳಿದರು.
ಸಮ್ಮೇಳನವನ್ನು ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ. ಮಾತನಾಡಿ, ಕನ್ನಡ, ಕನ್ನಡನಾಡನ್ನು ಮತ್ತಷ್ಟು ಸರ್ವಶಕ್ತವಾಗಿ ಬೆಳೆಸಲು ಎಲ್ಲರೂ ಪಣತೊಡೋಣ ಎಂದು ಕರೆ ನೀಡಿದರು.ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ವಿದ್ವಾಂಸ, ಡಾ. ಗುರುಪಾದ ಮರಿಗುದ್ದಿ ಅವರು ಹಡವನಹಳ್ಳಿ ವೀರಣ್ಣಗೌಡರ ''''''''ಉರಿವ ದೀಪದ ಕೆಳಗೆ'''''''' ಕಥಾ ಸಂಕಲನ ಬಿಡುಗಡೆ ಮಾಡಿದರು. ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ ದ್ವಜಾರೋಹಣ ನೆರವೇರಿಸಿದರು. ಕನ್ನಡ ಹೋರಾಟಗಾರ ಕುರುಬಾರಹಳ್ಳಿ ಧನಪಾಲ್ ಮೆರವಣಿಗೆಗೆ ಚಾಲನೆ ನೀಡಿದರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಪುಸ್ತಕ ಪ್ರದರ್ಶನ ಉದ್ಘಾಟಿಸಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ. ವಿಜಯಕುಮಾರ ಎಸ್. ಕಟಗಿಹಳ್ಳಿಮಠ ನೂತನ ಅಧ್ಯಕ್ಷ ಡಾ.ಸಿ. ಶರತ್‌ಕುಮಾರ್ ಅವರಿಗೆ ಕನ್ನಡ ಧ್ವಜ ಹಸ್ತಾಂತರಿಸಿದರು. ಸಮಾಜ ಸೇವೆಕಿ ಡಾ.ಶಕುಂತಲಾ ಜಯದೇವ್ ಮುಖ್ಯ ಅತಿಥಿಯಾಗಿದ್ದರು.ಮಂಜುಳಾ ಪ್ರಾರ್ಥಿಸಿದರು. ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಎಂ. ರಮೇಶ್ ಕಮತಗಿ ಪ್ರಾಸ್ತಾವಿಕ ಭಾಷಣ ಮಾಡಿದರು. ಸಾಹಿತಿ ಟಿ. ಸತೀಶ್ ಜವರೇಗೌಡ ಆಶಯ ಭಾಷಣ ಮಾಡಿದರು. ಸಾಹಿತಿ ಎಂ.ವಿ. ಷಡಕ್ಷರಿ ಕಾರ್ಯಕ್ರಮ ನಿರೂಪಿಸಿದರು. ಯುವ ಕವಿ ಗುರು ಗೌತಮ್ ವಂದಿಸಿದರು.ಮಲ್ಲಿಕಾರ್ಜುನ ಶೆಲ್ಲಿಕೇರ, ಶಂಕರ ಬೈಚನಾಳ, ಲಕ್ಷ್ಮಣ ಬದಾಮಿ ಅವರಿಗೆ ದತ್ತಿ ಪ್ರಶಸ್ತಿ, ನಾ. ಗಂಗಾಧರಪ್ಪ, ಪಿ. ನೀತು ನಿನಾದ್, ಎಂಎಸ್‌ಎಸ್ ಶಿವಮೂರ್ತಿ, ಮಂಜುಳಾ, ಜಯಂತಿ, ಹೇಮಾ ಅಂಬರೀಶ್, ಇಂದಿರಾ ಸಾತನೂರ, ವಿನೋದ ಕುಮಾರಿ, ಎಂ.ಜೆ. ರೋಹಿಣಿ, ವನಜಾ ದಾಸರಹಳ್ಳಿ, ಶಿವಮ್ಮ ದಾಸರಹಳ್ಳಿ, ಸಿ. ಜಗದೀಶ್,. ಆರ್.ಎಚ್. ರವಿಕುಮಾರ್, ಎಂ. ನಿಲೋಎಜಿ, ಶ್ರೀನಾಥ್ ಅಜಾದ್, ವಿ. ವನಿತಾ, ಸಂಜೀವಪ್ಪ, ಎಸ್. ಚಲಪತಿಗೌಡ, ಎನ್. ಮುತ್ತಣಣ, ಎಂ.ಜಿ. ನಾಗರಾಜ್. ಎಸ್. ರಾಘಶ್ರೀ, ಎನ್. ಹೇಮಾ, ಪಿ. ಸೌಜನ್ಯಾ, ವಿ. ತಿಮ್ಮರಾಯಪ್ಪ ಅವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಸದ್ಭಾವನಾ ಪ್ರಶಸ್ತಿ ಪ್ರದಾನ ಮಾಡಲಾಯಿತು.ನಂತರ ವಿಚಾರಗೋಷ್ಠಿ, ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.-- ಬಾಕ್ಸ್-- --- ಸುಮಾರು 4,500 ವರ್ಷಗಳ ಹಿಂದೆ ಹುಟ್ಟಿಕೊಂಡಿದೆ.--ಕನ್ನಡ ಸೇರಿದಂತೆ ದ್ರಾವಿಡ ಭಾಷಾ ಕುಟುಂಬವು ಭಾರತೀಯ ಉಪಖಂಡದಲ್ಲಿ, ಬಹುಶಃ ಸುಮಾರು 4,500 ವರ್ಷಗಳ ಹಿಂದೆ ಹುಟ್ಟಿಕೊಂಡಿದೆ. ಇಂಡೋ-ಆರ್ಯರು ಬರುವ ಮೊದಲು ದ್ರಾವಿಡ ಭಾಷಿಕರು ಭಾರತೀಯ ಉಪಖಂಡದಲ್ಲಿ ವಾಸಿಸುತ್ತಿದ್ದರು.ದ್ರಾವಿಡ ಭಾಷೆಗಳನ್ನು ಈ ಪ್ರದೇಶದ ಸ್ಥಳೀಯವೆಂದು ಪರಿಗಣಿಸಲಾಗಿದೆ . ತಮಿಳು, ಮಲಯಾಳಂ ಮತ್ತು ತೆಲುಗು ಮುಂತಾದ ಇತರ ದ್ರಾವಿಡ ಭಾಷೆಗಳೊಂದಿಗೆ ಕನ್ನಡವು ದಕ್ಷಿಣ ದ್ರಾವಿಡ ಶಾಖೆಯ ಭಾಗವಾಗಿದೆ ಮತ್ತು ಅವು ಸಾಮಾನ್ಯ ಪೂರ್ವಜರನ್ನು ಹಂಚಿಕೊಂಡರೂ, ಅವು ಕಾಲಾನಂತರದಲ್ಲಿ ಬೇರೆಡೆಗೆ ತಿರುಗಿದವು.ಮೂಲ-ದಕ್ಷಿಣ ದ್ರಾವಿಡ: ಕನ್ನಡ ಮತ್ತು ತಮಿಳು, ಇತರ ದಕ್ಷಿಣ ದ್ರಾವಿಡ ಭಾಷೆಗಳೊಂದಿಗೆ, ಮೂಲ-ದಕ್ಷಿಣ ದ್ರಾವಿಡ ಎಂಬ ಸಾಮಾನ್ಯ ಪೂರ್ವಜರಿಂದ ಕವಲೊಡೆದಿವೆ ಎಂದು ನಂಬಲಾಗಿದೆ ಎಂದು ಡಾ.ಸಿ. ಶರತ್ ಕುಮಾರ್ ಹೇಳಿದರು.