ರಾಜ್ಯಮಟ್ಟದ ರಸಪ್ರಶ್ನೆ: ಸಂವಿಧಾನ ಶಿಲ್ಪಿ ತಂಡ ಪ್ರಥಮ

KannadaprabhaNewsNetwork | Published : Apr 15, 2025 12:48 AM

ಸಾರಾಂಶ

ಬಿ.ಆರ್. ಅಂಬೇಡ್ಕರ್ ಆಶಯದಂತೆ ಎಲ್ಲರೂ ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು.

ಕನ್ನಡಪ್ರಭ ವಾರ್ತೆ ಕುರುಗೋಡು

ಬಿ.ಆರ್. ಅಂಬೇಡ್ಕರ್ ಆಶಯದಂತೆ ಎಲ್ಲರೂ ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು ಎಂದು ಶಾಸಕ ಜೆ.ಎನ್. ಗಣೇಶ್ ಹೇಳಿದರು.

ಪಟ್ಟಣದಲ್ಲಿ ತಾಲೂಕು ಆಡಳಿತ, ಪೊಲೀಸ್ ಇಲಾಖೆ ಮತ್ತು ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಬದುಕು ಬರಹ ಕುರಿತು ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

ಡಿವೈಎಸ್ಪಿ ಪ್ರಸಾದ್ ಗೋಖಲೆ ಮಾತನಾಡಿ, ವಿಶ್ವವನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡುವ ಶಕ್ತಿ ಶಿಕ್ಷಣಕ್ಕಿದೆ. ಆ ಸತ್ಯವನ್ನು ಅರಿತಿದ್ದ ಬಿ.ಆರ್. ಅಂಬೇಡ್ಕರ್ ಅವರು ಅಂದಿನ ಸಾಮಾಜಿಕ ಕಟ್ಟುಪಾಡುಗಳನ್ನು ಮೀರಿ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಲು ಹೆಚ್ಚು ಪರಿಶ್ರಮಪಟ್ಟಿದ್ದರು ಎಂದರು.

ಅಂಬೇಡ್ಕರ್ ಅವರ ಜ್ಞಾನದ ಪ್ರತೀಕವಾಗಿರುವ ನಮ್ಮ ದೇಶದ ಸಂವಿಧಾನ ಇಡೀ ವಿಶ್ವವನ್ನು ನಮ್ಮತ್ತ ತಿರುಗಿ ನೋಡುವಂತೆ ಮಾಡಿದೆ ಎಂದರು.

ಸಿಪಿಐ ವಿಶ್ವನಾಥ ಕೆ. ಹಿರೇಗೌಡರ್ ಮಾತನಾಡಿದರು. ರಸಪ್ರಶ್ನೆ ಸ್ಪರ್ಧೆಗೆ ಆಯ್ಕೆ ಮಾಡಲು ಪೂರ್ವಭಾವಿ ಪರೀಕ್ಷೆ ನಡೆಸಲಾಯಿತು.

ಜಿಲ್ಲೆಯ ವಿವಿಧ ಭಾಗಗಳಿಂದ ೪೨೪ ಜನರು ಭಾಗವಹಿಸಿದ್ದರು. ಅವರಲ್ಲಿ ೧೨ ಜನರನ್ನು ಸ್ಪರ್ಧೆಗೆ ಆಯ್ಕೆಯಾಗಿದ್ದರು. ಆರು ತಂಡಗಳನ್ನು ರಚಿಸಿ 3 ವಿವಿಧ ಹಂತಗಳಲ್ಲಿ ರಸಪ್ರಶ್ನೆಗಳನ್ನು ಕೇಳುವ ಮೂಲಕ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಆಯ್ಕೆಮಾಡಲಾಯಿತು.

ಸಂವಿಧಾನ ಶಿಲ್ಪಿ ತಂಡದ ರ್ವಾಯಿ ಬಸವರಾಜ ಮತ್ತು ಸಿಂಧನೂರಿನ ತಾಯಪ್ಪ, ವಿಶ್ವಜ್ಞಾನಿ ತಂಡದ ಎಮ್ಮಿಗನೂರಿನ ರಾಜಮ್ಮ ಮತ್ತು ಯಾದಗಿರಿಯ ದೇವರಾಜ, ಮಹಾನಾಯಕ ತಂಡದ ಕಲ್ಲುಕಂಭದ ಮಧುಸೂಧನ ಮತ್ತು ಕುಡತಿನಿಯ ಹೂಗಾರ್ ಬಸವರಾಜ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದು, ₹೨೫ ಸಾವಿರ, ₹೧೫ಸಾವಿರ ಮತ್ತು ₹೧೦ಸಾವಿರ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ಪಡೆದುಕೊಂಡರು.

ತಹಶೀಲ್ದಾರ್ ನರಸಪ್ಪ ತಹಶೀಲ್ದಾರ್, ಗ್ರೇಡ್-೨ ತಹಶೀಲ್ದಾರ್ ಮಲ್ಲೇಶಪ್ಪ, ಪಿಎಸ್‌ಐ ಸುಪ್ರಿತ್ ವಿರೂಪಾಕ್ಷಪ್ಪ, ಬಿಇಒ ಸಿದ್ಧಲಿಂಗಮೂರ್ತಿ, ಕುಡತಿನಿ ಪಿಎಸ್ಐ ಶಾಂತಕುಮಾರ್ ಕಂದಾಯ ನಿರೀಕ್ಷಕ ಸುರೇಶ್ ಮತ್ತು ಭದ್ರಯ್ಯ, ಪುರಸಭೆ ಅಧ್ಯಕ್ಷ ಟಿ.ಶೇಖಣ್ಣ ಮತ್ತು ಉಪಾಧ್ಯಕ್ಷ ಚನ್ನಪಟ್ಟಣ ಮಲ್ಲಿಕಾರ್ಜುನ, ಕಸಾಪ ಅಧ್ಯಕ್ಷ ಮಸೂತಿ ನಾಗರಾಜ, ಡಿ.ಎಂ. ಮಲ್ಲಿಕಾರ್ಜುನ, ನೌಕರರ ಸಂಘದ ಅಧ್ಯಕ್ಷ ಗುಂಡಪ್ಪನವರ ನಾಗರಾಜ್, ಗವಿಸಿದ್ದಪ್ಪ ಮತ್ತು ಬಸವರಾಜ ಇದ್ದರು.---

ಕುರುಗೋಡು ಪಟ್ಟಣದ ಜರುಗಿದ ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡದ ಜೀರ್ ಬಸವರಾಜ ಮತ್ತು ತಾಯಪ್ಪ ಬಹುಮಾನ ಸ್ವೀಕರಿಸಿದರು.

Share this article