ಕನ್ನಡಪ್ರಭ ವಾರ್ತೆ ಪಾಂಡವಪುರ
ಎರಡು ದಿನಗಳ ಕಾಲ ನಡೆದ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಲಾನ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಬಾಲಕರು ಹಾಗೂ ಬಾಲಕಿಯರ ಪ್ರತ್ಯೇಕ ಪಂದ್ಯಾವಳಿ ನಡೆಸಿದರು. ಬಾಲಕರ ವಿಭಾಗದಿಂದ 13 ತಂಡ ಹಾಗೂ ಬಾಲಕಿಯರ ವಿಭಾಗದ 8 ತಂಡಗಳು ಪಾಲ್ಗೊಂಡಿದ್ದವು.
ಬಾಲಕಿಯರ ವಿಭಾಗದಲ್ಲಿ ಅಂತಿಮವಾಗಿ ಬೆಂಗಳೂರು ಉತ್ತರ ಹಾಗೂ ಮೈಸೂರು ತಂಡಗಳು ಮುಖಾಮುಖಿಯಾದವು. ಎರಡು ತಂಡಗಳು ಸಮಬಲದಿಂದ ಹೋರಾಟ ನಡೆಸಿ ಅಂತಿಮವಾಗಿ ಬೆಂಗಳೂರು ಉತ್ತರ ತಂಡ ಗೆಲುವು ಸಾಧಿಸಿ ಪ್ರಥಮ ಸ್ಥಾನ ಪಡೆದುಕೊಂಡಿತು. ಮೈಸೂರು ತಂಡ ಸೋತು ದ್ವಿತೀಯ ಸ್ಥಾನ ಪಡೆದುಕೊಂಡಿತು.ಬಾಲಕರ ವಿಭಾಗದಲ್ಲಿ ಬೆಂಗಳೂರು ದಕ್ಷಿಣಿ ಮತ್ತು ಮಂಡ್ಯ ತಂಡಗಳು ಸೆಣಸಾಟ ನಡೆಸಿ ಅಂತಿಮವಾಗಿ ಬೆಂಗಳೂರು ದಕ್ಷಿಣ ತಂಡ ಗೆಲುವು ಸಾಧಿಸಿ ಪ್ರಥಮ ಸ್ಥಾನಗಳಿಸಿತು. ಸೋತ ಮಂಡ್ಯ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ವಿಜೇತ ತಂಡಗಳಿಗೆ ಟ್ರೋಪಿ, ಮೆಡಲ್, ಪ್ರಮಾಣ ಪತ್ರ ನೀಡಿ ಅಭಿನಂಧಿಸಿದರು.
ಉಪ ನಿರ್ದೇಶಕ ಚಲುವಯ್ಯ ಮಾತನಾಡಿ, ಟೆನ್ನಿಸ್ ಪಂದ್ಯಾವಳಿಯಲ್ಲಿ ಅಂತಿಮವಾಗಿ ಎರಡು ವಿಭಾಗದಲ್ಲೂ ಬೆಂಗಳೂರು ಉತ್ತರ ಹಾಗೂ ಬೆಂಗಳೂರು ದಕ್ಷಿಣ ತಂಡಗಳು ಗೆಲುವು ಸಾಧಿಸಿವೆ. ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ ಸೋತ ತಂಡಗಳು ಕುಗ್ಗದೆ ಗೆದ್ದ ತಂಡಗಳು ಹಿಗ್ಗದೆ ಮುನ್ನಡೆಯಬೇಕು ಸೋಲೆ ಗೆಲುವೆ ಎಂಬಂತೆ ಮುನ್ನಡೆಯಬೇಕು ಎಂದರು.
ಈ ವೇಳೆ ಆಡಳಿತಾಧಿಕಾರಿ ಪಿ.ಅಕ್ಷಯ್, ಪ್ರಾಂಶುಪಾಲೆ ಸೌಮ್ಯ, ಸಂಯೋಜಕ ಗುರುಸ್ವಾಮಿ, ನಾಗರಾಜು, ಉಪನ್ಯಾಸಕ ಚಂದ್ರಶೇಖರ್, ಮಾದೇಶ್, ಚಲುವೇಗೌಡ, ಮರೀಗೌಡ, ಸಿದ್ದರಾಜು, ಎಲೆಕೆರೆ ಚಂದ್ರಶೇಖರ್ ಇದ್ದರು.,