ಲಕ್ಷ್ಮೇಶ್ವರ: ಜಿಲ್ಲೆಯ ಮಕ್ಕಳು ಚೆಸ್ ಕ್ರೀಡೆಯಲ್ಲಿ ಮುಂದೆ ಬರಬೇಕು ಎನ್ನುವ ಉದ್ದೇಶದಿಂದ ಗದಗ ಜಿಲ್ಲಾ ಚೆಸ್ ಅಸೋಸಿಯೇಶನ್ ವತಿಯಿಂದ ರಾಜ್ಯ ಮಟ್ಟದ ಮುಕ್ತ ಚೆಸ್ ಪಂದ್ಯಾವಳಿಯನ್ನು 2025ರ ಜೂನ್ 29ರಂದು ಲಕ್ಷ್ಮೇಶ್ವರ ಪಟ್ಟಣದಲ್ಲಿ ಆಯೋಜಿಸಲಾಗಿದೆ ಎಂದು ಗದಗ ಜಿಲ್ಲಾ ಚೆಸ್ ಅಸೋಸಿಯೇಶನ್ ಅಧ್ಯಕ್ಷ ಗಿರೀಶ ಅಗಡಿ ಹೇಳಿದರು.
ಈ ವೇಳೆ ದೈಹಿಕ ಶಿಕ್ಷಣ ಶಿಕ್ಷಕ ಎಂ.ಐ. ಕಣಕೆ ಮಾತನಾಡಿ, ಪಂದ್ಯಾವಳಿಯಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆಯುವ ಮಕ್ಕಳಿಗೆ ಸೂಕ್ತ ಬಹುಮಾನ ಹಾಗೂ ಟ್ರೋಫಿ ನೀಡಲಾಗುವುದು. ಅಲ್ಲದೆ ರಾಷ್ಟ್ರ ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಮಕ್ಕಳಿಗೆ ಈ ಕ್ರೀಡಾಕೂಟವು ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಹೇಳಿದರು.
ಭಾಗವಹಿಸುವವರು ತಮ್ಮ ಹೆಸರು ನೊಂದಾಯಿಸಲು ಈ ಕೆಳಗಿನ ವ್ಯಕ್ತಿಗಳನ್ನು ಸಂಪರ್ಕಿಸಲು ಕೋರಿದೆ. ಪ್ರಮೋದರಾಜ್ ಮೋರೆ -9844042170 ಹಾಗೂ ಎಂ.ಐ. ಕಣಕೆ- 9945859815. ಈ ವೇಳೆ ಗದಗ ಜಿಲ್ಲಾ ಚೆಸ್ ಅಸೋಸಿಯೇಶನ್ ಗೌರವಾಧ್ಯಕ್ಷ ಬಾಬುರಾವ್ ವರ್ಣೇಕರ ಮಾತನಾಡಿದರು.ಪೂರ್ವಭಾವಿ ಸಭೆಯಲ್ಲಿ ಎಸ್.ಎಂ. ಉಮ್ಮಣ್ಣವರ, ಎಎಸ್‌ಐ ನಿಸಾರ್ ಅಹ್ಮದ ಮೌಲ್ವಿ ಮಂಜುನಾಥ ಅಂಗಡಿ, ಶ್ರೀಕಾಂತ ಪೂಜಾರ, ಎ.ಜಿ. ಬೂದಿಹಾಳ, ರಮೇಶ ಗಾಂಜಿ, ಎಸ್.ಪಿ. ಕಟ್ಟೆಣ್ಣವರ ಇದ್ದರು. ಆದೇಶ ಹುಲಗೂರ ಸ್ವಾಗತಿಸಿ, ವಂದಿಸಿದರು.