ಕನ್ನಡಪ್ರಭ ವಾರ್ತೆ ಬ್ರಹ್ಮಾವರ
ಇಲ್ಲಿನ ಜಿಎಂ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲಿನಲ್ಲಿ ಸತತ ೧೨ನೇ ಬಾರಿಗೆ ರಾಜ್ಯಮಟ್ಟದ ಅಂತರ್ ಶಾಲಾ ರಸಪ್ರಶ್ನೆ ಸ್ಪರ್ಧೆ ‘ಜಿಎಂ ಕ್ವಿಜ್ ಫೆಸ್ಟ್’ ಆಯೋಜಿಸಿತ್ತು.ಬೈಂದೂರಿನ ತ್ರಾಸಿ ಡಾನ್ ಬಾಸ್ಕೋ ಸ್ಕೂಲಿನ ಪ್ರಾಂಶುಪಾಲ ಫಾ. ಮ್ಯಾಕ್ಸಿಮ್ ಡಿಸೋಜ, ‘ಜಿಎಂ ಕ್ವಿಜ್ ಫೆಸ್ಟ್’ ಉದ್ಘಾಟಿಸಿ ಮಾತನಾಡಿ, ಗೆಲ್ಲುವುದಕ್ಕಿಂತ ಜ್ಞಾನ ಸಂಪಾದನೆ ಮುಖ್ಯವಾದದ್ದು, ಇಂತಹ ಸ್ಪರ್ಧೆಗಳು ವಿದ್ಯಾರ್ಥಿಗಳ ಕ್ರಿಯಾತ್ಮಕ ಕಲಿಕೆಗೆ ಉತ್ತೇಜನ ನೀಡುತ್ತದೆ. ಜಿಎಂ ಶಾಲೆ ಕಲಿಕೆಗೆ ಉತ್ತಮ ಸ್ಥಳವಾಗಿದ್ದು, ಪ್ರತೀವರ್ಷವೂ ಹೊಸ ಕಲಿಕಾ ಯೋಜನೆಗಳನ್ನು ಕೈಗೊಳ್ಳುತ್ತಿದೆ ಎಂದರು.ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿ ಲೋಕೇಶ್ ಸಿ., ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಮಾಣಪತ್ರ ಪ್ರದಾನ ಮಾಡಿ, ರಸಪ್ರಶ್ನೆಯು ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಜ್ಞಾನವನ್ನು ಅಭಿವೃದ್ಧಿಪಡಿಸುತ್ತದೆ. ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳ ಜೊತೆ ಸ್ಪರ್ಧೆ ನಡೆಸುವುದರಿಂದ ಆಯಾ ಜಿಲ್ಲೆಗಳ ವಿದ್ಯಾರ್ಥಿಗಳ ಜ್ಞಾನ ಮಟ್ಟವನ್ನು ಅಳೆಯಲು ಸಹಕಾರಿಯಾಗುತ್ತದೆ. ಸ್ಪರ್ಧೆಗಳಲ್ಲಿ ಸೋಲು ಗೆಲುವಿಗಿಂತ ಭಾಗವಹಿಸುವಿಕೆ ಅತೀ ಮಖ್ಯವೆಂದರು. ಶಾಲಾ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ರಾಜ್ಯದ ವಿವಿಧ ಶಾಲೆಗಳಿಂದ ಆಗಮಿಸಿದ ಎಲ್ಲಾ ಸ್ಪರ್ಧಿಗಳಿಗೆ ವಿಜೇತರಿಗೆ ಅಭಿನಂದನೆ ಸಲ್ಲಿಸಿದರು. ಗ್ರೇ ಕ್ಯಾಪ್ಸ್‌ನ ಕು. ರಶ್ಮಿ ಫುರ್ಟಾಡೋ ಸ್ಪರ್ಧೆಯನ್ನು ಆಕರ್ಷಕವಾಗಿ ನಿರ್ವಹಿಸಿದರು.ಸ್ಪರ್ಧೆಯಲ್ಲಿ ರಾಜ್ಯದ ಸುಮಾರು ೨೫ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರು ಭಾಗವಹಿಸಿದ್ದರು. ಶಿಕ್ಷಕರ ವಿಭಾಗದಲ್ಲಿ ಸೈಲಾಸ್ ಇಂಟರ್ ನ್ಯಾಷನಲ್ ಸ್ಕೂಲ್ ಉಡುಪಿ ಪ್ರಥಮ, ಟ್ರಿನಿಟಿ ಸೆಂಟ್ರಲ್ ಸ್ಕೂಲ್ ಪೆರಂಪಳ್ಳಿ ದ್ವಿತೀಯ ಹಾಗೂ ವಿದ್ಯಾರ್ಥಿಗಳ ವಿಭಾಗದಲ್ಲಿ ಮಾಧವ ಕೃಪಾ ಸ್ಕೂಲ್ ಮಣಿಪಾಲ್ ಪ್ರಥಮ, ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ಬಿಜೈ ಮಂಗಳೂರು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್, ಜಿ. ಎಮ್. ಗ್ಲೋಬಲ್ ಸ್ಕೂಲಿನ ಆಡಳಿತ ನಿರ್ದೇಶಕ ಪ್ರಣವ್ ಶೆಟ್ಟಿ, ಶಾಲಾಡಳಿತ ಮಂಡಳಿಯ ಸದಸ್ಯೆ ತಾರಾ ಪ್ರಕಾಶ್ಚಂದ್ರ ಶೆಟ್ಟಿ, ಶಿಕ್ಷಕರಕ್ಷಕ ಸಂಘದ ಅಧ್ಯಕ್ಷೆ ಅನೂಷಾ ಸುಬ್ರಹ್ಮಣ್ಯಂ, ಶ್ರೀಮಾ ಪ್ರಣವ್ ಶೆಟ್ಟಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.